Log In
BREAKING NEWS >
2019ರ ವಿಶ್ವ ಸುಂದರಿ ಪ್ರಕಟ: ಭಾರತದ ಸುಮನ್ ರಾವ್ ದ್ವಿತೀಯ ರನ್ನರ್ ಅಪ್....ಫಾಸ್ಟ್ ಟ್ಯಾಗ್ ಕಡ್ಡಾಯ: ಲಾಸ್ಟ್ ಸ್ಟಾಪ್ ಬದಲಾಯಿಸಿದ ಖಾಸಗಿ ಬಸ್ ಗಳು...

ಭಾರತೀಯ ವಾಯುಪಡೆ ನೂತನ ಮುಖ್ಯಸ್ಥರಾಗಿ ಆರ್‌ಕೆಎಸ್‌ ಭದೌರಿಯಾ ನೇಮಕ

ದೆಹಲಿ: ಏರ್ ಮಾರ್ಷಲ್ ರಾಕೇಶ್‌ ಕುಮಾರ್‌ ಸಿಂಗ್‌ ಭದೌರಿಯಾ ಅವರನ್ನು ಭಾರತೀಯ ವಾಯುಪಡೆಯ ಹೊಸ ಮುಖ್ಯಸ್ಥರನ್ನಾಗಿ ಕೇಂದ್ರ ಸರ್ಕಾರ ಗುರುವಾರ ನೇಮಿಸಿದೆ.

ಪ್ರಸ್ತುತ ವಾಯು ಸೇನಾ ಸಿಬ್ಬಂದಿ ವಿಭಾಗದ ಉಪಾಧ್ಯಕ್ಷರಾಗಿರುವ ಭದೌರಿಯಾ ಅವರು, ಸೆಪ್ಟೆಂಬರ್ 30ರಂದು ನಿವೃತ್ತರಾಗಲಿರುವ ವಾಯುಪಡೆ ಮುಖ್ಯಸ್ಥ ಬಿ.ಎಸ್.ಧನೋವಾ ಅವರ ಸ್ಥಾನವನ್ನು ಅಲಂಕರಿಸಲಿದ್ದಾರೆ.

ಮೇ 1 ರಂದು ಏರ್ ಮಾರ್ಷಲ್ ಭದೌರಿಯಾ ಅವರು ಏರ್ ಮಾರ್ಷಲ್ ಅನಿಲ್ ಖೋಸ್ಲಾ ಅವರ ನಂತರ ಭಾರತೀಯ ವಾಯುಪಡೆಯ ಉಪ ಮುಖ್ಯಸ್ಥರಾಗಿ ಅಧಿಕಾರ ವಹಿಸಿಕೊಂಡರು.

ಇದಕ್ಕೂ ಮೊದಲು ಭದೌರಿಯಾ ಐಎಎಫ್‌ನ ಬೆಂಗಳೂರು ಮೂಲದ ತರಬೇತಿ ಕಮಾಂಡ್‌ನ ಮುಖ್ಯಸ್ಥರಾಗಿದ್ದರು ಮತ್ತು ಉಪ ಮುಖ್ಯಸ್ಥರಾಗಿ ಅವರ ಹಿಂದಿನ ಅವಧಿಯಲ್ಲಿ, ಫ್ರಾನ್ಸ್‌ನೊಂದಿಗಿನ 36 ರಫೇಲ್ ಯುದ್ಧ ವಿಮಾನ ಒಪ್ಪಂದಕ್ಕೆ ಅವರು ಭಾರತೀಯ ಮಾತುಕತೆ ತಂಡದ ಅಧ್ಯಕ್ಷರಾಗಿದ್ದರು.

1980ರ ಜೂನ್ 15 ರಂದು ವಾಯುಪಡೆಯ ಗೌರವದ ಜೊತೆ ಅವರು ವಾಯುಸೇನೆಯ ಫೈಟರ್ ವಿಭಾಗಕ್ಕೆ ಸೇರಿದ್ದರು.
ಅವರು ರಾಷ್ಟ್ರೀಯ ರಕ್ಷಣಾ ಅಕಾಡೆಮಿಯ ಕಮಾಂಡೆಂಟ್, ಸೆಂಟ್ರಲ್ ಏರ್ ಕಮಾಂಡ್‌ನ ಹಿರಿಯ ವಾಯು ಸಿಬ್ಬಂದಿ ಅಧಿಕಾರಿ ಮತ್ತು 2016 ರ ಜನವರಿ 28 ರಿಂದ ಫೆಬ್ರವರಿ 28 ರವರೆಗೆ ಹಲವಾರು ಪ್ರಮುಖ ಹುದ್ದೆಗಳನ್ನು ಅಲಂಕರಿಸಿದ್ದರು.

ಭದೌರಿಯಾ ಅವರು ಮಾರ್ಚ್ 1, 2017 ರಿಂದ ದಕ್ಷಿಣ ಏರ್ ಕಮಾಂಡ್‌ನ ಏರ್ ಆಫೀಸರ್ ಕಮಾಂಡಿಂಗ್-ಇನ್-ಚೀಫ್ (ಎಒಸಿ-ಇನ್-ಸಿ) ಯಾಗಿಯೂ ಸೇವೆ ಸಲ್ಲಿಸಿದ್ದರು. ಅವರು ಆಗಸ್ಟ್ 1, 2018 ರಂದು ಬೆಂಗಳೂರು ಮೂಲದ ತರಬೇತಿ ಕಮಾಂಡ್ ಮುಖ್ಯಸ್ಥರಾಗಿ ಅಧಿಕಾರ ವಹಿಸಿಕೊಂಡಿದ್ದರು.

ಭದೌರಿಯಾ ಅವರು ಪುಣೆಯ ರಾಷ್ಟ್ರೀಯ ರಕ್ಷಣಾ ಅಕಾಡೆಮಿಯ ಹಳೆಯ ವಿದ್ಯಾರ್ಥಿಯಾಗಿದ್ದು, ಸುಮಾರು 4000 ಗಂಟೆಗಳ ಕಾಲ ಹಾರಾಟ ನಡೆಸಿದ್ದಾರೆ.

No Comments

Leave A Comment