Log In
BREAKING NEWS >
ಕಲ್ಯಾಣಪುರ ಶ್ರೀವೆ೦ಕಟರಮಣ ದೇವಸ್ಥಾನದ 91ನೇ ಭಜನಾ ಸಪ್ತಾಹ ಮಹೋತ್ಸವದ ನಗರ ಭಜನೆಯು ಭಾನುವಾರ ಸ೦ಜೆ 4.30ಕ್ಕೆ ದೇವಸ್ಥಾನದಿ೦ದ ಹೊರಡಲಿದೆ..........ಉಡುಪಿಯಲ್ಲಿ ಡಿಸೆ೦ಬರ್ 13ರಿ೦ದ 15 ವರೆಗೆ ಶ್ರೀಕೃಷ್ಣಮಠದ ರಾಜಾ೦ಗಣದಲ್ಲಿ ತುಳು ಶಿವಳ್ಳಿ ಬ್ರಾಹ್ಮಣರ ಪ್ರಥಮ ವಿಶ್ವಸಮ್ಮೇಳನ ಜರಗಲಿದೆ....

ಎಸ್ ಬಿ ಐ ಬ್ಯಾಂಕಿನ ಕೊಡುಗೆಯಿಂದ ನಿರ್ಮಿತವಾದ ಭೋಜನಶಾಲೆಯ ಕೈತೊಳೆಯುವ ಸ್ಥಳದ ಗ್ರಾನೈಟ್ ನೆಲಹಾಸು ಮತ್ತು ನೂತನ ನಳ್ಳಿ ನೀರಿನ ವ್ಯವಸ್ಥೆ ಉದ್ಘಾಟನೆ

ಉಡುಪಿ:ಶ್ರೀಕೃಷ್ಣ ಮಠದಲ್ಲಿ ಭಾರತೀಯ ಸ್ಟೇಟ್ ಬ್ಯಾಂಕಿನ ಕೊಡುಗೆಯಿಂದ ನಿರ್ಮಿತವಾದ ಭೋಜನಶಾಲೆಯ ಕೈತೊಳೆಯುವ ಸ್ಥಳದ ಗ್ರಾನೈಟ್ ನೆಲಹಾಸು ಮತ್ತು ನೂತನ ನಳ್ಳಿ ನೀರಿನ ವ್ಯವಸ್ಥೆಯನ್ನು,ಉಡುಪಿ ಕೆನರಾ ರೆಫ್ರಿಜೆರೇಟರ್ಸ್ ನವರು ಕೊಡುಗೆಯಾಗಿ ನೀಡಿದ ಕುಡಿಯುವ ಬಿಸಿನೀರು,ತಣ್ಣೇರು ಹಾಗೂ ಶೀತಲೀಕರಣದ ನೀರಿನ ಘಟಕವನ್ನು ಪರ್ಯಾಯ ಪಲಿಮಾರು ಶ್ರೀ ವಿದ್ಯಾಧೀಶ ತೀರ್ಥ ಶ್ರೀಪಾದರು ಹಾಗೂ ಪಲಿಮಾರು ಕಿರಿಯ ಶ್ರೀವಿದ್ಯಾರಾಜೇಶ್ವರತೀರ್ಥ ಶ್ರೀಪಾದರು ದೀಪ ಬೆಳಗಿಸಿದರು.

ಇದಕ್ಕೆ ಬೇಕಾದ ಸ್ವಚ್ಛತೆಗಾಗಿ ಆಧುನಿಕ ತಂತ್ರಜ್ಞಾನದ ಕೊಳವೆಗಳ ವ್ಯವಸ್ಥೆಯನ್ನು ನೀಡಿದ ಬೆಂಗಳೂರಿನ ಹೋಟೆಲ್ ಉದ್ಯಮಿಗಳಾದ ಗೋಪಾಡಿ ಶ್ರೀನಿವಾಸ್ ರಾವ್ ರವರು ಉದ್ಘಾಟನೆ ಮಾಡಿದರು.ಈ ಸಂದರ್ಭದಲ್ಲಿ ಕೆನರಾ ರೆಫ್ರಿಜೆರೇಟರ್ಸ್ ನ ಕೆ. ಗೋಪಾಲ್ , ಕೆ.ವಿಜಯ್, ಮಠದ ಪಿ.ಆರ್.ಓ ಶ್ರೀಶ ಭಟ್ ಕಡೆಕಾರ್, ಅಮ್ರಿತ್ ಕುಮಾರ್ ಮೊದಲಾದವರು ಉಪಸ್ಥಿತರಿದ್ದರು.

No Comments

Leave A Comment