Log In
BREAKING NEWS >
ಕಲ್ಯಾಣಪುರ ಶ್ರೀವೆ೦ಕಟರಮಣ ದೇವಸ್ಥಾನದಲ್ಲಿ 91ನೇ ಭಜನಾ ಸಪ್ತಾಹ ಮಹೋತ್ಸವಕ್ಕೆ ಅದ್ದೂರಿಯ ಚಾಲನೆ.......ಉಡುಪಿಯಲ್ಲಿ ಡಿಸೆ೦ಬರ್ 13ರಿ೦ದ 15 ವರೆಗೆ ಶ್ರೀಕೃಷ್ಣಮಠದ ರಾಜಾ೦ಗಣದಲ್ಲಿ ತುಳು ಶಿವಳ್ಳಿ ಬ್ರಾಹ್ಮಣರ ಪ್ರಥಮ ವಿಶ್ವಸಮ್ಮೇಳನ ಜರಗಲಿದೆ....

ಮೂರು ದಿನದಿಂದ ಕೆಟ್ಟು ನಿಂತ ಬೋಟ್‍ನಲ್ಲಿದ್ದ 23 ಮೀನುಗಾರರ ರಕ್ಷಣೆ

ಕಾರವಾರ: ಯಾಂತ್ರಿಕ ಬೋಟಿನಲ್ಲಿ ತಾಂತ್ರಿಕ ದೋಷದಿಂದಾಗಿ ಅರಬ್ಬಿ ಸಮುದ್ರದಲ್ಲಿ ಮೂರು ದಿನಗಳಿಂದ ಕೆಟ್ಟು ನಿಂತಿದ್ದ ಮೀನುಗಾರಿಕಾ ಬೋಟ್‍ನಲ್ಲಿದ್ದ 23 ಮೀನುಗಾರರನ್ನು ಕೋಸ್ಟ್ ಗಾರ್ಡ್ ಸಿಬ್ಬಂದಿ ರಕ್ಷಣೆ ಮಾಡಿದ್ದಾರೆ.

ಭಟ್ಕಳ ಬಂದರಿನಿಂದ NFG ಹೆಸರಿನ ಬೋಟ್ ಮೀನುಗಾರಿಕೆಗೆ ತೆರಳಿತ್ತು. ಅರಬ್ಬಿ ಸಮುದ್ರದ 30 ನಾಟಿಕಲ್ ಮೈಲು ದೂರದಲ್ಲಿ ಇಂಜಿನ್ ಕೆಡುವುದರ ಜೊತೆ ಬ್ಯಾಟರಿ ಕೂಡ ಕೆಟ್ಟು ಹೋಗಿತ್ತು. ಇದರಿಂದ ಜಿಪಿಎಸ್ ಮತ್ತು ವೈರಲೆಸ್ ಸಂಪರ್ಕ ಸ್ಥಗಿತವಾಗಿ ಯಾರನ್ನೂ ಸಂಪರ್ಕ ಮಾಡಲು ಸಾಧ್ಯವಾಗಲಿಲ್ಲ.

ಸಮುದ್ರದಲ್ಲಿ ಮೂರು ದಿನಗಳವರೆಗೆ 23 ಮೀನುಗಾರರು ಸಂಕಷ್ಟದಿಂದ ಕಾಯುತ್ತಿದ್ದರು. ಮೂರು ದಿನಗಳ ನಂತರ ಮೀನುಗಾರಿಕಾ ಬೋಟ್ ಈ ಭಾಗದಲ್ಲಿ ಬಂದಿದೆ. ನಂತರ ವೈರಲೆಸ್ಸ್ ಸಂಪರ್ಕ ಮಾಡಿ ಇಂದು ಎಲ್ಲರನ್ನು ರಕ್ಷಣೆ ಮಾಡಲಾಗಿದ್ದು ಭಟ್ಕಳ ಬಂದರಿಗೆ ಕರೆತರಲಾಯಿತು.

No Comments

Leave A Comment