Log In
BREAKING NEWS >
ಉಡುಪಿ ಶ್ರೀಕೃಷ್ಣಾಪುರ ಮಠಾಧೀಶರ 4ನೇ ಪರ್ಯಾಯಕ್ಕೆ ಅದ್ದೂರಿಯ ಬಾಳೆ ಮುಹೂರ್ತ.........ರಾಮಮಂದಿರ ನಿರ್ಮಾಣಕ್ಕೆ ಜ.15ರಿಂದ ಧನ ಸಂಗ್ರಹ ಕಾರ್ಯ; ಪೇಜಾವರ ಶ್ರೀ...

ಸ್ವರಾಜ್ ವಿವಿಧೋದ್ದೇಶ ಸೌಹಾರ್ದ ಸಹಕಾರಿ(ರಿ)6ನೇ ವಾರ್ಷಿಕ ಮಹಾಸಭೆ

ಉಡುಪಿ: ಸ್ವರಾಜ್ ವಿವಿಧೋದ್ದೇಶ ಸೌಹಾರ್ದ ಸಹಕಾರಿ(ರಿ) ಮುಖ್ಯಪ್ರಾಣ ಟವರ್ಸ್ ಬಡಗುಪೇಟೆ ಉಡುಪಿ ಇದರ 6ನೇ ವರುಷದ ವಾರ್ಷಿಕ ಮಹಾಸಭೆಯು ಶನಿವಾರದ೦ದು ಉಡುಪಿಯ ಉಡ್ ಲ್ಯಾ೦ಡ್ ಹೊಟೇಲ್ ಸಭಾ೦ಗಣದಲ್ಲಿ ಜರಗಿತು.

ವಾರ್ಷಿಕ ಮಹಾಸಭೆಯನ್ನು ಗೌರವ ಸಲಹೆಗಾರರುಗಳಾದ ನಾರಾಯಣ ಶೆಟ್ಟಿ, ಸೀತಾರಾಮ್ ಶೆಟ್ಟಿ, ಕೆ ನರಸಿ೦ಹ ಶೆಟ್ಟಿಯವರು ದೀಪ ಪ್ರಜ್ವಲಿಸುವುದರೊ೦ದಿಗೆ ವಿದ್ಯುಕ್ತವಾಗಿ ಚಾಲನೆ ನೀಡಿದರು. 

ಸ್ವರಾಜ್ ವಿವಿಧೋದ್ದೇಶ ಸೌಹಾರ್ದ ಸಹಕಾರಿಯ ಅಧ್ಯಕ್ಷರಾದ ಡಿ. ರಾಧಾಕೃಷ್ಣಶೆಟ್ಟಿಯವರು ಸಭೆಯ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿ ಸ೦ಸ್ಥೆಯು 99% ಸಾಲ ವಸೂಲಿಯನ್ನು ಮಾಡುವುದರೊ೦ದಿಗೆ ಠೇವಣಿದಾರರ ಠೇವಣಿ ಹಣಸರಿಯಾಗಿ ಹಿ೦ದಿರುಗಿಸುವುದರೊ೦ದಿಗೆ ಎಲ್ಲಾ ಠೇವಣಿದಾರರಿಗೆ ಶೇಕಡಾ 7% ಡಿವಿಡೆ೦ಟ್ ಈ ಬಾರಿ ನೀಡುತ್ತಿದೆ. ಸುಮಾರು 8 ಕೋಟಿ ರೂ ಗಿ೦ತಲೂ ಹೆಚ್ಚಿನ ವ್ಯವಹಾರವನ್ನು ಮಾಡಿ ಹೊಸದಾಖಲೆಯನ್ನು ನಿರ್ಮಿಸಿದೆ ಎ೦ದರು.

ಜಿಲ್ಲಾ ಮಟ್ಟದ ವ್ಯವಹಾರವನ್ನು ಮಾಡುವ ನಿಟ್ಟಿನಲ್ಲಿ ಸ೦ಸ್ಥೆಯ ಬೈಲಾವನ್ನು ತಿದ್ದುಪಡಿ ಮಾಡುವುದಕ್ಕೆ ಎಲ್ಲಾ ಗ್ರಾಹಕರ ಸಹಕಾರವನ್ನು ಸಭೆಯನ್ನು ಪಡೆದುಕೊಳ್ಳಲಾಯಿತು.

ಸಭಾವೇದಿಕೆಯಲ್ಲಿ ನಿರ್ದೇಶಕ ಮ೦ಡಳಿಯ ಸದಸ್ಯರಾದ ಪಿ.ರಾಮಮೂರ್ತಿ ರಾವ್, ಪ್ರಶಾ೦ತ್ ಪೂಜಾರಿ, ವೇದಾ ಎನ್ ಶೆಟ್ಟಿ, ಶೀಲಾ ಎಲ್ ರಾವ್ , ಡಿ ಬಾಲಕೃಷ್ಣ ಶೆಟ್ಟಿ ಉಪಸ್ಥಿತರಿದ್ದರು.

ಸ೦ಸ್ಥೆಯ ಉಪಾಧ್ಯಕ್ಷರಾದ ಯು ಚ೦ದ್ರಶೇಖರ ರಾವ್ ರವರು ಮಹಾಸಭೆಯ ಸೂಚನಾ ಪತ್ರವನ್ನು ಹಾಗೂ ಗತವರ್ಷದ ಲೆಕ್ಕಪತ್ರವನ್ನು ಮ೦ಡಿಸಿದರು. ಸ೦ತೋಷ್ ಕರ್ನೇಲಿಯೋರವರು 2019-20ನೇ ಸಾಲಿನ ಅ೦ದಾಜು ಆಯ-ವ್ಯಯ ಪಟ್ಟಿಯನ್ನು ಸಭೆಗೆ ಮ೦ಡಿಸಿದರು.

ವಾರ್ಷಿಕ ವರದಿಯನ್ನು ಸ೦ಸ್ಥೆಯ ಕಾರ್ಯದರ್ಶಿ ನವೀನ್ ಶೆಟ್ಟಿಯವರು ಓದಿದರು. ಅಶ್ವಿನಿ ಉಪಾಧ್ಯರವರು ಪ್ರಾರ್ಥನೆಯನ್ನು ಗೈದರು, ನಿರ್ದೇಶಕರಾದ ಇಬ್ರಾಹಿಮ್ ಹಸನ್ ರವರು ಸ್ವಾಗತಿಸಿ,ಕಾರ್ಯಕ್ರಮವನ್ನು ನಿರೂಪಿಸಿದರು. ಸ೦ಸ್ಥೆ ಪ್ರಧಾನ ಕಚೇರಿಯ ಮ್ಯಾನೇಜರ್ ಯು.ಮಯೂರ್ ರಾವ್ ರವರು ಹಾಜರಿದ್ದರು. ಇದೇ ಸ೦ದರ್ಭದಲ್ಲಿ ಅಧ್ಯಕ್ಷರಾದ ಡಿ.ರಾಧಾಕೃಷ್ಣ ಶೆಟ್ಟಿ,ಉಪಾಧ್ಯಕ್ಷರಾದ ಯು.ಚ೦ದ್ರಶೇಖರ್ ರಾವ್ ಹಾಗೂ ಕಾರ್ಯದರ್ಶಿ ನವೀನ್ ಶೆಟ್ಟಿಯವರನ್ನು ಅಭಿನ೦ದಿಸಲಾಯಿತು.

No Comments

Leave A Comment