Log In
BREAKING NEWS >
ಉಡುಪಿ ಶ್ರೀಕೃಷ್ಣಾಪುರ ಮಠಾಧೀಶರ 4ನೇ ಪರ್ಯಾಯಕ್ಕೆ ಅದ್ದೂರಿಯ ಬಾಳೆ ಮುಹೂರ್ತ.........ರಾಮಮಂದಿರ ನಿರ್ಮಾಣಕ್ಕೆ ಜ.15ರಿಂದ ಧನ ಸಂಗ್ರಹ ಕಾರ್ಯ; ಪೇಜಾವರ ಶ್ರೀ...

ಗಡಿಯಲ್ಲಿ ನಿಲ್ಲದ ಪಾಕ್ ಸೈನಿಕರ ಅಟ್ಟಹಾಸ; ಶಾಲೆ, ಜನವಸತಿ ಪ್ರದೇಶದ ಮೇಲೆ ದಾಳಿ

ಪೂಂಚ್/ರಜೌರಿ: ಕಣಿವೆ ರಾಜ್ಯದಲ್ಲಿ ಶಾಂತಿಯನ್ನು ಕದಡಬೇಕೆಂಬ ಹಠಕ್ಕೆ ಬಿದ್ದಿರುವ ಪಾಕಿಸ್ತಾನಿ ಸೇನೆ ಜಮ್ಮು-ಕಾಶ್ಮೀರದ ಗಡಿಭಾಗದಲ್ಲಿ ಕದನ ವಿರಾಮ ಉಲ್ಲಂಘಿಸಿ ನಡೆಸುತ್ತಿರುವ ದಾಳಿಯನ್ನು ಶನಿವಾರವೂ ಮುಂದುವರಿಸಿದೆ.

ಪೂಂಚ್ ಜಿಲ್ಲೆಯ ಮಾಂಧೇರ್ ಮತ್ತು ಬಾಲಕೋಟ್ ಸೆಕ್ಟರ್ ಮತ್ತು ಭೀಮ್ ಭೇರ್ ಗಾಲಿ ಮತ್ತು ಮಂಜಾನ್ ಕೋಟ್ ಸೆಕ್ಟರ್ ಸಮೀಪ ಪಾಕಿಸ್ತಾನ ಸೇನೆ ಅಪ್ರಚೋದಿತ ಗುಂಡಿನ ದಾಳಿ ನಡೆಸುತ್ತಿರುವುದಾಗಿ ಮಾಧ್ಯಮದ ವರದಿ ತಿಳಿಸಿದೆ.

ಗಡಿನಿಯಂತ್ರಣ ರೇಖೆ ಬಳಿ ಇಂದು ಬೆಳಗ್ಗೆಯಿಂದ ಜನವಸತಿ ಪ್ರದೇಶ ಮತ್ತು ಶಾಲೆಗಳನ್ನು ಗುರಿಯಾಗಿರಿಸಿಕೊಂಡು ಪಾಕ್ ಸೇನೆ ಮೋರ್ಟಾರ್ ದಾಳಿ ನಡೆಸುತ್ತಿದೆ. ಏತನ್ಮಧ್ಯೆ ಭಾರತೀಯ ಸೇನೆ ಪ್ರತಿದಾಳಿ ನಡೆಸುವ ಮೂಲಕ ತಕ್ಕ ಉತ್ತರ ನೀಡಿರುವುದಾಗಿ ವರದಿ ವಿವರಿಸಿದೆ.

 

ಕಳೆದ ಎರಡು ದಿನಗಳ ಕಾಲ ಪಾಕ್ ಸೇನೆ ಕದನ ವಿರಾಮ ಉಲ್ಲಂಘಿಸಿ ದಾಳಿ ನಡೆಸಿದ್ದಕ್ಕೆ ಪ್ರತಿಯಾಗಿ ಭಾರತೀಯ ಸೇನೆ ನಡೆಸಿದ ದಾಳಿಯಲ್ಲಿ ಇಬ್ಬರು ಪಾಕ್ ಸೈನಿಕರು ಬಲಿಯಾಗಿದ್ದರು. ಸೆಪ್ಟೆಂಬರ್ 13ರಂದು ಪಾಕ್ ಸೈನಿಕರು ಬಿಳಿ ಬಾವುಟ ಪ್ರದರ್ಶಿಸುವ ಮೂಲಕ ಭಾರತೀಯ ಸೇನೆಗೆ ಶರಣಾಗಿ ಇಬ್ಬರ ಶವಗಳನ್ನು ತೆಗೆದುಕೊಂಡು ಹೋಗಿದ್ದರು.

No Comments

Leave A Comment