Log In
BREAKING NEWS >
ನ್ಯಾಯಬೆಲೆ ಅ೦ಗಡಿಯಲ್ಲಿ ಪಡಿತರ ವಿತರಣೆಗೆಗಾಗಿ ಪರದಾಟ-ರಾಜ್ಯಸರಕಾರದಿ೦ದ ಜನರಿಗೆ ಭಾರೀ ಅನ್ಯಾಯ-ಜನರಿ೦ದ ಆಕ್ರೋಶ ....

ಇನ್ಸ್ ಪೆಕ್ಟರ್ ಹುದ್ದೆಗೆ ರಾಜೀನಾಮೆ ನೀಡಿದ ಕುಸ್ತಿಪಟು ಪೋಗಟ್, ಚುನಾವಣೆಯಲ್ಲಿ ಸ್ಪರ್ಧೆ

ನವದೆಹಲಿ:ಕಾಮೆನ್ ವೆಲ್ತ್ ಪಂದ್ಯಗಳಲ್ಲಿ ಎರಡು ಚಿನ್ನದ ಪದಕ ಮುಡಿಗೇರಿಸಿಕೊಂಡಿದ್ದ ಅಂತಾರಾಷ್ಟ್ರೀಯ ಕುಸ್ತಿಪಟು ಬಬಿತಾ ಪೋಗಟ್ ತಮ್ಮ ಪೊಲೀಸ್ ಹುದ್ದೆಗೆ ರಾಜೀನಾಮೆ ನೀಡಿದ್ದಾರೆ. ಇತ್ತೀಚೆಗಷ್ಟೇ ಬಬಿತಾ ಭಾರತೀಯ ಜನತಾ ಪಕ್ಷಕ್ಕೆ ಸೇರ್ಪಡೆಗೊಂಡಿದ್ದರು.

ಬಬಿತಾ ಪೋಗಟ್ ಅವರ ರಾಜೀನಾಮೆಯನ್ನು ಅಂಗೀಕರಿಸಿರುವುದಾಗಿ ಹರ್ಯಾಣ ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.

ಮೂಲಗಳ ಪ್ರಕಾರ, ಬಬಿತಾ ಪೋಗಟ್ ಅವರು ಮುಂಬರುವ ಹರ್ಯಾಣ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿಯಾಗಿ ಸ್ಪರ್ಧಿಸುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ.

ಬಬಿತಾ ಪೋಗಟ್ ಬಿಜೆಪಿಯಿಂದ ಬಾರ್ಡಾ ಅಥವಾ ಚಾರ್ ಖಿ ದಾದ್ರಿ ವಿಧಾನಸಭಾ ಕ್ಷೇತ್ರದಿಂದ ಅಖಾಡಕ್ಕಿಳಿಯುವ ಸಾಧ್ಯತೆ ಇದೆ ಎನ್ನಲಾಗಿದೆ. ನಾನು ಆಗಸ್ಟ್ 13ರಂದು ರಾಜೀನಾಮೆ ನೀಡಿದ್ದೆ. ಅದು ಈಗ ಅಂಗೀಕಾರಗೊಂಡಿದೆ ಎಂದು ಬಬಿತಾ ಸುದ್ದಿಸಂಸ್ಥೆಯೊಂದರ ಜತೆ ಮಾತನಾಡುತ್ತ ತಿಳಿಸಿದ್ದಾರೆ.

No Comments

Leave A Comment