Log In
BREAKING NEWS >
ಉಡುಪಿ ಶ್ರೀಕೃಷ್ಣಾಪುರ ಮಠಾಧೀಶರ 4ನೇ ಪರ್ಯಾಯಕ್ಕೆ ಅದ್ದೂರಿಯ ಬಾಳೆ ಮುಹೂರ್ತ.........ರಾಮಮಂದಿರ ನಿರ್ಮಾಣಕ್ಕೆ ಜ.15ರಿಂದ ಧನ ಸಂಗ್ರಹ ಕಾರ್ಯ; ಪೇಜಾವರ ಶ್ರೀ...

ಶೃಂಗೇರಿ ಶಾರದಾಂಬೆ ಸನ್ನಿಧಿಯಲ್ಲಿ ಸಿಎಂ ಯಡಿಯೂರಪ್ಪ: ಮಳೆ ನಿಲ್ಲಲೆಂದು ವಿಶೇಷ ಪ್ರಾರ್ಥನೆ

ಶೃಂಗೇರಿ: ರಾಜ್ಯದಲ್ಲಿನ ಭಾರೀ ಮಳೆ, ಪ್ರವಾಹ ಸ್ಥಿತಿಯಿಂದ ಸಾವಿರಾರು ಜನರು ಕಂಗಾಲಾಗಿದ್ದು ಮನೆ ಮಾರುಗಳನ್ನು ಕಳೆದುಕೊಂಡು ನಿರ್ಗತಿಕರಾಗಿದ್ದಾರೆ. ಪ್ರವಾಹದ ಕಾರಣ ಆಸ್ತಿ ಪಾಸ್ತಿ ಭಾರೀ ಪ್ರಮಾಣದಲ್ಲಿ ನಷ್ಟವಾಗಿದೆ. ಈ ಹಿನ್ನೆಲೆಯಲ್ಲಿ ಮಳೆ ನಿಲ್ಲಲಿ, ಪ್ರವಾಹ ತಗ್ಗಲಿ ಎಂದು ಶೃಂಗೇರಿ ಶಾರದಾಂಬೆಯಲ್ಲಿ ಪ್ರಾರ್ಥಿಸಿರುವುದಾಗಿ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಹೇಳೀದ್ದಾರೆ.

ಗುರುವಾರ ಬೆಳಿಗ್ಗೆ ಚಿಕ್ಕಮಗಳೂರು ಜಿಲ್ಲೆ ಶೃಂಗೇರಿ ಗೆ ಆಗಮಿಸಿದ ಸಿಎಂ ಶಾರದಾಂಬೆಗೆ ವಿಶೇಷ ಪೂಜೆ ಸಲ್ಲಿಸಿದ್ದಾರೆ. ಇಲ್ಲಿನ ಗುರುಭವನಕ್ಕೆ ಭೇಟಿ ಕೊಟ್ಟ ಯಡಿಯೂರಪ್ಪ ಭಾರತೀ ತೀರ್ಥ ಸ್ವಾಮೀಜಿ ಹಾಗೂ ವಿಧುಶೇಖರ ಭಾರತಿಗಳ ಆಶೀರ್ವಾದ ಪಡೆದರು.

 

ಈ ವೇಳೆ ಸುದ್ದಿಗಾರರೊಡನೆ ಮಾತನಾಡಿದ ಸಿಎಂ ಯಡಿಯೂರಪ್ಪ ಪ್ರವಾಹದಿಂದ ಹಾನಿಗೊಳಗಾಇರುವ ಕುಸಿದಿರುವ ಮನೆಗಳ ಮರುಇರ್ಮಾಣಕ್ಕೆ ಫೌಂಡೇಷನ್ (ಅಡಿಪಾಯ) ಕಟ್ಟಲು ಸಂತ್ರಸ್ಥರ ಖಾತೆಗೆ ಒಂದು ಲಕ್ಷ ರು. ಹಾಕುವಂತೆ ತಕ್ಷಣವೇ ಆದೇಶ ಹೊರಡಿಸುವುದಾಗಿ ಹೇಳಿದ್ದಾರೆ. ಅಲ್ಲದೆ ಮನೆ ನಿರ್ಮಾಣಕ್ಕಾಗಿ ಐದು ಲಕ್ಷ ಪರಿಹಾರ ಒದಗಿಸುವುದಾಗಿ ಸಹ ನಿಡುವುದಾಗಿ ಹೇಳಿರುವ ಮುಖ್ಯಮಂತ್ರಿ ಸಂತ್ರಸ್ಥರಿಗೆ  ಸರ್ಕಾರ ಎಲ್ಲ ರೀತಿಯ ನೆರವು ನೀಡುತ್ತಿದ್ದು ಕೇಂದ್ರ ಸರ್ಕಾರ ಸಹ ರಾಜ್ಯದ ಸಂಕಷ್ಟಕ್ಕೆ ಸ್ಪಂದಿಸುತ್ತಿದೆ ಎಂದರು. ಅಲ್ಲದೆ ಪರಿಹಾರ ಹಣ ಬಿಡುಗಡೆ ವಿಳಂಬವಾಗಿರಬಹುದು ಆದರೆ ಶೀಘ್ರವೇ ನಮಗೆ ಉತ್ತಮ ಪರಿಹಾರ ಮೊತ್ತ ದೊರಕಲಿದೆ ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಮಾಜಿ ಸಚಿವ ಡಿಕೆ ಶಿವಕುಮಾರ್ ಬಂಧನ ವಿರೋಧಿಸಿ ನಡೆದ ಪ್ರತಿಭಟನೆ ಬಗೆಗೆ ಹೇಳಿದ ಯಡಿಯೂರಪ್ಪ ರಾಜಕೀಯ ಪಕ್ಷಗಳು ತಮ್ಮ ಅಸ್ತಿತ್ವದ ಉಳಿವಿಗಾಗಿ ಇಂತಹಾ ಪ್ರತಿಭಟನೆ ನಡೆಸುತ್ತವೆ ಎಂದಿದ್ದಾರೆ.

ಗೌರಿಗದ್ದೆಯಲ್ಲಿ ಯಾಗ

ಶೃಂಗೇರಿ ಸಮೀಪದ ಗೌರಿಗದ್ದೆಯಲ್ಲಿನ ವಿನಯ್ ಗುರೂಜಿಯವರ ದತ್ತಾಶ್ರಮದಲ್ಲಿ ನಡೆಯುತ್ತಿರುವ ಶತರುದ್ರಯಾಗ, ಗಣಪತಿ ಹೋಮದ ಪೂರ್ಣಾಹುತಿಯಲ್ಲಿ ಸಿಎಂ ಯಡಿಯೂರಪ್ಪ ಭಾಗವಹಿಸಿದ್ದಾರೆ.

ಇನ್ನು ಸಿಎಂ ಶೃಂಗೇರಿ ಭೇಟಿಗೆ ಸಂಸದೆ ಶೋಭಾ ಕರಂದ್ಲಾಜೆ ಹಾಗೂ ಚಿಕ್ಕಮಗಳೂರು ಶಾಸಕ, ಸಚಿವ ಸಿಟಿ ರವಿ ಸೇರಿ ಅನೇಕರು ಸಾಥ್ ನಿಡಿದ್ದಾರೆ.

No Comments

Leave A Comment