Log In
BREAKING NEWS >
ಪರಿಸರಕ್ಕೆ ಕೋವಿಡ್ 19 ಉಪಕಾರ ; ಜಗತ್ತಿನಾದ್ಯಂತ ವಾಯುಮಾಲಿನ್ಯ ತೀವ್ರ ಇಳಿಕೆ.....ಕೋವಿಡ್-19: ಎಲ್ಲಾ ಅಂತಾರಾಷ್ಟ್ರೀಯ ವಿಮಾನಯಾನ ಸೇವೆ ಏಪ್ರಿಲ್ 14ರವರೆಗೆ ನಿಷೇಧ...

ಕಾಶ್ಮೀರದಲ್ಲಿ ಭಾರಿ ಸ್ಫೋಟಕ ತುಂಬಿದ್ದ ಟ್ರಕ್, ಮೂವರು ಉಗ್ರರು ಸೇನೆ ವಶಕ್ಕೆ, ತೀವ್ರ ವಿಚಾರಣೆ!

ಶ್ರೀನಗರ: ಜಮ್ಮು ಮತ್ತು ಕಾಶ್ಮೀರಕ್ಕೆ ವಿಶೇಷಾಧಿಕಾರ ನೀಡುತ್ತಿದ್ದ ವಿಧಿ 370 ರದ್ಧತಿ ಬಳಿಕ ಕಣಿವೆ ರಾಜ್ಯದಲ್ಲಿ ಭಯೋತ್ಪಾದಕ ದಾಳಿಗೆ ಪಾಕಿಸ್ತಾನ ಮೂಲದ ಉಗ್ರರು ಹವಣಿಸುತ್ತಿರುವ ಬೆನ್ನಲ್ಲೇ ಭಾರಿ ಪ್ರಮಾಣದ ಶಸ್ತ್ರಾಸ್ತ್ರ ಮತ್ತು ಸ್ಫೋಟಕ ತುಂಬಿದ್ದ ಟ್ರಕ್ ಅನ್ನು ಭಾರತೀಯ ಸೇನೆ ವಶಪಡಿಸಿಕೊಂಡಿದೆ.

 

 

ಕಾಶ್ಮೀರದ ಕಥುವಾ ಜಿಲ್ಲೆಯಲ್ಲಿ ಭಾರಿ ಪ್ರಮಾಣದ ಶಸ್ತ್ರಾಸ್ತ್ರ ಮತ್ತು ಸ್ಫೋಟಕ ತುಂಬಿದ್ದ ಟ್ರಕ್ ಅನ್ನು ಭಾರತೀಯ ಸೇನೆ ವಶಪಡಿಸಿಕೊಂಡಿದ್ದು, ಅದರಲ್ಲಿದ್ದ ಮೂವರು ಶಂಕಿತ ಉಗ್ರರನ್ನು ವಶಕ್ಕೆ ಪಡೆದಿದ್ದಾರೆ.

ಈ ಬಗ್ಗೆ ಮಾಹಿತಿ ನೀಡಿರುವ ಕಥುವಾ ಎಸ್ ಪಿ ಶ್ರೀಧರ್ ಪಾಟಿಲ್ ಅವರು, ಟ್ರಕ್ ಚಾಲಕ ಸೇರಿದಂತೆ ಮೂವರು ಶಂಕಿತರನ್ನು ವಶಕ್ಕೆ ಪಡೆಲಾಗಿದ್ದು, ರಹಸ್ಯ ಸ್ಥಳದಲ್ಲಿ ವಿಚಾರಣೆ ನಡೆಸಲಾಗುತ್ತಿದೆ. ಈಗಲೇ ಹೆಚ್ಚಿನ ಮಾಹಿತಿ ನೀಡಲು ಸಾಧ್ಯವಿಲ್ಲ. ಆದರೆ ಟ್ರಕ್ ನಲ್ಲಿ ಎಕೆ 47 ಸೇರಿದಂತೆ ಅಪಾರ ಪ್ರಮಾಣದ ರೈಫಲ್ ಗಳು ಮತ್ತು ಸ್ಫೋಟಕಗಳು ಪತ್ತೆಯಾಗಿವೆ ಎಂದು ಹೇಳಿದ್ದಾರೆ.

No Comments

Leave A Comment