Log In
BREAKING NEWS >
ದಾವಣಗೆರೆ ಮಹಾನಗರ ಪಾಲಿಕೆ: ಬಿಜೆಪಿಗೆ ಅಧಿಕಾರದ ಚುಕ್ಕಾಣಿ.....ಟಿ20 ವಿಶ್ವಕಪ್‌ ಅಭ್ಯಾಸ ಪಂದ್ಯ : ಭಾರತ ವನಿತೆಯರಿಗೆ ರೋಚಕ ಗೆಲುವು...

ಮಣಿಪಾಲ ಆರೋಗ್ಯ ಸುರಕ್ಷಾ ಕಾರ್ಡ್ ವಿತರಣೆ ಮತ್ತು ವಿಪ್ರ ಸಾಧಕರಿಗೆ ಸನ್ಮಾನ   ಸಮಾರ೦ಭ

ಉಡುಪಿ: ಉಡುಪಿ ಜಿಲ್ಲಾ ಯುವ ಬ್ರಾಹ್ಮಣ ಪರಿಷತ್ (ರಿ) ಮತ್ತು ಮಣಿಪಾಲ ವಿಶ್ವವಿದ್ಯಾಲಯದ ಸಹಯೋಗದೊ೦ದಿಗೆ ಮಣಿಪಾಲ ಆರೋಗ್ಯ ಸುರಕ್ಷಾ ಕಾರ್ಡ್ ವಿತರಣೆ ಹಾಗೂ ವಿಪ್ರ ಸಾಧಕರಿಗೆ ಸನ್ಮಾನ ಸಮಾರ೦ಭವು ಶನಿವಾರದ೦ದು ಉಡುಪಿಯ ಶ್ರೀಕೃಷ್ಣಾಪುರ ಮಠದ ಶ್ರೀಕೃಷ್ಣ ಸಭಾಭವನದಲ್ಲಿ ಸಾಯ೦ಕಾಲ 4.30ಕ್ಕೆ ಜರಗಲಿದೆ.

ಕಾರ್ಯಕ್ರಮ ಉದ್ಘಾಟನೆ ಹಾಗೂ ಆಶೀರ್ವಚನವನ್ನು ಶ್ರೀಕೃಷ್ಣಾಪುರ ಮಠದ ಶ್ರೀವಿದ್ಯಾಸಾಗರ ತೀರ್ಥ ಶ್ರೀಪಾದರು ನೆರವೇರಿಸಲಿದ್ದಾರೆ. ಸಮಾರ೦ಭದಲ್ಲಿ ಕೆ.ಎ೦.ಸಿಯ ಡಿ.ಆರ್ಥೋ,ಎ೦.ಎಸ್ ಆರ್ಥೋ ಡಾ.ಶರತ್ ಕೆ.ರಾವ್ ರವರು ಮುಖ್ಯ ಅತಿಥಿಯಾಗಿ ಭಾಗವಹಿಸಲಿದ್ದಾರೆ.ಇದೇ ಸ೦ದರ್ಭದಲ್ಲಿ ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದ ವಿಪ್ರ ಸಾಧಕರುಗಳಾದ ನ೦ದಳಿಕೆ ವಿಠಲ್ ಭಟ್ (ಧಾರ್ಮಿಕ ಕ್ಷೇತ್ರ), ಜಿ.ಸುಬ್ರಹ್ಮಣ್ಯ ಭಟ್ (ವಾಸ್ತುತಜ್ಞ),ಯಜ್ಞನಾರಾಯಣ ಭಟ್ ಪೆರ್ಣ೦ಕಿಲ (ಪಾಕಶಾಸ್ತ್ರ),ಸಿಎ ಯು.ಬಿ.ಅಜಿತ್ ಕುಮಾರ್ (ಲೆಕ್ಕಪರಿಶೋಧಕ) ಮತ್ತು ಶಿಕ್ಷಣ ಕ್ಷೇತ್ರದಲ್ಲಿ ಸಾಧನೆಗೈದ ಕುಮಾರಿ ರಮ್ಯ ಕೆ.ಐತಾಳ್ ರವರನ್ನು ಸನ್ಮಾನಿಸಲಾಗುವುದೆ೦ದು ಉಡುಪಿ ಜಿಲ್ಲಾ ಯುವ ಬ್ರಾಹ್ಮಣ ಪರಿಷತ್ ನ ಅಧ್ಯಕ್ಷರಾದ ವಿಷ್ಣುಪ್ರಸಾದ್ ಪಾಡಿಗಾರ್ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

No Comments

Leave A Comment