Log In
BREAKING NEWS >
ದಾವಣಗೆರೆ ಮಹಾನಗರ ಪಾಲಿಕೆ: ಬಿಜೆಪಿಗೆ ಅಧಿಕಾರದ ಚುಕ್ಕಾಣಿ.....ಟಿ20 ವಿಶ್ವಕಪ್‌ ಅಭ್ಯಾಸ ಪಂದ್ಯ : ಭಾರತ ವನಿತೆಯರಿಗೆ ರೋಚಕ ಗೆಲುವು...

ಭಾರತೀಯ ಸೇನೆ ವಿರುದ್ಧ ನೆಲಬಾಂಬ್ ಸ್ಫೋಟಕ್ಕೆ ಬಂಡುಕೋರರಿಂದ “ಬ್ಲೂಟೂಥ್” ಬಳಕೆ

ನವದೆಹಲಿ: ಮ್ಯಾನ್ಯಾರ್ ಸೇನೆಯ ವಿರುದ್ಧ ದಾಳಿ ನಡೆಸಲು ಬಂಡುಕೋರರ ಗುಂಪು ಇದೀಗ ಬ್ಲೂಟೂಥ್ ಮತ್ತು ವೈಫೈ ಬಳಸಿ ನೆಲಬಾಂಬ್ ಸ್ಫೋಟಿಸುತ್ತಿರುವುದು ಭಾರತೀಯ ಗುಪ್ತಚರ ಏಜೆನ್ಸಿಗೆ ಚಿಂತೆಗೀಡು ಮಾಡಿದೆ ಎಂದು ವರದಿ ತಿಳಿಸಿದೆ.

ಕಾಲಾದನ್ ಯೋಜನೆಗೆ ಬೆದರಿಕೆ ಎಂಬಂತೆ ಬಂಡುಕೋರ ಸಂಘಟನೆ ಈ ಹೊಸ ತಂತ್ರಕ್ಕೆ ಶರಣಾಗಿದ್ದು, ಆ ನಿಟ್ಟಿನಲ್ಲಿ ಅರಾಕಾನ್ ಆರ್ಮಿ ಮಿಜೋರಾಂನ ಲಾಂಗಾಟ್ಲಾ ಜಿಲ್ಲೆಯ ಪ್ರದೇಶದಲ್ಲಿ ಹಲವಾರು ಶಿಬಿರಗಳನ್ನು ನಿರ್ಮಿಸಿರುವುದಾಗಿ ವರದಿ ವಿವರಿಸಿದೆ.

ಮ್ಯಾನ್ಮಾರ್ ನ ಈ ಬಂಡುಕೋರ ಸಂಘಟನೆ ಮಿಜೋರಾಂನಲ್ಲೂ ಸಕ್ರಿಯವಾಗಿದೆ. ಈ ನಿಟ್ಟಿನಲ್ಲಿ ನೆಲಬಾಂಬ್ ಸ್ಫೋಟಕ್ಕೆ ಹೊಸ ತಂತ್ರಜ್ಞಾನದ ಮೊರೆ ಹೋಗಿರುವ ಬಂಡುಕೋರರ ತಂತ್ರಗಾರಿಕೆಯನ್ನು ಭಾರತೀಯ ಭದ್ರತಾ ಪಡೆ ಪರಿಶೀಲಿಸುತ್ತಿದೆ.

 

 

ಬ್ಲೂಟೂಥ್ ತಂತ್ರಜ್ಞಾನ ಉಪಯೋಗಿಸಿಕೊಂಡು ನೆಲಬಾಂಬ್ ಅನ್ನು ಬಂಡುಕೋರ ಸಂಘಟನೆ ಹೇಗೆ ಸ್ಫೋಟಿಸುತ್ತಿದೆ ಎಂದು ಪತ್ತೆ ಹಚ್ಚುವಂತೆ ಅಸ್ಸಾಂ ರೈಫಲ್ಸ್ ತಂಡಕ್ಕೆ ಮನವಿ ಮಾಡಿಕೊಳ್ಳಲಾಗಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಏನಿದು ಕಲಾದನ್ ಯೋಜನೆ:

ಭಾರತದಿಂದ ಮ್ಯಾನ್ಮಾರ್ ಮೂಲಕ ಮಿಜೋರಾಂ ಗಡಿಯವರೆಗೆ ಸಮುದ್ರ ಮತ್ತು ಭೂ ಮಾರ್ಗದ ಮೂಲಕ ಸಂಪರ್ಕ ಕಲ್ಪಿಸುವ ಬಹುಮಾದರಿಯ ಸಾರಿಗೆ ಯೋಜನೆ ಇದಾಗಿದೆ. ಎರಡು ದೇಶಗಳ ನಡುವೆ ವ್ಯಾಪಾರ ವೃದ್ಧಿ ಮತ್ತು ಮಿಜೋರಾಂ ಸೇರಿದಂತೆ ಈಶಾನ್ಯ ರಾಜ್ಯಗಳಿಗೆ ಸಂಪರ್ಕ ಕಲ್ಪಿಸುವ ಮಹತ್ವದ ಯೋಜನೆ ಕಲಾದನ್. 2020ರಲ್ಲಿ ಈ ಯೋಜನೆ ಪೂರ್ಣಗೊಳ್ಳಲಿದೆ.

No Comments

Leave A Comment