Log In
BREAKING NEWS >
ತಪ್ಪಿದ ಅನಾಹುತ: ಜಮ್ಮು ಕಾಶ್ಮೀರದಲ್ಲಿ 40 ಕೆಜಿ ಸ್ಫೋಟಕ ವಶ ಪಡೆದ ಸೇನೆ....

ಭಟ್ಕಳ ಸಮೀಪ ಮಂಗಳೂರು ಮೂಲದ ಬೋಟ್ ಮುಳುಗಡೆ

ಮಂಗಳೂರು: ಮೀನುಗಾರಿಕೆಗೆ ತೆರಳಿದ್ದ ಮಂಗಳೂರು ಮೂಲದ ಬೋಟ್ ಒಂದು ಭಟ್ಕಳ-ಮುರುಡೇಶ್ವರ ಸಮೀಪದ ನೇತ್ರಾಣಿ ಗುಡ್ಡದ ಸಮೀಪ ಸುಮದ್ರದಲ್ಲಿ  ಮುಳುಗಡೆಯಾದ ಘಟನೆ ಸಂಭವಿಸಿದೆ.

ಮುಳುಗಡೆಯಾದ ಈ ಮೀನುಗಾರಿಕಾ ಬೋಟ್ ಮಂಗಳೂರಿನ ಕಸ್ಬಾ ಬೆಂಗ್ರೆಯ ಮೊಹಮ್ಮದ್ ಆಶೀಫ್ ಎಂಬುವರಿಗೆ ಸೇರಿದ್ದಾಗಿದೆ ಎಂದು ತಿಳಿದು ಬಂದಿದೆ.

ಸೆಪ್ಟೆಂಬರ್ 2 ರಂದು ಈ ಬೋಟ್ ಮೀನುಗಾರಿಕೆಗೆ ತೆರಳಿತ್ತು. ಬೋಟ್ ಮುಳುಗಡೆಯಾಗುತ್ತಿದ್ದಂತೆ ಅದರಲ್ಲಿದ್ದ ಎಲ್ಲಾ ಮೀನುಗಾರರನ್ನು ರಕ್ಷಿಸಲಾಗಿದೆ ಎಂದು ತಿಳಿದುಬಂದಿದೆ.

 

 

 

ಈ ಮೀನುಗಾರಿಕಾ ಬೋಟ್ ಮುಳುಗಡೆಯಾಗಿರುವುದರಿಂದ ಒಟ್ಟಾರೆ ಅಂದಾಜು 85 ಲಕ್ಷ ರೂಪಾಯಿಗಳ ನಷ್ಟ ಸಂಭವಿಸಿದೆ ಎಂದು ಪ್ರಾಥಮಿಕ ಮಾಹಿತಿಗಳಿಂದ ತಿಳಿದುಬಂದಿದೆ.

No Comments

Leave A Comment