Log In
BREAKING NEWS >
ದಾವಣಗೆರೆ ಮಹಾನಗರ ಪಾಲಿಕೆ: ಬಿಜೆಪಿಗೆ ಅಧಿಕಾರದ ಚುಕ್ಕಾಣಿ.....ಟಿ20 ವಿಶ್ವಕಪ್‌ ಅಭ್ಯಾಸ ಪಂದ್ಯ : ಭಾರತ ವನಿತೆಯರಿಗೆ ರೋಚಕ ಗೆಲುವು...

ಮುಕ್ಕ: ಡಿವೈಡರ್ ಹಾರಿ ಲಾರಿಗೆ ಡಿಕ್ಕಿ ಹೊಡೆದ ಕಾರು 2ಸಾವು ಮೂವರು ಗಂಭೀರ

ಮೂಲ್ಕಿ: ಹಳೆಯಂಗಡಿ ರಾಷ್ಟ್ರೀಯ ಹೆದ್ಗಾರಿ ಮುಕ್ಕದಲ್ಲಿ ವಿದ್ಯಾರ್ಥಿಗಳಿದ್ದ ಕಾರೊಂದು ಚಾಲಕನ ನಿಯಂತ್ರಣ ತಪ್ಪಿ ಡಿವೈಡರ್ ಹಾರಿ ಲಾರಿಗೆ ಡಿಕ್ಕಿ ಹೊಡೆದ ಘಟನೆ ಶನಿವಾರ ನಡೆದಿದ್ದು, ಅಪಘಾತದಲ್ಲಿ ಒರ್ವ ವಿದ್ಯಾರ್ಥಿನಿ ಸಾವನ್ನಪ್ಪಿದ್ದು, ಗಾಯಾಳುಗಳಲ್ಲಿ ಮೂವರು ಚಿಂತಾಜನಕ ಸ್ಥಿತಿಯಲ್ಲಿ ಆಸ್ಪತ್ರೆಗೆ ದಾಖಲಾಗಿದ್ದಾರೆ.

ಅಪಘಾತದಲ್ಲಿ ಮೃತಪಟ್ಟವರನ್ನು ಗ್ಲೋರಿಯಾ (24) ಎಂದು ಗುರುತಿಸಲಾಗಿದೆ. ಮಣಿಪಾಲ ಆಕಾಡೆಮಿಯೆ ಇಂಟೀರಿಯಲ್ ಡೆಕೋರೆಟಿವ್ ವಿಭಾಗದ ಎಂ.ಎ.ಪದವಿ ವ್ಯಾಸಾಂಗ ವಿದ್ಯಾರ್ಥಿಗಳಾದ ಅವನತ್ (ಚಾಲಕ),ಅಪರ್ಣ. ಅಂಕಿತಾ, ಗಾಯತ್ರಿ, ಸುಚಲಿತಾ, ರೇಖಾ. ಅನಿತಾ. ಮೇರಿಟಾ. ವೃತನ್, ಇವರೆಲ್ಲ ಸೇರಿಕೊಂಡು ಸುರತ್ಕಲ್ ಬಳಿಯ ತೋಕೂರುಗುತ್ತುವಿನ ಹಳೇ ಮನೆಯನ್ನು ಶೈಕ್ಷಣಿಕ ಉದ್ದೇಶದಿಂದ ವೀಕ್ಷಣೆ ನಡೆಸಿ, ಸುರತ್ಕಲ್‌ನ ಹೋಟೆಲ್‌ನಲ್ಲಿ ಊಟವನ್ನು ಮುಗಿಸಿಕೊಂಡು ಮಣಿಪಾಲಕ್ಕೆ ಹಿಂದುರುಗುತ್ತಿದ್ದಾಗ ಚಾಲಕನ ನಿಯಂತ್ರಣ ತಪ್ಪಿ ಕಾರು ಡಿವೈಡರ್ ಹಾರಿ ಮಗುಚಿಕೊಂಡು ಮಂಗಳೂರಿನತ್ತ ಸಂಚರಿಸುತ್ತಿದ್ದ ಸರಕು ತುಂಬಿದ ಲಾರಿಗೆ ಮುಖಾಮುಖಿಯಾಗಿದೆ.

ಗಾಯಾಳುಗಳನ್ನು ಮೊದಲು ಮುಕ್ಕದ ಖಾಸಗಿ ಆಸ್ಪತ್ರೆಗೆ ಗಾಯಾಳುಗಳನ್ನು ದಾಖಲಿಸಿ ನಂತರ ಹೆಚ್ಚಿನ ಚಿಕಿತ್ಸೆಗೆ ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಚಾಲಕನ ಸಹಿತ ಮೂವರು ಚಿಂತಾಜನಕ ಸ್ಥಿತಿಯಲ್ಲಿ ತುರ್ತು ಚಿಕಿತ್ಸಾ ಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ವಿದ್ಯಾರ್ಥಿಗಳು ಆನ್‌ಲೈನ್‌ನ ಮೂಲಕ ಖಾಸಗಿ ಬಾಡಿಗೆ ಕಾರಿನಲ್ಲಿ ಸಂಚರಿಸುತ್ತಿದ್ದರು.

ಘಟನಾ ಸ್ಥಳಕ್ಕೆ ಮಂಗಳೂರು ಪೊಲೀಸ್ ಆಯುಕ್ತ ಡಾ.ಹರ್ಷ ಭೇಟಿ ನೀಡಿದ್ದಾರೆ. ಮಂಗಳೂರು ಉತ್ತರ ವಲಯದ ಸಂಚಾರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

No Comments

Leave A Comment