Log In
BREAKING NEWS >
ದಾವಣಗೆರೆ ಮಹಾನಗರ ಪಾಲಿಕೆ: ಬಿಜೆಪಿಗೆ ಅಧಿಕಾರದ ಚುಕ್ಕಾಣಿ.....ಟಿ20 ವಿಶ್ವಕಪ್‌ ಅಭ್ಯಾಸ ಪಂದ್ಯ : ಭಾರತ ವನಿತೆಯರಿಗೆ ರೋಚಕ ಗೆಲುವು...

ಶ್ರೀ ಕೃಷ್ಣ ಮಠದಲಿ ಬೃಹತ್ ಆರೋಗ್ಯ ತಪಾಸಣಾ ಶಿಬಿರ ಉದ್ಘಾಟನೆ

ಉಡುಪಿ:ಶ್ರೀ ಕೃಷ್ಣ ಮಠದ ರಾಜಾಂಗಣದಲ್ಲಿ ಪರ್ಯಾಯ ಶ್ರೀ ಪಲಿಮಾರು ಮಠದ ಆಶ್ರಯದಲ್ಲಿ,ಶ್ರೀ ಧನ್ವಂತರಿ ಚಿಕಿತ್ಸಾಲಯ,ಲಯನ್ಸ್ ಕ್ಲಬ್ ಕಲ್ಯಾಣಪುರ,ಜಿಲ್ಲಾ ಆರೋಗ್ಯ ಸೊಸೈಟಿ-ಅಂಧತ್ವ ನಿಯಂತ್ರಣ ವಿಭಾಗ,ಉಡುಪಿ ಸಂಚಾರಿ ನೇತ್ರ ಘಟಕ,ಜಿಲ್ಲಾ ಆಸ್ಪತ್ರೆ ಉಡುಪಿ ಇವರು ಜಂಟಿಯಾಗಿ ಆಯೋಜಿಸಿರುವ ಉಚಿತ ನೇತ್ರ ತಪಾಸಣಾ ಮತ್ತು ಮಹಿಳೆಯರ ಆರೋಗ್ಯ ತಪಾಸಣಾ ಶಿಬಿರವನ್ನು ಪರ್ಯಾಯ ಮಠಾಧೀಶರಾದ ಶ್ರೀ ವಿದ್ಯಾಧೀಶ ತೀರ್ಥ ಶ್ರೀಪಾದರು ಉದ್ಘಾಟಿಸಿ, ನಾವು ಆರೋಗ್ಯದಿಂದ ಇದ್ದರೆ ಯಾವ ಮಹತ್ವದ ಸಾಧನೆಯನ್ನು ಮಾಡಬಹುದು.ನಮ್ಮ ದೇಹದೊಳಗಿರುವ ಕಾಯಿಲೆಗಳು ನಮ್ಮ ಕಣ್ಣಿಗೆ ಕಾಣುವುದಿಲ್ಲ ಅದು ಉಲ್ಬಣಗೊಳ್ಳುವುದಕ್ಕಿಂತ ಮೊದಲು ಅದನ್ನು ಪರೀಕ್ಷಿಸಿ ಅದಕ್ಕೆ ತಕ್ಕಂತಹ ಚಿಕಿತ್ಸೆ ಮಾಡಿದರೆ ಗುಣಮುಖವಾಗಬಹುದು.ಮಾನವರಿಗೆ ಕಣ್ಣು ಬಹಳ ಪ್ರಮುಖವಾದ ಅಂಗ ಇದನ್ನು ಕಾಪಾಡಿಕೊಳ್ಳುವುದು ನಮ್ಮ ಜವಾಬ್ದಾರಿಯಾಗಿರುವ ದೃಷ್ಟಿಯಿಂದ ಇಂತಹ ತಪಾಸಣಾ ಶಿಬಿರವನ್ನು ಆಯೋಜಿಸಿದ್ದು ಫಲನುಭವಿಗಳು ಸದುಪಯೋಗ ಪಡೆದುಕೊಂಡು ಎಲ್ಲರಿಗೂ ಉತ್ತಮ ಆರೋಗ್ಯ ಕೊಡಲಿ ಎಂದು ಶ್ರೀ ಕೃಷ್ಣ ಮುಖ್ಯಪ್ರಾಣ ದೇವರಲ್ಲಿ ಪ್ರಾರ್ಥಿಸುತ್ತೇವೆಯೆಂದು ಅನುಗ್ರಹ ಸಂದೇಶ ನೀಡಿದರು.

ಈ ಸಂದರ್ಭದಲ್ಲಿ ಮೈಸೂರಿನ ಎನ್.ಜಿ.ಫೌಂಡೇಶನಿನ ವ್ಯವಸ್ಥಾಪಕರಾದ ಗುರುರಾಜ ರಾವ್,ಉಡುಪಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಡಾ.ಅಶೋಕ್,ಡಾ.ನಿತ್ಯಾನಂದ ನಾಯಕ್,ಡಾ.ರೇಣುಕಾ ಮಟ್ಟಿ,ಬಾಲಾಜಿ ರಾಘವೇಂದ್ರ ಆಚಾರ್ಯ,ಲ.ಎಸ್.ಟಿ.ಕರ್ಕೇರ,ಲ.ಪಿ.ಎ.ಭಟ್ ಮೊದಲಾದವರು ಉಪಸ್ಥಿತರಿದ್ದರು.

ಎನ್.ಜಿ.ಫೌಂಡೇಶನಿನ ಗುರುರಾಜ ರಾವ್ ಪ್ರಸ್ತಾವನೆ ಮಾಡಿ,ಲಯನ್ಸ್ ಕ್ಲಬ್ಬಿನ ಪಿ.ಎ.ಭಟ್ ಕಾರ್ಯಕ್ರಮ ನಿರೂಪಿಸಿ, ಸ್ವಾಗಿತಿಸಿ,ಧನ್ಯವಾದ ನೀಡಿದರು.

No Comments

Leave A Comment