Log In
BREAKING NEWS >
ದೇಶದಲ್ಲಿ ಮುಂದುವರೆದ ಕೊರೋನಾ ಆರ್ಭಟ: ತ.ನಾಡಲ್ಲಿ ಮತ್ತಿಬ್ಬರು ಬಲಿ, ಸಾವಿನ ಸಂಖ್ಯೆ 83ಕ್ಕೆ ಏರಿಕೆ.....ಕೊರೋನಾ ಲಾಕ್'ಡೌನ್ ಎಫೆಕ್ಟ್: ಏಪ್ರಿಲ್ 30ರವರೆಗೂ ಬುಕಿಂಗ್ ಸ್ಥಗಿತಗೊಳಿಸಿದ ಏರ್ ಇಂಡಿಯಾ....

ಮತ್ತೆ ಸುಂಟರಗಾಳಿ ಆರ್ಭಟ : ಹಲವು ಮನೆಗಳಿಗೆ ಹಾನಿ

ಹೆಬ್ರಿ: ಇಂದು ಬೆಳಿಗ್ಗೆ ಬೀಸಿದ ಭಾರಿ ಸುಂಟರಗಾಳಿಯ ಪರಿಣಾಮವಾಗಿ ಕುಚ್ಚೂರು ಬೇಳಂಜೆ ಪರಿಸರದ ಹಲವಾರು ಮನೆಗಳ ಹೆಂಚು ಶೀಟುಗಳು ಹಾರಿ ಹೋಗಿ ಅಪಾರ ನಷ್ಟ ಸಂಭವಿಸಿದೆ.

ಬೃಹತ್ ಮರಗಳು  ರಸ್ತೆಗೆ ಬಿದ್ದ ಪರಿಣಾಮ ಬೇಳಂಜೆ -ಆರ್ಡಿ  ರಸ್ತೆ ಸಂಪರ್ಕ ಸಂಪೂರ್ಣ ಕಡಿತಗೊಂಡಿದ್ದು, ಬೇಳಂಜೆ ಮಲ್ಲಿಕಾರ್ಜುನ ದೇವಸ್ಥಾನದ ಎದುರಿನ ಪ್ರಾಂಗಣ ಹಾನಿಗೊಂಡಿದೆ.

ಸುಮಾರು ಅರ್ಧ ಗಂಟೆ ಬೀಸಿದ ಭಾರೀ ಸುಂಟರಗಾಳಿಯಿಂದ  ಅಡಿಕೆ. ತೆಂಗು, ರಬ್ಬರ್ ತೋಟಗಳಿಗೂ ಹಾನಿ ಯಾಗಿ ನಷ್ಟ ಸಂಭವಿಸಿದೆ.

ಗ್ರಾಮದ ತಮ್ಮಯ್ಯ ನಾಯಕ್ , ಜಯಲಕ್ಷ್ಮಿ, ರಾಮ ನಾಯಕ್ , ಪುರುಷ ನಾಯಕ್ ,ಲಕ್ಷ್ಮನ್ ನಾಯಕ್ ಮುಂತಾದವರ ಮನೆಗಳಿಗೆ ತೀವ್ರವಾದ ಹಾನಿಯಾಗಿದೆ.

ಸ್ಥಳಕ್ಕೆ ಗ್ರಾಮ ಪಂಚಾಯತ್ ಅಧ್ಯಕ್ಷರು , ತಾಲೂಕು ಪಂಚಾಯತ್ ಅಧ್ಯಕ್ಷರು ಹಾಗೂ ಕಂದಾಯ ನಿರೀಕ್ಷಕರು ಭೇಟಿ ನೀಡಿದ್ದು ಶೀಘ್ರ ಪರಿಹಾರ ನೀಡುವುದಾಗಿ ಭರವಸೆ ನೀಡಿದ್ದಾರೆ.

No Comments

Leave A Comment