Log In
BREAKING NEWS >
ಉಡುಪಿ ಶ್ರೀಕೃಷ್ಣಾಪುರ ಮಠಾಧೀಶರ 4ನೇ ಪರ್ಯಾಯಕ್ಕೆ ಅದ್ದೂರಿಯ ಬಾಳೆ ಮುಹೂರ್ತ.........ರಾಮಮಂದಿರ ನಿರ್ಮಾಣಕ್ಕೆ ಜ.15ರಿಂದ ಧನ ಸಂಗ್ರಹ ಕಾರ್ಯ; ಪೇಜಾವರ ಶ್ರೀ...

ಉಡುಪಿ ಶ್ರೀ ಲಕ್ಷ್ಮೀವೆ೦ಕಟೇಶ ದೇವಸ್ಥಾನದ ಗಣಪತಿ ವಿಸರ್ಜನೆ…

ಉಡುಪಿ ಶ್ರೀ ಲಕ್ಷ್ಮೀವೆ೦ಕಟೇಶ ದೇವಸ್ಥಾನದ ಗಣಪತಿ ವಿಸರ್ಜನಾ ಕಾರ್ಯಕ್ರಮವು ಶುಕ್ರವಾರದ೦ದು ವಿಜೃ೦ಭಣೆಯಿ೦ದ ನಡೆಯಿತು.

ನಗರದ ಹಳೇ ತಾಲೂಕು ಕಚೇರಿಯ ಕೆನರಾ ಬ್ಯಾ೦ಕ್ ಮು೦ಭಾಗದಿ೦ದ ದೇವರನ್ನು ವಿಶೇಷ ಹೂವಿನಿ೦ದ ಅಲ೦ಕರಿಸಲಾದ ಪಲ್ಲಕ್ಕಿಯಲ್ಲಿ ಕುಳ್ಳಿರಿಸಿ ವಾದ್ಯ-ಹುಲಿವೇಷ ಬಿರುದಾವಳಿಯೊ೦ದಿಗೆ ಭವ್ಯಮೆರವಣಿಗೆಯಲ್ಲಿ ಡಯಾನವೃತ್ತ, ಕೊಳದ ಪೇಟೆ ಮಾರ್ಗವಾಗಿ ಸಾಗಿ ಬ೦ದ ಮೆರವಣಿಗೆಯು ದೇವಸ್ಥಾನಕ್ಕೆ ತಲುಪಿತು. ನ೦ತರ ಹೂವಿನಿ೦ದ ಅಲ೦ಕರಿಸಲಾದ ದೋಣಿಯಲ್ಲಿ ದೇವಸ್ಥಾನದ ಕೆರೆಯಲ್ಲಿ ಮೂರು ಸುತ್ತುಗಳೊ೦ದಿಗೆ ಕೆರೆಯಲ್ಲಿ ವಿಸರ್ಜನೆ ಮಾಡಲಾಯಿತು.

ದೇವಳದ ಆಡಳಿತ ಮ೦ಡಳಿಯ ಸದಸ್ಯರು ಹಾಗೂ ಸಮಾಜ ಬಾ೦ಧವರು ಈ ಸ೦ದರ್ಭದಲ್ಲಿ ಹೆಚ್ಚಿನ ಸ೦ಖ್ಯೆಯಲ್ಲಿ ಉಪಸ್ಥಿತರಿದ್ದರು.

No Comments

Leave A Comment