Log In
BREAKING NEWS >
ಉಡುಪಿ ಶ್ರೀಲಕ್ಷ್ಮೀವೆ೦ಕಟೇಶ ದೇವಸ್ಥಾನದಲ್ಲಿ ಈ ಬಾರಿ ನಡೆಯ ಬೇಕಾದ ಭಜನಾ ಸಪ್ತಾಹ ಮಹೋತ್ಸವವನ್ನು ಕೋವಿಡ್-19ರ ಕಾರಣದಿ೦ದ ಮು೦ದೂಡಲಾಗಿದ್ದು ಭಜನಾ ಸಪ್ತಾಹ ಮಹೋತ್ಸವವನ್ನು 2021ನೇ ವರುಷದ ಮಾರ್ಚನಲ್ಲಿ ನಡೆಯಲಿದೆ...

ಉಡುಪಿ: ಡಿವೈಡರ್ ಗೆ ನುಗ್ಗಿದ ಕಾರು ನಜ್ಜು-ಗುಜ್ಜು: ಚಾಲಕನಿಗೆ ಗಾಯ

ಉಡುಪಿ:ಕಾರೊಂದು ಡಿವೈಡರ್ ಗೆ ನುಗ್ಗಿ ವಿದ್ಯುತ್ ಕಂಬಕ್ಕೆ ಡಿಕ್ಕಿ ಹೊಡೆದು, ಕಾರು ಚಾಲಕ ಗಾಯಗೊಂಡ ಘಟನೆ ಸೆ.6 ರ ಶುಕ್ರವಾರ ಮುಂಜಾನೆ ಕುಂದಾಪುರ – ಉಡುಪಿ ರಾಷ್ಟ್ರೀಯ ಹೆದ್ದಾರಿಯ ಶಾರದಾ ಇಂಟರ್‌ ನ್ಯಾಷನಲ್‌ ಹೋಟೇಲ್‌ ಬಳಿ ಸಂಭವಿಸಿದೆ.

ಕಾರು ಚಾಲಕನನ್ನು ಕಲ್ಯಾಣಪುರದ ಆನಂದ್ ಪದ್ಮನಾಭನ್ ಎಂದು ಗುರುತಿಸಲಾಗಿದೆ. ಸಂತೇಕಟ್ಟೆಯಿಂದ ಉಡುಪಿಯ ಕಡೆಗೆ ಸಾಗುತ್ತಿದ್ದ ವೇಳೆ ಈ ಅಪಘಾತ ಸಂಭವಿಸಿದ್ದು, ಅಪಘಾತದ ತೀವ್ರತಗೆ ಕಾರು ಸಂಪೂರ್ಣ ಹಾನಿಯಾಗಿದ್ದು, ಪ್ರಾಣಾಪಾಯದಿಂದ ಪಾರಾಗಿದ್ದಾನೆ. ಚಾಲಕನನ್ನು ಮಣಿಪಾಲ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.

ಉಡುಪಿ ಸಂಚಾರಿ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿದ್ದು, ಪ್ರಕರಣದ ದಾಖಲಿಸಿಕೊಂಡಿದ್ದಾರೆ.

No Comments

Leave A Comment