Log In
BREAKING NEWS >
ಕೊರೋನಾ ವೈರಸ್: ಸಾವಿನ ಸಂಖ್ಯೆ 80ಕ್ಕೆ ಏರಿಕೆ: ಭಾರತೀಯರು ಸೋಂಕುವಿಗೆ ತುತ್ತಾಗಿಲ್ಲ: ಎಂಇಎ...

ಧಾರವಾಡ: ಬೈಕ್-ಲಾರಿ ನಡುವೆ ಭೀಕರ ಅಪಘಾತ, ಸ್ಥಳದಲ್ಲೇ ಮೂವರು ಸಾವು

ಧಾರವಾಡ: ಬೈಕ್ ಹಾಗೂ ಲಾರಿ ನಡುವೆ ಸಂಭವಿಸಿದ ಭೀಕರ ಅಪಘಾತದಲ್ಲಿ ಬೈಕ್ ನಲ್ಲಿದ್ದ ಮೂವರು ಯುವಕರು ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ಧಾರವಾಡದ ನವಲಗುಂದ`ದಲ್ಲಿ ನಡೆದಿದೆ.

ನವಲಗುಂದ  ತಾಲೂಕು ಅಳಗವಾಡಿ ಸಮೀಪ ನಡೆದ ದುರ್ಘಟನೆಯಲ್ಲಿ ಹನಸಿ ಗ್ರಾಮದ ಮಹಾಂತೇಶ ನಿಂಗಪ್ಪ ಗುಜ್ಜಳ (26), ಚಂದ್ರಗೌಡ ಶಿವನಗೌಡ ರಾಯನಗೌಡ (28) ಹಾಗೂ ಹೆಬ್ಬಾಳ ಗ್ರಾಮದ ಆನಂದ ನಿಂಗಪ್ಪ ಜೆಟ್ಟೆನವರ (26)  ಎಂಬುವವರು ಮೃತಪಟ್ಟಿದ್ದಾರೆ.

 

ಸಧ್ಯ ಮೃತದೇಹಗಳನ್ನು ಮರಣೋತ್ತರ ಪರೀಕ್ಷೆಗೆ ನವಲಗುಂದ ಸರ್ಕಾರಿ ಆಸ್ಪತ್ರೆಗೆ ರವಾನಿಸಿದ್ದು ಸ್ಥಳಕ್ಕೆ ವಲಗುಂದ ಠಾಣೆಯ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿ ತನಿಖೆ ಕೈಗೊಂಡಿದ್ದಾರೆ.

No Comments

Leave A Comment