Log In
BREAKING NEWS >
ಡಿ.6ಕ್ಕೆ ಪಲಿಮಾರು ಶ್ರೀಗಳ ಸ೦ಚಾರ ಆರ೦ಭ, ತಿರುಪತಿ ಸೇರಿದ೦ತೆ ಇತರ ಪುಣ್ಯಕ್ಷೇತ್ರಕ್ಕೆ ಭೇಟಿ ಘಣಿಕ ಚಾಲದವರೆಗೆ-ಡಿ,24ಕ್ಕೆ ಉಡುಪಿಗೆರಾಮಮಂದಿರ ನಿರ್ಮಾಣಕ್ಕೆ ಜ.15ರಿಂದ ಧನ ಸಂಗ್ರಹ ಕಾರ್ಯ; ಪೇಜಾವರ ಶ್ರೀ...

ಅಮೆರಿಕಾ ದೋಣಿ ದುರಂತ: ಭಾರತೀಯ ಮೂಲದ ದಂಪತಿ ದುರ್ಮರಣ

ವಾಷಿಂಗ್ಟನ್ : ಅಮೆರಿಕದಲ್ಲಿ ನಡೆದ ದೋಣಿ ಅಪಘಾತದಲ್ಲಿ ಭಾರತೀಯ ಮೂಲದ ದಂಪತಿ ಮೃತಪಟ್ಟಿದ್ದಾರೆ. ಕ್ಯಾಲಿಪೋರ್ನಿಯಾದ ಸಾಂತಾ ಕ್ರೂಜ್ ದ್ವೀಪದಲ್ಲಿ ಸ್ಕೂಬಾ ಡೈವಿಂಗ್ ಗೆ ದಂಪತಿ ತೆರಳುತ್ತಿದ್ದ ವೇಳೆ ದೋಣಿಯಲ್ಲಿ ಬೆಂಕಿ ಕಾಣಿಸಿಕೊಂಡು ಈ ದುರಂತ ಸಂಭವಿಸಿದೆ.

ಮಹಾರಾಷ್ಟ್ರದ ನಾಗ್ಪುರದ ಪ್ರಖ್ಯಾತ ಶಿಶು ವೈದ್ಯ ಸತೀಶ್ ಡಿಯೊ ಪೂಜಾರಿ ಅವರ ಪುತ್ರಿ ಅಮೆರಿಕಾದಲ್ಲಿ ದಂತವೈದ್ಯರಾಗಿ ಕೆಲಸ ಮಾಡುತ್ತಿದ್ದು, ಅಳಿಯ ಹಣಕಾಸು ಕಂಪನಿಯಲ್ಲಿ ಉದ್ಯೋಗಿಯಾಗಿದ್ದಾರೆ.

ಸೋಮವಾರ ಸತೀಶ್ ಪುತ್ರಿ, ಅಳಿಯ ಸ್ಕೂಬಾ ಡೈವಿಂಗ್ ಗಾಗಿ ಕ್ಯಾಲಿಪೋರ್ನಿಯಾದ ಸಾಂತಾ ಕ್ರೂಜ್ ದ್ವೀಪಕ್ಕೆ ಪ್ರಯಾಣ ಬೆಳೆಸಿದ್ದರು. ಆ ಸಮಯದಲ್ಲಿ ಪ್ರಯಾಣಿಸುತ್ತಿದ್ದ ದೋಣಿ ಬೆಂಕಿಗೆ ಆಹುತಿಯಾಗಿ , ಕ್ಯಾಲಿಪೋರ್ನಿಯಾ ಸಮುದ್ರ ತೀರದಲ್ಲಿ ಮುಳುಗಿತು ಎಂದು ವರದಿಯಾಗಿದೆ.

ದೋಣಿಯಲ್ಲಿ 33 ಪ್ರಯಾಣಿಕರಲ್ಲದೆ, ಆರು ಡೈವರ್ ಗಳು ಸಹ ಇದ್ದರು ಎಂಬ ಮಾಹಿತಿ ಲಭ್ಯವಾಗಿದೆ. ಈ ಪೈಕಿ 34 ಮಂದಿ ಸಾವನ್ನಪ್ಪಿದ್ದಾರೆ ಎಂದು ವರದಿಯಾಗಿದ್ದು, ಐದು ಡೈವರ್ ಗಳು ಬದುಕುಳಿದಿದ್ದಾರೆ. ಅಪಘಾತದ ಮಾಹಿತಿ ದೊರೆತ ತಕ್ಷಣವೇ ಅಧಿಕಾರಿಗಳು ಘಟನಾ ಸ್ಥಳಕ್ಕೆ ಧಾವಿಸಿದ್ದು , ತನಿಖೆ ನಡೆಸುತ್ತಿದ್ದಾರೆ.

No Comments

Leave A Comment