Log In
BREAKING NEWS >
ದಾವಣಗೆರೆ ಮಹಾನಗರ ಪಾಲಿಕೆ: ಬಿಜೆಪಿಗೆ ಅಧಿಕಾರದ ಚುಕ್ಕಾಣಿ.....ಟಿ20 ವಿಶ್ವಕಪ್‌ ಅಭ್ಯಾಸ ಪಂದ್ಯ : ಭಾರತ ವನಿತೆಯರಿಗೆ ರೋಚಕ ಗೆಲುವು...

ಬಂಟ್ವಾಳ: ದರೋಡೆಗೆ ಹೊಂಚು ಹಾಕುತ್ತಿದ್ದ ಐವರು ಆರೋಪಿಗಳ ಬಂಧನ

ಬಂಟ್ವಾಳ : ದರೋಡೆಗೆ ಹೊಂಚು ಹಾಕುತ್ತಿದ್ದ ಐವರು ಆರೋಪಿಗಳನ್ನು ಮಂಚಿ ಗ್ರಾಮದ ಮಂಚಿ ಕಟ್ಟೆ ಎಂಬಲ್ಲಿ ಸೆ.೦4ರ ಬುಧವಾರದಂದು ಬಂಟ್ವಾಳ ಗ್ರಾಮಾಂತರ ಪೊಲೀಸರು ಬಂಧಿಸಿದ್ದಾರೆ.

ಬಂಧಿತರನ್ನು ಗೋಳ್ತಮಜಲು ನಿವಾಸಿ ಉಮ್ಮರ್ ಫಾರೂಕ್ (26), ಮಂಗಿಳಪದವಿನ ಮಹಮ್ಮದ್ ಅಬೂಬಕ್ಕರ್ (21), ಬಂಟ್ವಾಳದ ಅಬ್ದುಲ್ ಖಾದರ್ (40), ಗೋಳ್ತಮಜಲು ನಿವಾಸಿ ಮೊಹಮ್ಮದ್ ರಮೀಜ್ (22) , ಬಂಟ್ವಾಳದ ಇಬ್ರಾಹಿಂ ಖಲೀಲ್ (24) ಎಂದು ಗುರುತಿಸಲಾಗಿದೆ.

ಮಂಚಿ ಗ್ರಾಮದ ಮಂಚಿ ಕಟ್ಟೆಯ ರಸ್ತೆಯ ಬದಿಯಲ್ಲಿ ಅನುಮಾನಾಸ್ಪದವಾಗಿ ಇವರುಗಳು ನಿಂತುಕೊಂಡಿದ್ದು, ಇವರನ್ನು ವಿಚಾರಿಸಿದಾಗ ದರೋಡೆಗೆ ಹೊಂಚು ಹಾಕುತ್ತಿದ್ದಾರೆ ಎನ್ನಲಾಗಿದೆ. ಈ ವೇಳೆ ಪೊಲೀಸರು ತನಿಖೆ ನಡೆಸಿದಾಗ ದರೋಡೆಗಾಗಿ ಇವರಲ್ಲಿ ಎರಡೂ ಮೋಟಾರು ಸೈಕಲ್ ಗಳು ಇದ್ದವು. ಜೊತೆಗೆ ಕಬ್ಬಿಣದ ಕತ್ತಿ, ಚೂರಿ, ಇನ್ನಿತರ ಮಾರಕ ಆಯುಧ ಹಾಗೂ ಎರಡು ಗ್ರಾಂ ಗಾಂಜಾ ಪತ್ತೆಯಾಗಿದ್ದು ಇವುಗಳನ್ನು ವಶಪಡಿಸಿಕೊಳ್ಳಲಾಗಿದೆ. ಈಗಾಗಲೇ ಪೊಲೀಸರು ಐವರನ್ನು ಬಂಧಿಸಿದ್ದು, ಸುರಿಬೈಲ್ ನ ಅಕ್ಬರ್ ಎಂಬಾತನು ತಲೆಮರೆಸಿಕೊಂಡಿದ್ದಾನೆ. ಆತನಿಗಾಗಿ ತನಿಖೆ ನಡೆಸುತ್ತಿದ್ದಾರೆ.

ಬಂಧಿತ ಐವರು ಆರೋಪಿಗಳ ಮೇಲೆ ಬಂಟ್ವಾಳ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ ಹಾಗೂ ಉಮ್ಮರ್ ಫಾರೂಕ್ ಮತ್ತು ಇಬ್ರಾಹಿಂ ಖಲೀಲ್ ಎಂಬವರುಗಳ ಮೇಲೆ ಈ ಹಿಂದೆ ಬಂಟ್ವಾಳ ನಗರ ಪೊಲೀಸ್ ಠಾಣೆಯಲ್ಲಿ ಕೊಲೆ ಯತ್ನ ಮತ್ತು ದೊಂಬಿಗೆ ಸಂಬಂಧಿಸಿದಂತೆ ಪ್ರಕರಣ ದಾಖಲಾಗಿರುತ್ತದೆ.

No Comments

Leave A Comment