Log In
BREAKING NEWS >
ಡಿ.6ಕ್ಕೆ ಪಲಿಮಾರು ಶ್ರೀಗಳ ಸ೦ಚಾರ ಆರ೦ಭ, ತಿರುಪತಿ ಸೇರಿದ೦ತೆ ಇತರ ಪುಣ್ಯಕ್ಷೇತ್ರಕ್ಕೆ ಭೇಟಿ ಘಣಿಕ ಚಾಲದವರೆಗೆ-ಡಿ,24ಕ್ಕೆ ಉಡುಪಿಗೆರಾಮಮಂದಿರ ನಿರ್ಮಾಣಕ್ಕೆ ಜ.15ರಿಂದ ಧನ ಸಂಗ್ರಹ ಕಾರ್ಯ; ಪೇಜಾವರ ಶ್ರೀ...

ಡಿಕೆ ಶಿವಕುಮಾರ್ ಬಂಧನ, ರಾಜ್ಯಾದ್ಯಂತ ಭುಗಿಲೆದ್ದ “ಕೈ” ಆಕ್ರೋಶ

ನವದೆಹಲಿ/ಬೆಂಗಳೂರು: ಅಕ್ರಮ ಹಣ ಸಾಗಾಟ ಪ್ರಕರಣಕ್ಕೆ ಸಂಬಂಧಿಸಿದಂತೆ ಕಾಂಗ್ರೆಸ್ ಹಿರಿಯ ಮುಖಂಡ, ಮಾಜಿ ಸಚಿವ ಡಿಕೆ ಶಿವಕುಮಾರ್ ಅವರನ್ನು ಕಳೆದ ನಾಲ್ಕು ದಿನಗಳಿಂದ ತೀವ್ರ ವಿಚಾರಣೆ ಒಳಪಡಿಸಿದ್ದ ಜಾರಿ ನಿರ್ದೇಶನಾಲಯ ಮಂಗಳವಾರ ರಾತ್ರಿ ಬಂಧಿಸಿತ್ತು.

ಡಿಕೆ ಶಿವಕುಮಾರ್ ಬಂಧನ ಇದೀಗ ರಾಜ್ಯ ರಾಜಕೀಯ ವಲಯದಲ್ಲಿ ತಿರುವು ಪಡೆದುಕೊಂಡಿದ್ದು, ರಾಜ್ಯದ ಹಲವೆಡೆ ಪ್ರತಿಭಟನೆಗೆ ಕಾರಣವಾಗಿದೆ. ರಾಮನಗರ, ಮಂಡ್ಯ, ಕೊಪ್ಪಳ, ಸೇರಿದಂತೆ ಕೆಲವೆಡೆ ರಸ್ತೆಯಲ್ಲಿ ಟಯರ್ ಗೆ ಬೆಂಕಿ ಹಚ್ಚಿ ಕಾಂಗ್ರೆಸ್, ಜೆಡಿಎಸ್ ಕಾರ್ಯಕರ್ತರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.

ಇದೊಂದು ರಾಜಕೀಯ ಪ್ರೇರಿತ ಬಂಧನ ಎಂದು ಕಾಂಗ್ರೆಸ್ , ಜೆಡಿಎಸ್ ಆರೋಪಿಸಿದೆ. ಆದರೆ ಇದು ರಾಜಕೀಯ ಪ್ರೇರಿತ ಅಲ್ಲ. ಜಾರಿ ನಿರ್ದೇಶನಾಲಯ ಕಾನೂನು ಪ್ರಕಾರ ಕೆಲಸ ಮಾಡುತ್ತಿದೆ. ಕಾಂಗ್ರೆಸ್ ಪಕ್ಷ ಇದನ್ನು ರಾಜಕೀಯಗೊಳಿಸುತ್ತಿದೆ ಎಂದು ಬಿಜೆಪಿ ತಿರುಗೇಟು ನೀಡಿದೆ.

No Comments

Leave A Comment