Log In
BREAKING NEWS >
ಉಡುಪಿ ಶ್ರೀಕೃಷ್ಣಾಪುರ ಮಠಾಧೀಶರ 4ನೇ ಪರ್ಯಾಯಕ್ಕೆ ಅದ್ದೂರಿಯ ಬಾಳೆ ಮುಹೂರ್ತ.........ರಾಮಮಂದಿರ ನಿರ್ಮಾಣಕ್ಕೆ ಜ.15ರಿಂದ ಧನ ಸಂಗ್ರಹ ಕಾರ್ಯ; ಪೇಜಾವರ ಶ್ರೀ...

ಪುತ್ತೂರು ಪೊಲೀಸ್ ಠಾಣೆಯ ಎದುರಿನಲ್ಲೆ ಹಿಂದೂ ಕಾರ್ಯಕರ್ತನ ಬರ್ಬರ ಹತ್ಯೆ

ಪುತ್ತೂರು:  ಸಂಪ್ಯ ಪೊಲೀಸ್ ಠಾಣೆಯ ಎದುರಿನಲ್ಲೆ ಹಿಂದೂ ಜಾಗರಣ ವೇದಿಕೆಯ ತಾಲೂಕು ಕಾರ್ಯದರ್ಶಿಯನ್ನು ಬರ್ಬರವಾಗಿ ಹತ್ಯೆ ಮಾಡಲಾಗಿದೆ.

ಸಂಪ್ಯ  ಠಾಣೆಯ ಎದುರಿನಲ್ಲಿ ಗಣೇಶೋತ್ಸವ ಕಾರ್ಯಕ್ರಮ ನಡೆಯುತ್ತಿದ್ದ ವೇಳೆಯಲ್ಲಿ ಈ ಹತ್ಯೆ ಮಾಡಲಾಗಿದೆ.

ಕೊಲೆಯಾದವರನ್ನು ಕ್ಷೇತ್ರ ಶಿಕ್ಷಣಾಧಿಕಾರಿ ಕಚೇರಿಯ ನಿವೃತ್ತ ಅಧಿಕಾರಿ ಸಂಪ್ಯ ಸಮೀಪದ ಮೇರ್ಲ ರಮೇಶ್ ಸುವರ್ಣ ರ ಪುತ್ರ ಕಾರ್ತಿಕ್ ಸುವರ್ಣ (27) ಎಂದು ಗುರುತಿಸಲಾಗಿದೆ.

ಸೆ.3 ರ ರಾತ್ರಿ 11;30 ಗಂಟೆಯ ಸುಮಾರಿಗೆ ಗಣೇಶೋತ್ಸವ ಕಾರ್ಯಕ್ರಮ ನಡೆಯುತ್ತಿದ್ದ  ವೇಳೆ ಆರೋಪಿಗಳಾದ ಸಂಪ್ಯದ ಚರಣ್‌ರಾಜ್, ಕಿರಣ್ ಮತ್ತು ವಾಹನ ಚಾಲಕನಾದ ಪ್ರೀತೇಶ್ ಎಂಬವರು ಬಂದು ಕಾರ್ತಿಕ್‌ ಗೆ, ಅವ್ಯಾಚ ಶಬ್ಧಗಳಿಂದ ನಿಂದಿಸಿ ಹರಿತವಾದ ಆಯುಧವೊಂದರಿಂದ  ಕಾರ್ತಿ ಎದೆಯ ಕೆಳಭಾಗಕ್ಕೆ ತಿವಿದಿದ್ದಾರೆ. ಇದರಿಂದ ಅಧಿಕ ರಕ್ತ ಸ್ರಾವವಾಗಿ ಕಾರ್ತಿಕ್‌ ಕುಸಿದು ಬಿದ್ದಿದ್ದಾರೆ.  ಆ ವೇಳೆ ಸಾರ್ವಜನಿಕರು ಸೇರಿದಾಗ ಆರೋಪಿಗಳು  ಕೃತ್ಯಕ್ಕೆ ಉಪಯೋಗಿಸಿದ ಚೂರಿಯೊಂದಿಗೆ  KA 21 Z 234 ನಂಬರ್ ನ  ಕಾರಿನಲ್ಲಿ ಸ್ಥಳದಿಂದ ಪರಾರಿಯಾಗಿದ್ದಾರೆ. ತೀವ್ರ ಗಾಯಗೊಂಡ ಕಾರ್ತಿಕ್ ರನ್ನು ಪುತ್ತೂರಿನ ಆದರ್ಶ ಆಸ್ಪತ್ರೆಗೆ ದಾಖಲಿಸಲಾಯಿತಾದರೂ ಆ ವೇಳೆಗಾಗಲೇ ಮೃತರಾಗಿದ್ದರು.

ಹಳೆ ವೈಷಮ್ಯವೇ  ಕೊಲೆಗೆ ಕಾರಣ ಎಂದು ತಿಳಿದುಬಂದಿದೆ.

ಮೃತನ ಸಂಬಂಧಿ ಕೇಶವ ಸುವರ್ಣ ನೀಡಿದ ದೂರಿನಂತೆ ಪುತ್ತೂರು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಕಲಂ 504,341,302 ಜೊತೆಗೆ 34 ಐಪಿಸಿ ಯಂತೆ ಪ್ರಕರಣ ದಾಖಲಾಗಿದೆ. ಪ್ರಕರಣ‌ದ ಆರೋಪಿಗಳನ್ನು ಪತ್ತೆ ಹಚ್ಚಲು ಪೊಲೀಸರ ತಂಡ ರಚಿಸಲಾಗಿದೆ ಎಂದು ದ.ಕ. ಎಸ್ಪಿ ಲಕ್ಷ್ಮೀಪ್ರಸಾದ್ ತಿಳಿಸಿದ್ದಾರೆ .

No Comments

Leave A Comment