Log In
BREAKING NEWS >
"ನಾಡಿನ ಸಮಸ್ತ ಜನತೆಗೆ ಮಹಾಶಿವರಾತ್ರೆಯ ಶುಭಾಶಯಗಳು"-ನಾಡಿನೆಲ್ಲೆಡೆಯಲ್ಲಿ ಮಹಾಶಿವರಾತ್ರೆಯ ಸ೦ಭ್ರಮ:ಶಿವನ ದೇವಾಲಯಗಳಲ್ಲಿ ಜನಜ೦ಗುಲಿ

ಮಾಜಿ ಟೀಂ ಇಂಡಿಯಾ ನಾಯಕಿ ಮಿಥಾಲಿ ರಾಜ್ ಟಿ20 ಕ್ರಿಕೆಟ್‌ಗೆ ನಿವೃತ್ತಿ!

ಮುಂಬೈ: ಟೀಂ ಇಂಡಿಯಾ ಮಹಿಳಾ ತಂಡದ ಹಿರಿಯ ಆಟಗಾರ್ತಿ ಮಿಥಾಲಿ ರಾಜ್ ಟಿ20 ಅಂತಾರಾಷ್ಟ್ರೀಯ ಕ್ರಿಕೆಟ್ ಗೆ ನಿವೃತ್ತಿ ಘೋಷಿಸಿದ್ದಾರೆ.

2021ರಲ್ಲಿ ಏಕದಿನ ಮಹಿಳಾ ವಿಶ್ವಕಪ್ ಟೂರ್ನಿ ನಡೆಯಲಿದ್ದು ಈ ಹಿನ್ನೆಲೆಯಲ್ಲಿ ಏಕದಿನ ಕ್ರಿಕೆಟ್ ಕುರಿತು ಗಮನ ಹರಿಸುವ ಸಲುವಾಗಿ ಟಿ20 ಕ್ರಿಕೆಟ್ ಗೆ ನಿವೃತ್ತಿ ಘೋಷಿಸಿರುವುದಾಗಿ ಮಿಥಾಲಿ ರಾಜ್ ಹೇಳಿದ್ದಾರೆ.

 

 

ಮಿಥಾಲಿ ರಾಜ್ 32 ಟಿ20 ಪಂದ್ಯಗಳಿಗೆ ಸಾರಥ್ಯ ವಹಿಸಿದ್ದರು. ಇದರ ಜೊತೆಗೆ 2012ರ ಶ್ರೀಲಂಕಾ, 2014ರ ಬಾಂಗ್ಲಾದೇಶ ಹಾಗೂ 2016ರಲ್ಲಿ ಭಾರತದಲ್ಲಿ ನಡೆದ ವಿಶ್ವ ಟಿ20 ಮಹಿಳಾ ವಿಶ್ವಕಪ್ ನಲ್ಲಿ ಭಾರತವನ್ನು ಪ್ರತಿನಿಧಿಸಿದ್ದರು.

ಒಟ್ಟು 88 ಟಿ20 ಪಂದ್ಯಗಳನ್ನಾಡಿರುವ ಮಿಥಾಲಿ ರಾಜ್ 2364 ರನ್ ಗಳಿಸಿದ್ದಾರೆ. ಇದು ಭಾರತೀಯ ಮಹಿಳಾ ಆಟಗಾರ್ತಿ ದಾಖಲಿಸಿದ ಗರಿಷ್ಠ ಮೊತ್ತವಾಗಿದೆ.

No Comments

Leave A Comment