Log In
BREAKING NEWS >
2019ರ ವಿಶ್ವ ಸುಂದರಿ ಪ್ರಕಟ: ಭಾರತದ ಸುಮನ್ ರಾವ್ ದ್ವಿತೀಯ ರನ್ನರ್ ಅಪ್....ಫಾಸ್ಟ್ ಟ್ಯಾಗ್ ಕಡ್ಡಾಯ: ಲಾಸ್ಟ್ ಸ್ಟಾಪ್ ಬದಲಾಯಿಸಿದ ಖಾಸಗಿ ಬಸ್ ಗಳು...

ಮುಂಬೈ; ಕೆಮಿಕಲ್ ತಯಾರಿಕೆ ಕಾರ್ಖಾನೆಯಲ್ಲಿ ಭಾರೀ ಸ್ಫೋಟ, 10 ಮಂದಿ ಸಾವು

ಮುಂಬೈ: ರಾಸಾಯನಿಕ ಉತ್ಪನ್ನ ತಯಾರಿಕಾ ಕಾರ್ಖಾನೆಯಲ್ಲಿ ಸಂಭವಿಸಿದ ಭಾರೀ ಸ್ಫೋಟದಲ್ಲಿ ಸುಮಾರು 20 ಮಂದಿ ಸಾವನ್ನಪ್ಪಿದ್ದಾರೆಂದು ಶಂಕಿಸಲಾಗಿದೆ. 10ಕ್ಕೂ ಅಧಿಕ ಮಂದಿ ಗಾಯಗೊಂಡಿರುವ ಘಟನೆ ಮಹಾರಾಷ್ಟ್ರ ಧುಲೇ ಸಮೀಪದ ಶಿರ್ಪುರ್ ನಲ್ಲಿ ಶನಿವಾರ ಬೆಳಗ್ಗೆ ನಡೆದಿದೆ.

ಸ್ಫೋಟದ ರಭಸಕ್ಕೆ 70ಕ್ಕೂ ಅಧಿಕ ಮಂದಿ ಕಾರ್ಖಾನೆ ಒಳಗಡೆ ಸಿಲುಕಿದ್ದು, ಸ್ಥಳಕ್ಕೆ ಎನ್ ಡಿಆರ್ ಎಫ್ ಮತ್ತು ಅಗ್ನಿಶಾಮಕ ದಳದ ಸಿಬ್ಬಂದಿಗಳು ಆಗಮಿಸಿ ರಕ್ಷಣಾ ಕಾರ್ಯದಲ್ಲಿ ತೊಡಗಿರುವುದಾಗಿ ವರದಿ ತಿಳಿಸಿದೆ.

ಇಂದು ಬೆಳಗ್ಗೆ 9.45ರ ಸುಮಾರಿಗೆ ಕೆಮಿಕಲ್ ಫ್ಯಾಕ್ಟರಿಯೊಳಗೆ ಸರಣಿ ಸಿಲಿಂಡರ್ ಸ್ಫೋಟ ಸಂಭವಿಸಿರುವುದಾಗಿ ಪ್ರಾಥಮಿಕ ವರದಿಯಿಂದ ತಿಳಿದು ಬಂದಿದೆ. ಸ್ಫೋಟದ ತೀವ್ರತೆ ಸುತ್ತಮುತ್ತ ಗ್ರಾಮದ ಜನರಲ್ಲಿ ಭೂಕಂಪನದ ಅನುಭವ ಮೂಡಿಸಿತ್ತು ಎಂದು ವರದಿ ವಿವರಿಸಿದೆ.

ಸ್ಫೋಟದಿಂದಾಗಿ ಇಡೀ ಪ್ರದೇಶ ಕಪ್ಪು ಹೊಗೆಯಿಂದ ಆವರಿಸಿಕೊಂಡಿದೆ. ಈವರೆಗೆ ಎಂಟು ಶವಗಳನ್ನು ಹೊರತೆಗೆಯಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

No Comments

Leave A Comment