Log In
BREAKING NEWS >
ಉಡುಪಿ ಶ್ರೀಲಕ್ಷ್ಮೀವೆ೦ಕಟೇಶ ದೇವಸ್ಥಾನದಲ್ಲಿ ಈ ಬಾರಿ ನಡೆಯ ಬೇಕಾದ ಭಜನಾ ಸಪ್ತಾಹ ಮಹೋತ್ಸವವನ್ನು ಕೋವಿಡ್-19ರ ಕಾರಣದಿ೦ದ ಮು೦ದೂಡಲಾಗಿದ್ದು ಭಜನಾ ಸಪ್ತಾಹ ಮಹೋತ್ಸವವನ್ನು 2021ನೇ ವರುಷದ ಮಾರ್ಚನಲ್ಲಿ ನಡೆಯಲಿದೆ...

ಹಾಸನ: ಪ್ರಿಯಕರನ ಜತೆ ಸೇರಿ ತಂದೆಗೇ ಸುಪಾರಿ ಕೊಟ್ಟು ಕೊಂದ ಪುತ್ರಿ!

ಹಾಸನ: ಪ್ರಿಯಕರನ ಜತೆಗೆ ಸೇರಿ ಮಗಳೊಬ್ಬಳು ತಂದೆಗೇ ಸುಪಾರಿ ಕೊಟ್ಟು ಕೊಂದ ಘಟನೆ ಹಾಸನದಲ್ಲಿ ನಡೆದಿದೆ. ಘಟನೆ ಸಂಬಂಧ ಪುತ್ರಿ, ಪ್ರಿಯಕರ ಸೇರಿ ಮೂವರನ್ನು ಬಂಧಿಸಲಾಗಿದೆ.

ಬಂಧಿತರನ್ನು ವಿದ್ಯಾ, ಚಿದಾನಂದ ಹಾಗೂ ರಘು ಎಂದು ಗುರುತಿಸಿದ್ದು ತಂದೆಯ ಕೊಲೆಗಾಗಿ ವಿದ್ಯಾ ಹದಿನೈದು ಲಕ್ಷ ರು. ಸುಪಾರಿ ನೀಡಿದ್ದಳು.

ಘಟನೆ ವಿವರ

ವಿದ್ಯಾಗೆ ಇದಾಗಲೇ ಮದುವೆಯಾಗಿದ್ದರೂ ಪ್ರಿಯಕರ ಚಿದಾನಂದನೊಂದಿಗೆ ಸಂಪರ್ಕದಲ್ಲಿದ್ದಳು. ಅವನೊಂದಿಗೆ ಓಡಾಡುತ್ತಿರುವುದನ್ನು ಕಂಡ ವಿದ್ಯಾ ತಂದೆ ಮುನಿರಾಜು ಆಕೆಗೆ ಬೈಯ್ದಿದ್ದಾರೆ ಮತ್ತು ಮಗಳ ನಡತೆಯನ್ನು ವಿರೋಧಿಸಿದ್ದಾರೆ.

ಇದರಿಂದ ಕೋಪಗೊಂಡ ವಿದ್ಯಾ ಆ. 23ಕ್ಕೆ ಪ್ರಿಯಕರ ಚಿದಾನಂದ್ ಹಾಗೂ ರಘು ಜತೆ ಸೇರಿ ತಂದೆ ಮುನಿರಾಜುವನ್ನು ಹತ್ಯೆ ಮಾಡಿದ್ದು ಹೇಮಾವತಿ ಹಿನ್ನೀರಿಗೆ ಎಸೆದಿದ್ದಾರೆ.

ಮುನಿರಾಜು ಮೃತದೇಹ ಮಾಲೂರಿನ ಮಣಿಗನಹಳ್ಳಿ ಬಳಿಯ ಹೇಮಾವತಿ ನದಿಯಲ್ಲಿ ಪತ್ತೆಯಾಗಿದ್ದು ಆಕ್ಸ್ ಕೇಬಲ್, ಚಕು ಬಳಸಿ ಅವರನ್ನು ಕೊಲ್ಲಲಾಗಿತ್ತು.ಇನ್ನು ಕೃತ್ಯ ಎಸಗಿದ ವಿದ್ಯಾ ತಾನೇ ಹಿರಿಸಾವೆ ಪೋಲೀಸ ಬಳಿ ತೆರಳಿ ತಂದೆ ಮುನಿರಾಜು ನಾಪತ್ತೆಯಾಗಿದ್ದಾಗಿ ದೂರು ಕೊಟ್ಟಿದ್ದಳು ಶವ ಪತ್ತೆ ಹಚ್ಚಿದ ಪೋಲೀಸರು ವಿದ್ಯಾಳನ್ನು ವಶಕ್ಕೆ ಪಡೆದು ತೀವ್ರ ವಿಚಾರಣೆ ನಡೆಸಿದಾಗ ಸತ್ಯ ಹೊರಬಂದಿದೆ.

ಇದೀಗ ಆಕೆಯ ಹೇಳಿಕೆಯಂತೆ ಆರೋಪಿ ಚಿದಾನಂದ್ ಮತ್ತು ರಘುವನ್ನು ಬಂಧಿಸಿ ಪೋಲೀಸರು ಮುಂದಿನ ಕ್ರಮ ತೆಗೆದುಕೊಂಡಿದ್ದಾರೆ.

No Comments

Leave A Comment