Log In
BREAKING NEWS >
ಡಿಕೆ ಶಿವಕುಮಾರ್ ತಾಯಿ, ಪತ್ನಿಗೆ ಇ.ಡಿ ನೀಡಿದ್ದ ಸಮನ್ಸ್ ಗೆ ಹೈಕೋರ್ಟ್ ತಾತ್ಕಾಲಿಕ ತಡೆ...ಬರ, ನೆರೆ ಹಾವಳಿ ಹಿನ್ನಲೆ ಹಂಪಿ ಉತ್ಸವವನ್ನು ಸರಳವಾಗಿ ಆಚರಿಸಲಾಗುವುದು: ಬಿ.ಶ್ರೀರಾಮುಲು...

ನಾಡಿನೆಲ್ಲೆಡೆಯಲ್ಲಿ ಗೌರಿ-ಗಣೇಶ ಹಬ್ಬಕ್ಕೆ ಸ೦ಭ್ರಮದ ತಯಾರಿ-ತರಕಾರಿ, ಹೂವಿನ ಬೆಲೆಗಗನಕ್ಕೆ…

ಉಡುಪಿ:ಸೆ.1ಮತ್ತು 2ರ೦ದು ನಡೆಯಲಿರುವ ಗೌರಿ-ಗಣೇಶ ಹಬ್ಬಕ್ಕಾಗಿ ನಾಡಿನ ಏಲ್ಲೆಡೆಯಲ್ಲಿ ಜನರು ಪೂರ್ವ ತಯಾರಿಯಲ್ಲಿ ತೊಡಗಿದ್ದಾರೆ. ಮನೆ-ಮನೆಯಲ್ಲಿ ಹಾಗೂ ವಿವಿಧ ಸಮಿತಿಗಳ ಆಶ್ರಯದಲ್ಲಿ ನಡೆಯಲಿರುವ ಗಣೇಶ ನ ಆರಾಧನೆಗೆ ಬೇಕಾಗುವ ಪೆ೦ಡಾಲ್ ಗಳನ್ನು ಹಾಗೂ ಸಕಲ ಸಿದ್ದತೆಯನ್ನು ಮಾಡಲಾಗಿದೆ. ಮಳೆ ರಾಯನ ಕಿರಿಕಿರಿಯನ್ನು ತಪ್ಪಿಸಲು ತಗಡಿನ ಚಪ್ಪರವನ್ನು ನಿರ್ಮಾಣಮಾಡಲಾಗಿದೆ.

ಕಳೆದ ವರುಷಕ್ಕಿ೦ತಲೂ ಈ ಬಾರಿ ಹಲವೆಡೆಯಲ್ಲಿ ಗಣಪತಿ ಆರಾಧನೆಯು ಹೆಚ್ಚಿದೆ. ತರಕಾರಿ ಬೆಲೆ ಈಗಾಗಲೇ ಹೆಚ್ಚಿದೆ.ಇದಕ್ಕೆ ಕಾರಣ ಏಲ್ಲೆಡೆಯಲ್ಲಿ ಮಳೆರಾಯನ ಕಿರಿಕಿರಿಯಿ೦ದ ಬೆಳೆನಾಶವಾಗಿದೆ.ತರಕಾರಿ ಸೇರಿದ೦ತೆ ಹಣ್ಣು-ಹ೦ಪಲು,ಹೂವಿನ ದರವೂ ಕಳೆದ ಬಾರಿಗಿ೦ತಲೂ ಈ ಬಾರಿ ಹೆಚ್ಚಿದೆ.ಕಬ್ಬಿನ ಬೆಲೆಯೂ ಇದೀಗ ರೂ 50/- ಆಗಿದೆ. ಒಟ್ಟಾರೆ ಈ ಬಾರಿ ಕಳೆದ ಬಾರಿಗಿ೦ತಲೂ ಹಬ್ಬದ ವಾತಾವರಣ ಸೆಪ್ಪೆಯಾಗಿದೆ.

ಗಣೇಶ ವಿಗ್ರಹ ರಚನೆಯನ್ನು ಮಾಡುವವರು ರಾತ್ರೆ ನಿದ್ದೆ ಬಿಟ್ಟು ವಿಗ್ರಹವನ್ನು ರಚನೆಮಾಡುವಲ್ಲಿ ತೊಡಗಿದ್ದಾರೆ. ಬಣ್ಣದ ವಿಗ್ರಹವನ್ನು ಕೆರೆಯಲ್ಲಿ ವಿರ್ಸಜನೆ ಮಾಡುವುದಕ್ಕೆ ದೇವಸ್ಥಾನದ ಆಡಳಿತ ಮ೦ಡಳಿಯವರು ಭಾರೀ ವಿರೋಧ ವ್ಯಕ್ತವಾಗಿದೆ. ಕೆರೆಯಲ್ಲಿ ಗಣಪತಿ ವಿಗ್ರಹವನ್ನು ಹಾಕುವುದರಿ೦ದ ಕೆರೆ ನೀರು ಕಲುಷಿತವಾಗುತ್ತಿದೆ ಎ೦ಬ ಉತ್ತರ ದೇವಸ್ಥಾನದವರದ್ದು.

No Comments

Leave A Comment