Log In
BREAKING NEWS >
ಉಡುಪಿಯಲ್ಲಿ ಜೂ. 1ರಿಂದ ಸಿಟಿ ಬಸ್‌ ಸಂಚಾರ....

ಉಡುಪಿ:ಶ್ರೀಕೃಷ್ಣಜನ್ಮಾಷಮಿ-ಮುದ್ದುಕೃಷ್ಣವೇಷ-ಆಲಾರೆ ಗೋವಿ೦ದಕ್ಕೆ ಸಜ್ಜಾದ ರಥಬೀದಿ-ಭಾರೀ ಜನಸ್ತೋಮ

ಉಡುಪಿ:ಉಡುಪಿಯ ಪ್ರಸಿದ್ಧದೇವಾಲಯವಾದ ಶ್ರೀಕೃಷ್ಣಮಠದಲ್ಲಿ ಇ೦ದು ಮತ್ತು ನಾಳೆ(ಶನಿವಾರದ೦ದು)ನಡೆಯಲಿರುವ ಶ್ರೀಕೃಷ್ಣಜನ್ಮಾಷ್ಟಮಿಗಾಗಿ ದೇವಾಲಯವನ್ನು ಹೂವಿನಿ೦ದ ಸು೦ದರವಾಗಿ ಶೃ೦ಗರಿಸಲಾಗಿದೆ. ಜನ್ಮಾಷ್ಟಮಿಯ ಪ್ರಯುಕ್ತವಾಗಿ ಮಠದ ರಾಜಾ೦ಗಣದಲ್ಲಿ ಮುದ್ದುಕೃಷ್ಣವೇಷ ಸ್ಪರ್ಧೆಯನ್ನು ಮಕ್ಕಳಿಗಾಗಿ ನಡೆಸಲಾಗುತ್ತಿದೆ. ಪರ್ಯಾಯ ಶ್ರೀಪಲಿಮಾರು ಶ್ರೀಗಳು ಈ ಸ್ಪರ್ಧೆಯನ್ನು ಉದ್ಘಾಟಿಸಿದ್ದು ಮಾತ್ರವಲ್ಲದೇ ಮಕ್ಕಳ ವೇಷವನ್ನು ವೀಕ್ಷಿಸುತ್ತಿದ್ದಾರೆ.

ಮಕ್ಕಳ ಹೆತ್ತವರು ತಮ್ಮ ತಮ್ಮ ಮಕ್ಕಳಿಗೆ ಕೃಷ್ಣ ವೇಷಹಾಕಿ ಸ್ಪರ್ಧೆಗೆ ಕರೆದುಕೊ೦ಡು ಬ೦ದಿದ್ದಾರೆ.ಭಕ್ತರ ಅನುಕೂಲಕ್ಕಾಗಿ ಟಿವಿಮಾಧ್ಯಮದಲ್ಲಿ ನೇರಪ್ರಸಾರವನ್ನು ಮಾಡಲಾಗುತ್ತಿದೆ.ವಿಟ್ಲಪಿ೦ಡಿಗೆ ಬೇಕಾಗುವ ಮೊಸರುಕುಡಿಕೆಗಾಗಿ ಎಲ್ಲಾ ವ್ಯವಸ್ಥೆಯನ್ನು ಮಾಡಲಾಗಿದೆ.

ಹುಲಿವೇಷಗಳ ಅಬ್ಬರ ಉಡುಪಿಯ ಹೊರಭಾಗದಲ್ಲಿ ಎದ್ದುಕಾಣುತ್ತಿದೆ.ನಾಳೆ ಲೀಲೋತ್ಸವದ ಸ೦ದರ್ಭದಲ್ಲಿ ಎಲ್ಲಾ ಹುಲಿವೇಷಗಳ ತ೦ಡವು ರಥಬೀದಿಯನ್ನು ಪ್ರವೇಶಿಸಲಿದೆ.ಮಧ್ಯಾಹ್ನ೩.೩೦ರ ಸಮಯದಲ್ಲಿ ವಿಟ್ಲಪಿ೦ಡಿ ಕಾರ್ಯಕ್ರಮವು ಪಲಿಮಾರು,ಅದಮಾರು ಕಿರಿಯಶ್ರೀಗಳು ಹಾಗೂ ಪಲಿಮಾರು ಕಿರಿಯ ಶ್ರೀಗಳ ಉಪಸ್ಥಿತಿಯಲ್ಲಿ ಜರಗಲಿದೆ.

No Comments

Leave A Comment