Log In
BREAKING NEWS >
"ನಾಡಿನ ಸಮಸ್ತ ಜನತೆಗೆ ಮಹಾಶಿವರಾತ್ರೆಯ ಶುಭಾಶಯಗಳು"-ನಾಡಿನೆಲ್ಲೆಡೆಯಲ್ಲಿ ಮಹಾಶಿವರಾತ್ರೆಯ ಸ೦ಭ್ರಮ:ಶಿವನ ದೇವಾಲಯಗಳಲ್ಲಿ ಜನಜ೦ಗುಲಿ

ವಿರಾಟ್ ಮಡದಿ ಅನುಷ್ಕಾ ಶರ್ಮಾರ ಕನ್ನಡಕ್ಕೆ ಮಾರುಹೋದ ಕನ್ನಡಿಗರು, ವಿಡಿಯೋ ವೈರಲ್!

ಕನ್ನಡಿಗರಾಗಿದ್ದು ಕನ್ನಡದಲ್ಲೇ ತಮ್ಮ ಬದುಕನ್ನು ಕಟ್ಟಿಕೊಂಡು ಪರಭಾಷೆಗೆ ಹೋದ ತಕ್ಷಣ ಕನ್ನಡವನ್ನು ತೆಗಳುವ ಸಂಸ್ಕೃತಿ ಹೆಚ್ಚಾಗಿದೆ. ಆದರೆ ಬಾಲಿವುಡ್ ನಟಿ ಅನುಷ್ಕಾ ವಿರಾಟ್ ಕೊಹ್ಲಿ ಮಾತ್ರ ಕನ್ನಡದಲ್ಲಿ ಮಾತನಾಡಿದ್ದು ಈ ವಿಡಿಯೋ ಇದೀಗ ವೈರಲ್ ಆಗಿದೆ.

ಸಾಮಾಜಿಕ ಜಾಲತಾಣದಲ್ಲಿ ಋಣಾತ್ಮಕ ಅಂಶವೇ ತುಂಬಿರುವ ಈ ಕಾಲದಲ್ಲಿ ಅನುಷ್ಕಾ ಶರ್ಮಾ ಧನಾತ್ಮಕ ಹರಡುವ ಕೆಲಸದಲ್ಲಿ ತೊಡಗಿದ್ದಾರೆ. ಈ ಸಂಬಂಧ ತಮ್ಮ ಟ್ವೀಟರ್ ಖಾತೆಯಲ್ಲಿನ ಟ್ವೀಟ್ ಗಳನ್ನು ಓದಿದ್ದಾರೆ.

 

 

ಹಲವು ಟ್ವೀಟ್ ಗಳನ್ನು ಓದಿದ ಬಳಿಕ ಅನುಷ್ಕಾ ಶರ್ಮಾ ಕೊನೆಯಲ್ಲಿ ದಟ್ಸ್ ಇಟ್ ಎಂದು ಹೇಳುವ ಬದಲು ಅಷ್ಟೇ(#Ashet) ಎಂದು ಅಚ್ಚ ಕನ್ನಡದಲ್ಲಿ ಹೇಳಿದ್ದಾರೆ. ಈ ವಿಡಿಯೋ ಸದ್ಯ ವೈರಲ್ ಆಗಿದೆ.

ಇನ್ನು ವಿಡಿಯೋ ನೋಡಿದ ಕನ್ನಡಿಗರು ವಿಡಿಯೋವನ್ನು ಶೇರ್ ಮಾಡುವುದರ ಜೊತೆಗೆ ಟ್ವೀಟ್ ಮಾಡಿ ಧನ್ಯವಾದ ಹೇಳುತ್ತಿದ್ದಾರೆ.

No Comments

Leave A Comment