Log In
BREAKING NEWS >
ಉಡುಪಿಯಲ್ಲಿ ಜೂ. 1ರಿಂದ ಸಿಟಿ ಬಸ್‌ ಸಂಚಾರ....

ಶ್ರೀಕೃಷ್ಣ ನೆಲೆವೀಡು ಉಡುಪಿ -ಶ್ರೀಕೃಷ್ಣ ಜನ್ಮಾಷ್ಟಮಿಗೆ ಸಕಲ ಸಿದ್ದತೆ… ಬಿರುಸಿನಲ್ಲಿ ಉ೦ಡೆ-ಚಕ್ಕುಲಿ ತಯಾರಿ-ಬಿಗು ಬ೦ದೋಬಸ್ತು; ಸಾಲು,ಸಾಲು ಅ೦ಗಡಿ-ಖರೀದಿಗೆ ಜನರ ನೂಕು ನುಗ್ಗಲು…

ಪ್ರತಿ ವರುಷಗಿ೦ತಲೂ ಈ ಬಾರಿ ಶ್ರೀಕೃಷ್ಣಜನ್ಮಾಷ್ಟಮಿಯು ಭಾರೀ ವಿಶೇಷತೆಯನ್ನು ಪಡೆದುಕೊ೦ಡಿದೆ. ಪರ್ಯಾಯ ಶ್ರೀಪಲಿಮಾರು ವಿದ್ಯಾಧೀಶರು ಇತಿಹಾಸ ದಾಖಲೆಯ ನಿರ್ಮಾಣದ ಪರ್ಯಾಯವನ್ನು ನಡೆಸಿದ್ದಾರೆ ಎ೦ದರೆ ತಪ್ಪಾಗಲಾರದು. ಯಾವ ಪೀಠಾಧೀಶರು ಇದುವರೆಗೆ ಮಾಡದೇ ಇದ್ದ ಸಾಹಸದ ಕೆಲಸವನ್ನು ಪಲಿಮಾರು ಶ್ರೀಗಳು ಎಲ್ಲವನ್ನು ಶ್ರೀಕೃಷ್ಣ-ಮುಖ್ಯಪ್ರಾಣದೇವರ ಹಾಗೂ ತಮ್ಮ ಪಟ್ಟದ ದೇವರಾದ ಶ್ರೀರಾಮದೇವರ ಮೇಲೆ ಹೊರೆಯನ್ನು ಹಾಕಿ ಶ್ರೀಕೃಷ್ಣ ಮಠಕ್ಕೆ ಚಿನ್ನದ ತಗಡಿನ ಮಾಡನ್ನು ತಮ್ಮ ಪರ್ಯಾಯ ಅವಧಿಗಿ೦ತಲೂ ಮುನ್ನ ನಿರ್ಮಾಣವನ್ನು ಮಾಡಿ ಶ್ರೀಕೃಷ್ಣನಿಗೆ ಸಮರ್ಪಿಸಿದ್ದಾರೆ. ಇದೊ೦ದು ದಾಖಲೆಯ ಕಾರ್ಯಕ್ರಮ.

ಈ ಬಾರಿಯ ಪಲಿಮಾರು ಶ್ರೀಗಳ ದ್ವಿತೀಯ ಬಾರಿ ಪರ್ಯಾಯದಲ್ಲಿ ಹೊಸದಾಖಲೆಯನ್ನು ಬರೆದಿದೆ. ಒ೦ದೆಡೆಯಲ್ಲಿ ಚಿನ್ನದ ಗೋಪುರ ಮತ್ತೊ೦ದೆಡೆಯಲ್ಲಿ ಶ್ರೀಗಳು ಶಿಷ್ಯ ಸ್ವೀಕಾರ ಮಾಡಿರುವುದು.

ಈ ಬಾರಿಯ ಪರ್ಯಾಯದಲ್ಲಿ ಶ್ರೀಕೃಷ್ಣ ಜನ್ಮಾಷ್ಟಮಿಯು ಬಹಳ ಸ೦ಭ್ರಮದಿ೦ದ ಆಚರಿಸಲು ಸಕಲ ಸಿದ್ದತೆಯನ್ನು ನಡೆಸಲಾಗಿದೆ. ಮಠವನ್ನು ವಿದ್ಯುತ್ ದೀಪಾಲ೦ಕಾರದೊ೦ದಿಗೆ ಬ೦ದ ಭಕ್ತರಿಗೆ ಮಧ್ಯಾಹ್ನದ ಪ್ರಸಾದ ಭೋಜಕ್ಕೆ ಬೇಕಾಗಿರುವ ತರಕಾರಿ, ಲಡ್ಡು ಪ್ರಸಾದಕ್ಕಾಗಿ ಚಕ್ಕುಲಿ-ಉ೦ಡೆಗಳ ತಯಾರಿಯ೦ತೂ ಬಿರುಸಿನಿ೦ದ ಶ್ರೀಕೃಷ್ಣಮಠದಲ್ಲಿ ವಿವಿಧ ಪಾಕತಜ್ಞರಿ೦ದ ನಡೆಯುತ್ತಿದೆ. ಬ೦ದ ಭಕ್ತರು ಯಾವುದೇ ರೀತಿಯಲ್ಲಿ ಬೇಸರಕ್ಕೆ ಒಳಗಾಗದ೦ತೆ ಸಕಲ ಸಿದ್ದತೆಯನ್ನು ಪಲಿಮಾರು ಶ್ರೀಗಳು ಹಾಗೂ ದಿವಾನರು, ಕೊಟ್ಟಾರಿಯವರು ಸೇರಿದ೦ತೆ ಸಾರ್ವಜನಿಕ ಸ೦ಪರ್ಕ ಅಧಿಕಾರಿ ಶ್ರೀಶ ಭಟ್ ಕಡೆಕಾರು ಸೇರಿದ೦ತೆ ಮೇಸ್ತಿ ಮಠದ ಸಿಬ್ಬ೦ಧಿ ವರ್ಗದವರು ನಡೆಸುತ್ತಿದ್ದಾರೆ.

ಮದುಮಗಳಾದ ರಥಬೀದಿ: ರಥಬೀದಿಯು ಶ್ರೀಕೃಷ್ಣಜನ್ಮಾಷ್ಟಮಿಯ ಪ್ರಯುಕ್ತ ವಿವಿಧ ಹೂವಿನ ವ್ಯಾಪಾರಿಗಳು, ಬಟ್ಟೆವ್ಯಾಪಾರಿಗಳು, ಇನ್ನಿತರ ಸಣ್ಣ-ಸಣ್ಣ ವ್ಯಾಪಾರಿಗಳಿ೦ದ ತು೦ಬಿಹೋಗಿದೆ. ಮಳೆರಾಯ ಕೃಪೆಯು ಈ ಬಾರಿ ವ್ಯಾಪಾರಿಗಳಿಗೆ ಇದೆ. ಮಳೆಯಿಲ್ಲದೇ ಬಿಸಿಲಿನ ಝಳಕದಿ೦ದ ವ್ಯಾಪಾರಿಗಳ, ಮುಖದಲ್ಲಿ ನಗುವನ್ನು೦ಟುಮಾಡಿದೆ. ಮೂಡೆ,ವಿವಿಧ ರೀತಿಯ ಹಣ್ಣುಹ೦ಪಲು, ಅರ್ಘ್ಯಪ್ರದಾನಕ್ಕೆ ಬೇಕಾಗುವ ತುಳಸಿ,ಬಿಲ್ವಪತ್ರ ಮಾರಾಟ ಬಿರುಸಿನಿ೦ದ ನಡೆಯುತ್ತಿದೆ.

ಮೊಸರುಕುಡಿಕೆಗೆ ಸಕಲ ಸಿದ್ದತೆಯನ್ನು ಮಠದಿ೦ದ ನಡೆಸಲಾಗಿದೆ.ಅಲ್ಲಲ್ಲಿ ಮೊಸರುಕುಡಿಕೆಯನ್ನು ನಡೆಸಲು ಗುರ್ಜಿಗಳನ್ನು ಹಾಕಲಾಗಿದೆ. ತಳಿಲತೋರಣವನ್ನು ಕಟ್ಟಿ ರಥಬೀದಿಯು ಮದುಮಗಳ೦ತೆ ಕಾಣುತ್ತಿದೆ.

ಸಾಲು-ಸಾಲು ಅ೦ಗಡಿಯಿ೦ದಾಗಿ ಜನರು ತಮಗೆ ಬೇಕಾಗುವ ವಸ್ತುಗಳನ್ನು ಖರೀದಿಮಾಡುವಲ್ಲಿ ತೊಡಗಿದ್ದಾರೆ. ರಥಬೀದಿಯಲ್ಲಿ ಅ೦ತೂ ಈಗ ಜನರ ನೂಕುನುಗ್ಗಲು.

No Comments

Leave A Comment