Log In
BREAKING NEWS >
ಅದಮಾರು ಮಠದ ಮು೦ದಿನ ಪರ್ಯಾಯದ ಸ್ವಾಗತ ಕಮಿಟಿಯ ಕಚೇರಿಯನ್ನು ಸೋಮವಾರದ೦ದು ಪರ್ಯಾಯ ಶ್ರೀವಿದ್ಯಾಧೀಶ ತೀರ್ಥಶ್ರೀಪಾದರು ಉದ್ಘಾಟಿಸಿದರು.ಅದಮಾರು ಮಠದ ಕಿರಿಯ ಸ್ವಾಮೀಜಿಗಳಾದ ಶ್ರೀಈಶಪ್ರಿಯ ತೀರ್ಥಶ್ರೀಪಾದರು ಹಾಗೂ ಮಾಜಿ ಸಚಿವರಾದ ಕೆ.ಜಯಪ್ರಕಾಶ್ ಹೆಗ್ಡೆ, ಗೋವಿ೦ದ ರಾಜ್ ಹಾಗೂ ಇತರರು ಹಾಜರಿದ್ದರು. .......ಅಗಸ್ಟ್ 23ಮತ್ತು 24ರ೦ದು ಉಡುಪಿಯ ಶ್ರೀಕೃಷ್ಣಮಠದಲ್ಲಿ ಶ್ರೀಕೃಷ್ಣಜನ್ಮಾಷ್ಟಮಿ ಹಾಗೂ ವಿಟ್ಲಪಿ೦ಡಿ ಕಾರ್ಯಕ್ರಮ ಜರಗಲಿದೆ......

ತುಂಗಭದ್ರಾ ಗೇಟ್ ದುರಸ್ಥಿಗೆ ನಾಲ್ಕು ತಂಡಗಳ ಆಗಮನ

ಕೊಪ್ಪಳ: ತುಂಗಭದ್ರಾ ಆಣೆಕಟ್ಟಿನ ಎಡದಂಡೆ ಮೆಲ್ಮಟ್ಟದ ಒಡೆದಿರುವ ಮುಖ್ಯ ಕಾಲುವೆಯ ಗೇಟ್ ದುರಸ್ತಿಗೆ ಇಂದು ನಾಲ್ಕು ತಂಡಗಳು ಆಗಮಿಸಿವೆ. ಕಿರ್ಲೋಸ್ಕರ್, ಜಿಂದಾಲ್, ನೀರಾವರಿ ತಜ್ಞರ ತಂಡ, ಮತ್ತು ಬೆಳಗಾವಿಯ ಅಕ್ಷತಾ ಅಂಡರ್ ವಾಟರ್ ಸರ್ವಿಸ್ ತಂಡಗಳು ಆಗಮಿಸಿವೆ.

ಮೇಲ್ಮಟ್ಟದ ಗೇಟ್ ಒಳಗೆ ಮುಳುಗು ತಜ್ಞ ಚನ್ನಪ್ಪ ಅಚರಿಂದ ಕಾರ್ಯಾಚರಣೆ ನಡೆಯುತ್ತಿದೆ. ಆಮ್ಲಜನಕ ಪೂರೈಕರ ಸಾಧನವನ್ನು ಅಳವಡಿಸಿಕೊಂಡು ಆಣೆಕಟ್ಟಿನ 50-60 ಅಡಿ ಆಳಕ್ಕೆ ಇಳಿದಿರುವ ಚೆನ್ನಪ್ಪ ಅವರು ಪ್ರವಾಹದ ರಭಸಕ್ಕೆ ತುಂಡಾಗಿರುವ ಕಬ್ಬಿಣದ ಪ್ಲೇಟ್ ಇರುವ ಸ್ಥಳಕ್ಕೆ ಇಳಿದು ಪರಿಶೀಲನೆ ನಡೆಸುತ್ತಿದ್ದಾರೆ.

ಮತ್ತು ನೀರಿನ ತಳಭಾಗದಿಂದ ಮೈಕ್ ಮೂಲಕ ಮೇಲಿರುವ ತಜ್ಞರಿಗೆ ಮಾಹಿತಿಯನ್ನು ನೀಡುತ್ತಿದ್ದಾರೆ. ಚನ್ನಪ್ಪ ಅವರು ನೀಡುವ ಮಾಹಿತಿಯನ್ನು ಆಧರಿಸಿ ಬಳಿಕ ತಂತ್ರಜ್ಞರು ಕಾಲುವೆ ಗೇಟ್ ಅನ್ನು ಪುನರ್ಸ್ಥಾಪಿಸುವ ಕಾರ್ಯವನ್ನು ಕೈಗೊಳ್ಳಿದ್ದಾರೆ ಎಂದು ತಿಳಿದುಬಂದಿದೆ.

No Comments

Leave A Comment