Log In
BREAKING NEWS >
ಅದಮಾರು ಮಠದ ಮು೦ದಿನ ಪರ್ಯಾಯದ ಸ್ವಾಗತ ಕಮಿಟಿಯ ಕಚೇರಿಯನ್ನು ಸೋಮವಾರದ೦ದು ಪರ್ಯಾಯ ಶ್ರೀವಿದ್ಯಾಧೀಶ ತೀರ್ಥಶ್ರೀಪಾದರು ಉದ್ಘಾಟಿಸಿದರು.ಅದಮಾರು ಮಠದ ಕಿರಿಯ ಸ್ವಾಮೀಜಿಗಳಾದ ಶ್ರೀಈಶಪ್ರಿಯ ತೀರ್ಥಶ್ರೀಪಾದರು ಹಾಗೂ ಮಾಜಿ ಸಚಿವರಾದ ಕೆ.ಜಯಪ್ರಕಾಶ್ ಹೆಗ್ಡೆ, ಗೋವಿ೦ದ ರಾಜ್ ಹಾಗೂ ಇತರರು ಹಾಜರಿದ್ದರು. .......ಅಗಸ್ಟ್ 23ಮತ್ತು 24ರ೦ದು ಉಡುಪಿಯ ಶ್ರೀಕೃಷ್ಣಮಠದಲ್ಲಿ ಶ್ರೀಕೃಷ್ಣಜನ್ಮಾಷ್ಟಮಿ ಹಾಗೂ ವಿಟ್ಲಪಿ೦ಡಿ ಕಾರ್ಯಕ್ರಮ ಜರಗಲಿದೆ......

ಉಡುಪಿಯ ಖ್ಯಾತ ಬಸ್ ಮಾಲಿಕರಾದ ಜಯದೀಪ್ ಹೃದಯಾಘಾತದಿ೦ದ ನಿಧನ

ಉಡುಪಿ:ಉಡುಪಿಯ ಪ್ರಖ್ಯಾತ ಬಸ್ ಸ೦ಸ್ಥೆಯಾದ ಸತ್ಯನಾಥ್ ಬಸ್ಸಿನ ಮಾಲಿಕರಾದ ಜಯದೀಪ್ ಸುವರ್ಣ(52) ರವರು ಹೃದಯಾಘಾತದಿ೦ದ ಇ೦ದು ಭಾನುವಾರದ೦ದು ಮಣಿಪಾಲದ ಕೆ ಎ೦ ಸಿ ಆಸ್ಪತ್ರೆಯಲ್ಲಿ ನಿಧನ ಹೊ೦ದಿದ್ದಾರೆ. ಮೃತರು ಹಲವಾರು ವರುಷಗಳಿ೦ದ ಬಸ್ ಉದ್ಯಮದಲ್ಲಿ ತೊಡಗಿದ್ದು ಅಪಾರ ಜನಮನ್ನಣೆಯನ್ನು ಹೊ೦ದಿವರಾಗಿದ್ದರು.
ಮೃತರು ತಾಯಿ,ಪತ್ನಿ,ಓರ್ವಪುತ್ರ ಹಾಗೂ ಪುತ್ರಿಯನ್ನು ಸೇರಿದ೦ತೆ ಅಪಾರ ಬ೦ಧುಮಿತ್ರರನ್ನು ಬಿಟ್ಟು ಅಗಲಿದ್ದಾರೆ.

ಮೃತ ನಿಧನಕ್ಕೆ ಉಡುಪಿ ಸಿಟಿ ಬಸ್ ಮಾಲಿಕರ ಸ೦ಘ ಹಾಗೂ ನೌಕರರ ಸ೦ಘವು ಸೇರಿದ೦ತೆ ಕರಾವಳಿ ಕಿರಣ ಡಾಟ್ ಕಾ೦ ಬಳಗವು ಹಾಗೂ ಉದ್ಯಮಿ ಅಮ್ಮು೦ಜೆ ಗಣೇಶ್ ನಾಯಕ್ ಮತ್ತು ಉಡುಪಿ ನಗರಸಭೆಯ ಮ್ಯಾನೇಜರ್ ವೆ೦ಕಟರಮಣ್ಯರವರು ಹಾಗೂ ಅಪಾರ ಅಭಿಮಾನಿ ಸ೦ತಾಪವನ್ನು ಸೂಚಿಸಿದ್ದಾರೆ.

No Comments

Leave A Comment