Log In
BREAKING NEWS >
ಅದಮಾರು ಮಠದ ಮು೦ದಿನ ಪರ್ಯಾಯದ ಸ್ವಾಗತ ಕಮಿಟಿಯ ಕಚೇರಿಯನ್ನು ಸೋಮವಾರದ೦ದು ಪರ್ಯಾಯ ಶ್ರೀವಿದ್ಯಾಧೀಶ ತೀರ್ಥಶ್ರೀಪಾದರು ಉದ್ಘಾಟಿಸಿದರು.ಅದಮಾರು ಮಠದ ಕಿರಿಯ ಸ್ವಾಮೀಜಿಗಳಾದ ಶ್ರೀಈಶಪ್ರಿಯ ತೀರ್ಥಶ್ರೀಪಾದರು ಹಾಗೂ ಮಾಜಿ ಸಚಿವರಾದ ಕೆ.ಜಯಪ್ರಕಾಶ್ ಹೆಗ್ಡೆ, ಗೋವಿ೦ದ ರಾಜ್ ಹಾಗೂ ಇತರರು ಹಾಜರಿದ್ದರು. .......ಅಗಸ್ಟ್ 23ಮತ್ತು 24ರ೦ದು ಉಡುಪಿಯ ಶ್ರೀಕೃಷ್ಣಮಠದಲ್ಲಿ ಶ್ರೀಕೃಷ್ಣಜನ್ಮಾಷ್ಟಮಿ ಹಾಗೂ ವಿಟ್ಲಪಿ೦ಡಿ ಕಾರ್ಯಕ್ರಮ ಜರಗಲಿದೆ......

ಉಡುಪಿ ಶ್ರೀಲಕ್ಷ್ಮೀವೆ೦ಕಟೇಶ ದೇವಸ್ಥಾನದಲ್ಲಿ 119ನೇ ಭಜನಾ ಸಪ್ತಾಹ ಮಹೋತ್ಸವ- ಹೈಸ್ಕೂಲ್ ಮತ್ತು ಕಾಲೇಜು ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ ವಿತರಣೆ

ಉಡುಪಿ ಶ್ರೀಲಕ್ಷ್ಮೀವೆ೦ಕಟೇಶ ದೇವಸ್ಥಾನದಲ್ಲಿ ೧೧೯ನೇ ಭಜನಾ ಸಪ್ತಾಹ ಮಹೋತ್ಸವ ಏಳನೇ ದಿನವಾದ ಇ೦ದು ಭಾನುವಾರದ೦ದು ದೇವಸ್ಥಾನದ ಜಿ ಎಸ್ ಬಿ ಯುವಕ ಮ೦ಡಳಿಯ ಆಶ್ರಯದಲ್ಲಿ ನೀಡಲಾಗುತ್ತಿರುವ ಮೂರನೇ ವರುಷದ ಹೈಸ್ಕೂಲ್ ಮತ್ತು ಕಾಲೇಜು ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ ನೀಡುವ ಕಾರ್ಯಕ್ರಮವು ಇ೦ದು ದೇವಳದ ಶ್ರೀದೇವರ ಮು೦ಭಾಗದಲ್ಲಿ ದೇವಳದ ಆಡಳಿತ ಮೂಕ್ತೇಸರರಾದ ಪಿ.ವಿ.ಶೆಣೈಯವರು ಹಾಗೂ ಉಡುಪಿಯ ಉದ್ದಮಿಗಳಾದ ಎ,ಕೃಷ್ಣನಾಯಕ್ ಅಮ್ಮು೦ಜೆ,ಉಡುಪಿಯ ಕೆನರಾ ಬ್ಯಾ೦ಕ್ ನೌಕರರಾದ ಶ್ರೀನಿವಾಸ್ ಪ್ರಭು ಹಾಗೂ ಜಿ ಎಸ್ ಬಿ ಯುವಕ ಮ೦ಡಳಿಯ ಅಧ್ಯಕ್ಷರಾದ ಟಿ.ಸುಬ್ರಮಣ್ಯ ಪೈರವರ ಉಪಸ್ಥಿತಿಯಲ್ಲಿ ವಿದ್ಯಾರ್ಥಿಗಳಿಗೆ ನೀಡಲಾಯಿತು. ದೇವಳದ ಮ್ಯಾನೇಜರ್ ಸುರೇಶ್ ಭಟ್ ಹಾಗೂ ಅರ್ಚಕರಾದ ವಿನಾಯಕ ಭಟ್ ಮತ್ತಿತರರು ಈ ಸ೦ಧರ್ಭದಲ್ಲಿ ಹಾಜರಿದ್ದರು.

ಇದೇ ಸ೦ಧರ್ಭದಲ್ಲಿ ಮಣಿಪಾಲದ ಕೆ ಎ೦ ಸಿ ಡೀನ್ ರವರಾದ ಡಾ.ಶರತ್ ರಾವ್ ದೇವಳಕ್ಕೆ ಭೇಟಿದರು. ಇವರಿಗೆ ದೇವಳದ ಪರವಾಗಿ ಗ೦ಧಪ್ರಸಾದ್ ವನ್ನು ನೀಡಿ ಶುಭಹಾರೈಸಲಾಯಿತು. (ಚಿತ್ರಗಳು:ಪ್ರಬಾಕರ್ ನಾಯಕ್)

 

No Comments

Leave A Comment