ರಾಜ್ಯದಲ್ಲಿ ಪ್ರವಾಹ ಪರಿಸ್ಥಿತಿ: ಪೇಜಾವರ ಶ್ರೀಗಳಿಂದ 15 ಲಕ್ಷ ರು. ನೆರವು ಘೋಷಣೆ
ಮೈಸೂರು: ರಾಜ್ಯದ ಪ್ರವಾಹ ಪರಿಸ್ಥಿತಿ ದಿನದಿನಕ್ಕೆ ಬಿಗಡಾಯಿಸುತ್ತಿದೆ, ಜನತೆ ಕಷ್ಟದಲ್ಲಿದೆ. ಇದಕ್ಕಾಗಿ ಮಠದಿಂಡ ಹದಿನೈದು ಲಕ್ಷ ರು. ನೆರವು ನೀಡುವುದಾಗಿ ಉಡುಪಿ ಪೇಜಾವರ ಮಠದ ಶ್ರೀ ವಿಶ್ವೇಶ್ವರತೀರ್ಥ ಸ್ವಾಮೀಜಿ ಘೋಷಿಸಿದ್ದಾರೆ.
ಮೈಸೂರಿನ ಸರಸ್ವತಿಪುರಂನ ಕೃಷ್ಣಧಾಮದಲ್ಲಿ ಸುದ್ದಿಗೋಷ್ಟಿ ನಡೆಸಿ ಮಾತನಾಡಿದ ಸ್ವಾಮೀಜಿ ರಾಜ್ಯದಲ್ಲಿ ನಾನಾ ಕಡೆ ನೆರೆ ಪರಿಸ್ಥಿತಿ ಉಂಟಾಗಿದ್ದು ಜನರು ಸಂಕಷ್ಟದಲ್ಲಿದ್ದಾರೆ. ಹಾಗಾಗಿ ಸಾರ್ವಜನಿಕರು, ಭಕ್ತರು ಅವರ ಕಷ್ಟಗಳಿಗೆ ಸ್ಪಂದಿಸಿ ಎಂದು ಮನವಿ ಮಾಡಿದ್ದಾರೆ.