
ದಾಂಪತ್ಯ ಜೀವನಕ್ಕೆ ತಯಾರಾದ ಬಜರಂಗ್, ಪೋಗಟ್ ಕುಟುಂಬದ ಕುಡಿ ಕೈಹಿಡಿಯಲಿರುವ ವಿಶ್ವ ನಂ.1 ಕುಸ್ತಿಪಟು
ಚಂಡಿಘರ್: ವಿಶ್ವದ ನಂಬರ್ ಒನ್ ಕುಸ್ತಿಪಟು ಬಜರಂಗ್ ಪುನಿಯಾ ಶೀಘ್ರವೇ ವಿವಾಹವಾಗಲಿದ್ದಾರೆ. ಖ್ಯಾತ ಕುಸ್ತಿ ಪಟುಗಳ ಕುಟುಂಬವಾದ ಪೋಗಟ್ ಕುಟುಂಬದ ಕುಡಿ ಸಂಗೀತಾ ಪೋಗಟ್ ಅವರನ್ನು ವರಿಸಲಿದ್ದಾರೆ ಎಂದು ಕುಟುಂಬ ಮೂಲಗಳು ಗುರುವಾರ ತಿಳಿಸಿವೆ.
ಟೋಕಿಯೊದಲ್ಲಿ ನಡೆವ 2020 ರ ಒಲಿಂಪಿಕ್ಸ್ ನಂತರ ವಿವಾಹ ಸಮಾರಂಭ ನಡೆಯುವ ಸಾಧ್ಯತೆ ಇದೆ.
