Log In
BREAKING NEWS >
ಅದಮಾರು ಮಠದ ಮು೦ದಿನ ಪರ್ಯಾಯದ ಸ್ವಾಗತ ಕಮಿಟಿಯ ಕಚೇರಿಯನ್ನು ಸೋಮವಾರದ೦ದು ಪರ್ಯಾಯ ಶ್ರೀವಿದ್ಯಾಧೀಶ ತೀರ್ಥಶ್ರೀಪಾದರು ಉದ್ಘಾಟಿಸಿದರು.ಅದಮಾರು ಮಠದ ಕಿರಿಯ ಸ್ವಾಮೀಜಿಗಳಾದ ಶ್ರೀಈಶಪ್ರಿಯ ತೀರ್ಥಶ್ರೀಪಾದರು ಹಾಗೂ ಮಾಜಿ ಸಚಿವರಾದ ಕೆ.ಜಯಪ್ರಕಾಶ್ ಹೆಗ್ಡೆ, ಗೋವಿ೦ದ ರಾಜ್ ಹಾಗೂ ಇತರರು ಹಾಜರಿದ್ದರು. .......ಅಗಸ್ಟ್ 23ಮತ್ತು 24ರ೦ದು ಉಡುಪಿಯ ಶ್ರೀಕೃಷ್ಣಮಠದಲ್ಲಿ ಶ್ರೀಕೃಷ್ಣಜನ್ಮಾಷ್ಟಮಿ ಹಾಗೂ ವಿಟ್ಲಪಿ೦ಡಿ ಕಾರ್ಯಕ್ರಮ ಜರಗಲಿದೆ......

ವಯನಾಡಿನಿಂದ ಮೂರು ಟ್ರಕ್‍ಗಳಲ್ಲಿ ಸಾಗಿಸುತ್ತಿದ್ದ ಗೋವುಗಳು ಪೊಲೀಸರ ವಶಕ್ಕೆ

ಉಡುಪಿ: ಮೂರು ಟ್ರಕ್‍ಗಳಲ್ಲಿ ಕೇರಳದ ವಯನಾಡಿನಿಂದ ಗೋಶಾಲೆಗೆ ಸಾಗಿಸುತ್ತಿದ್ದ ಜಾನುವಾರುಗಳನ್ನು ಉಡುಪಿ ಜಿಲ್ಲೆ ಕಾಪುವಿನಲ್ಲಿ ಪೊಲೀಸರು ವಶಪಡಿಸಿಕೊಂಡಿದ್ದಾರೆ.

ದಾಖಲೆ ಯಾವುದೂ ಇಲ್ಲದೆ ಅಕ್ರಮ ಗೋವು ಸಾಗಾಟದ ಶಂಕೆಯಲ್ಲಿ ಬೆನ್ನು ಹತ್ತಿದ್ದ ಮಂಗಳೂರು ಪೊಲೀಸರು ಕಾಪು ಠಾಣಾ ವ್ಯಾಪ್ತಿಯಲ್ಲಿ 3 ಟ್ರಕ್‍ನಲ್ಲಿದ್ದ ಜಾನುವಾರುಗಳನ್ನು ವಶ ಪಡಿಸಿಕೊಂಡಿದ್ದಾರೆ.

ಶಿರ್ವದಲ್ಲಿ ಹೊಸದಾಗಿ ಆರಂಭಿಸಿದ ಗೋ ಶಾಲೆಗೆ ಗೋವುಗಳನ್ನು ತರಲಾಗಿದೆ ಎಂದು ಗೋಶಾಲೆ ಮ್ಯಾನೇಜರ್ ಗಿರೀಶ ಅವರು ತಿಳಿಸಿದ್ದಾರೆ. ಪೊಲೀಸರು ಈ ಬಗ್ಗೆ ತನಿಖೆ ನಡೆಸುತ್ತಿದ್ದಾರೆ. ಮೇಲ್ನೋಟಕ್ಕೆ ಅಕ್ರಮ ಸಾಗಾಟದ ರೀತಿ ಕಂಡು ಬಂದಿದ್ದು ಆರ್‍.ಟಿ.ಓ ನಿಯಮ ಉಲ್ಲಂಘನೆ, ಅಕ್ರಮ ಸಾಗಾಟ ಕೇಸ್ ದಾಖಲಿಸಿ ತನಿಖೆ ನಡೆಸುತ್ತಿದ್ದಾರೆ.

ಕೇರಳದಿಂದ ತಂದ ಜಾನುವಾರುಗಳನ್ನು ಗೋವು ಶಾಲೆಗೆ ರವಾನಿಸಲಾಗಿದೆ. ಸಾಗಾಟದ ಸಂದರ್ಭದಲ್ಲಿ ಒಂದು ಗೋವು ಸಾವನಪ್ಪಿರುವುದು ಕೂಡಾ ಪತ್ತೆಯಾಗಿದೆ. ವಿಷಯ ತಿಳಿಯುತ್ತಿದ್ದಂತೆ ಹಿಂದೂಪರ ಸಂಘಟನೆಯ ಕಾರ್ಯಕರ್ತರು ಜಮಾವಣೆಗೊಂಡಿದ್ದರು.

No Comments

Leave A Comment