Log In
BREAKING NEWS >
ಅದಮಾರು ಮಠದ ಮು೦ದಿನ ಪರ್ಯಾಯದ ಸ್ವಾಗತ ಕಮಿಟಿಯ ಕಚೇರಿಯನ್ನು ಸೋಮವಾರದ೦ದು ಪರ್ಯಾಯ ಶ್ರೀವಿದ್ಯಾಧೀಶ ತೀರ್ಥಶ್ರೀಪಾದರು ಉದ್ಘಾಟಿಸಿದರು.ಅದಮಾರು ಮಠದ ಕಿರಿಯ ಸ್ವಾಮೀಜಿಗಳಾದ ಶ್ರೀಈಶಪ್ರಿಯ ತೀರ್ಥಶ್ರೀಪಾದರು ಹಾಗೂ ಮಾಜಿ ಸಚಿವರಾದ ಕೆ.ಜಯಪ್ರಕಾಶ್ ಹೆಗ್ಡೆ, ಗೋವಿ೦ದ ರಾಜ್ ಹಾಗೂ ಇತರರು ಹಾಜರಿದ್ದರು. .......ಅಗಸ್ಟ್ 23ಮತ್ತು 24ರ೦ದು ಉಡುಪಿಯ ಶ್ರೀಕೃಷ್ಣಮಠದಲ್ಲಿ ಶ್ರೀಕೃಷ್ಣಜನ್ಮಾಷ್ಟಮಿ ಹಾಗೂ ವಿಟ್ಲಪಿ೦ಡಿ ಕಾರ್ಯಕ್ರಮ ಜರಗಲಿದೆ......

‘ಬಾಹುಬಲಿ’ ನಟನ ಪತ್ನಿ ನೇಣಿಗೆ ಶರಣು!

ಹೈದರಾಬಾದ್: ರಾಜಮೌಳಿ ಅವರ “ಬಾಹುಬಲಿ”ಯಲ್ಲಿ ಸಣ್ಣ ಪಾತ್ರವೊಂದರಲ್ಲಿ ನಟಿಸಿದ್ದ ಪ್ರಖ್ಯಾತ ತೆಲುಗು ಕಿರುತೆರೆ ಕಲಾವಿದ ಮಧು ಪ್ರಕಾಶ್ ಅವರ ಪತ್ನಿ ನೇಣಿಗೆ ಶರಣಾಗಿದ್ದಾರೆ.

ಮಧು ಪ್ರಕಾಶ್ ಅವರ ಪತ್ನಿ ಭಾರತಿ ಮಂಗಳವಾರ ಹೈದರಾಬಾದ್ ನ ತಮ್ಮ ಮನೆಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಪತಿ ಮಧು ಅವರ ಜೀವನ ಶೈಲಿ ವಿಚಾರವಾಗಿ ಗಂಡ-ಹೆಂಡತಿಯ ನಡುವೆ ಆಗಾಗ ಜಗಳವಾಗುತ್ತಿತ್ತು ಎನ್ನಲಾಗಿದೆ. ಅಲ್ಲದೆ ಪತಿಗೆ ಅಕ್ರಮ ಸಂಬಂಧವಿದ್ದ ಬಗ್ಗೆ ಭಾರತಿ ಶಂಕೆ ವ್ಯಕ್ತಪಡಿಸಿದ್ದರು ಎಂದೂ ಹೇಳಲಾಗಿದೆ.

2015ರಲ್ಲಿ  ಮಧು ಹಾಗೂ ಭಾರತಿ ವಿವಾಹವಾಗಿದ್ದು ಭಾರತಿ ಹೈದರಾಬಾದ್ ಖಾಸಗಿ ಸಂಸ್ಥೆಯೊಂದರಲ್ಲಿ ಕೆಲಸ ಮಾಡುತ್ತಿದ್ದರು. ನಟ ಪ್ರತಿದಿನ ತಡವಾಗಿ ಮನೆಗೆ ಬರುತ್ತಿದ್ದದ್ದು ಪತಿ-ಪತ್ನಿಯರ ಜಗಳಕ್ಕೆ ಪ್ರಮುಖ ಕಾರಣವಾಗಿತ್ತು.

ಮಂಗಳವಾರ ಸಹ ಭಾರತಿ ಪತಿಗೆ ಬೇಗ ಮನೆಗೆ ಬರುವಂತೆ ಒತ್ತಾಯಿಸಿದ್ದಾರೆ. ಬೆಳಿಗ್ಗೆ ಹತ್ತಕ್ಕೆ ಶೂಟಿಂಗ್ ಗೆ ಹೊರಟಿದ್ದ ಮಧು ರಾತ್ರಿ ಏಳರ ಸುಮಾರಿಗೆ ಜಿಮ್ ಮುಗಿಸಿಕೊಂಡು ಮನೆಗೆ ಮರಳುವಷ್ಟರಲ್ಲಿ ಭಾರತಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.ಆತ್ಮಹತ್ಯೆಗೆ ಮುನ್ನ “ತಾನು ನೇಣು ಹಾಕಿಕೊಳ್ಳುತ್ತೇನೆ” ಎಂದು ಪತಿ ಮಧು ಅವರಿಗೆ ಭಾರತಿ ಸಂದೇಶ ರವಾನಿಸಿದ್ದಾರೆ. ಆದರೆ ನಟ ತನ್ನ ಪತ್ನಿ ಮಾತಿಗೆ ಖಂಡಿಸಿ ಉತ್ತರಿಸಿದ್ದಾರೆ.

ತನಿಖೆ ಕೈಗೊಂಡಿರುವ ಪೊಲೀಸರು ಮಧು ಹೇಳಿಕೆಯನ್ನು ದಾಖಲಿಸಿಕೊಂಡಿದ್ದಾರೆ. ಮರಣೋತ್ತರ ಪರೀಕ್ಷೆಗಾಗಿ ಮೃತದೇಹವನ್ನು ಓಸ್ಮಾನಿಯ ಜನರಲ್‌ ಆಸ್ಪತ್ರೆಗೆ ರವಾನಿಸಲಾಗಿದೆ.

No Comments

Leave A Comment