Log In
BREAKING NEWS >
ಭಾರತೀಯ ಜನತಾ ಪಕ್ಷದ ನೂತನ ರಾಷ್ಟ್ರೀಯ ಅಧ್ಯಕ್ಷರಾಗಿ ಜೆ.ಪಿ. ನಡ್ಡಾ ಆಯ್ಕೆ....ಅನಾಮಧೇಯ ವ್ಯಕ್ತಿ ಬ್ಯಾಗ್ ಇಟ್ಟಿರುವ ದೃಶ್ಯ ಸಿಸಿಟಿವಿಯಲ್ಲಿ ಸೆರೆ: ಗೃಹ ಸಚಿವ ಬೊಮ್ಮಾಯಿ....

ಕಲ್ಲತ್ತಿಗಿರಿ; ಭಾರೀ ಮಳೆ, ತುಂಬಿ ಹರಿದ ಜಲಪಾತ; ಭಕ್ತರ ರಕ್ಷಣೆ

ಚಿಕ್ಕಮಗಳೂರು: ಎಡೆಬಿಡದೆ ಸುರಿಯುತ್ತಿರುವ ಮಳೆಯಿಂದಾಗಿ ತರೀಕೆರೆ ತಾಲೂಕಿನ ಕಲ್ಲತ್ತಿಗಿರಿ ಜಲಪಾತದಲ್ಲಿನ ನೀರು ಭಾರೀ ಪ್ರಮಾಣದಲ್ಲಿ ಹರಿದು ಬಂದ ಪರಿಣಾಮ ನೀರು ವೀರಭದ್ರೇಶ್ವರ ದೇವಾಲಯದಲ್ಲಿ ಭಕ್ತರು ಹೊರಬರಲಾರದೆ ಪರದಾಡುವಂತಾಗಿದೆ.

ಭಕ್ತರು ಕಲ್ಲತ್ತಿಗಿರಿ ಜಲಪಾತದ ಒಳಭಾಗದಲ್ಲಿರುವ ವೀರಭದ್ರೇಶ್ವರ ಸ್ವಾಮಿ ದೇವಾಲಯದ ಒಳಭಾಗದಲ್ಲಿದ್ದು, ನೀರು ಪ್ರವಾಹದ ರೀತಿಯಲ್ಲಿ ದೇವಾಲಯದ ಮುಂಭಾಗದಲ್ಲಿ ಹರಿದು ಬರುತ್ತಿದ್ದು, ಇದರಿಂದ ಭಕ್ತರು ಹೊರಬರದಂತಾಗಿದೆ.

 

 

ದೇವಸ್ಥಾನದಲ್ಲಿ ಸಿಲುಕಿದ್ದ ಭಕ್ತಾಧಿಗಳ ರಕ್ಷಣೆ:  ಜಲಪಾತದ ಒಳಭಾಗದಲ್ಲಿರೋ ಕಲ್ಲತ್ತಿಗಿರಿ ವೀರಭದ್ರಶ್ವರ ಸ್ವಾಮಿ ದೇವಾಲಯದಲ್ಲಿ ಸಿಲುಕಿದ್ದ ಭಕ್ತರನ್ನು ಅಗ್ನಿಶಾಮಕ ದಳ ಹಾಗೂ ಪೊಲೀಸ್ ಸಿಬ್ಬಂದಿಗಳು ರಕ್ಷಿಸಿರುವುದಾಗಿ  ವರದಿ ತಿಳಿಸಿದೆ.

No Comments

Leave A Comment