Log In
BREAKING NEWS >
ಭಾರತೀಯ ಜನತಾ ಪಕ್ಷದ ನೂತನ ರಾಷ್ಟ್ರೀಯ ಅಧ್ಯಕ್ಷರಾಗಿ ಜೆ.ಪಿ. ನಡ್ಡಾ ಆಯ್ಕೆ....ಅನಾಮಧೇಯ ವ್ಯಕ್ತಿ ಬ್ಯಾಗ್ ಇಟ್ಟಿರುವ ದೃಶ್ಯ ಸಿಸಿಟಿವಿಯಲ್ಲಿ ಸೆರೆ: ಗೃಹ ಸಚಿವ ಬೊಮ್ಮಾಯಿ....

ಮಂಗಳೂರು ಪೊಲೀಸ್ ಆಯುಕ್ತರಾಗಿ ಡಾ. ಪಿ.ಎಸ್. ಹರ್ಷ ನೇಮಕ

ಮಂಗಳೂರು: ಮಂಗಳೂರಿನ ನೂತನ ಪೊಲೀಸ್‌ ಆಯುಕ್ತರಾಗಿ ಡಾ| ಪಿ.ಎಸ್‌. ಹರ್ಷ ಅವರನ್ನು ರಾಜ್ಯ ಸರಕಾರ ನೇಮಕ ಮಾಡಿದೆ.

ಈ ಮೊದಲು ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮದ ನಿರ್ದೇಶಕರಾಗಿ (ಭದ್ರತೆ ಮತ್ತು ಗುಪ್ತಚರ ವಿಭಾಗ) ಸೇವೆಸಲ್ಲಿಸುತ್ತಿದ್ದರು.

ಡಾ| ಪಿ.ಎಸ್‌. ಹರ್ಷ ಅವರು ಈ ಹಿಂದೆ ಪುತ್ತೂರಿನಲ್ಲಿ ಎಎಸ್‌ಪಿ ಆಗಿ ಕರ್ತವ್ಯ ನಿರ್ವಹಿಸಿದ್ದರು.

ಮಂಗಳೂರು ಪೊಲೀಸ್‌ ಆಯುಕ್ತ ಸಂದೀಪ್‌ ಪಾಟೀಲ್‌ ಬಡ್ತಿ ಪಡೆದು ವರ್ಗಾವಣೆಯಾಗಿ ತೆರಳಿ ನಾಲ್ಕು ದಿನ ಕಳೆದಿದ್ದು, ಅವರಿಂದ ತೆರವಾದ ಸ್ಥಾನಕ್ಕೆ ಡಾ| ಎ. ಸುಬ್ರಹ್ಮಣ್ಯೇಶ್ವರ ರಾವ್‌ ಅವರನ್ನು ನೇಮಕ ಮಾಡಿ ಸರಕಾರ ಆದೇಶ ಹೊರಡಿಸಿದ್ದರೂ ಅವರು ಅಧಿಕಾರ ಸ್ವೀಕರಿಸಿರಲಿಲ್ಲ.

ಸುಬ್ರಹ್ಮಣ್ಯೇಶ್ವರ ರಾವ್‌ ಅವರು ಮಂಗಳೂರು ಪೊಲೀಸ್‌ ಆಯುಕ್ತರಾಗಿ ಅಧಿಕಾರ ವಹಿಸಿಕೊಳ್ಳದ ಹಿನ್ನೆಲೆಯಲ್ಲಿ ಅವರ ಜಾಗಕ್ಕೆ ಇದೀಗ ಡಾ| ಪಿ.ಎಸ್‌. ಹರ್ಷ ಅವರನ್ನು ನೇಮಕ ಮಾಡಿ ಸೋಮವಾರ ಸರಕಾರ ಆದೇಶ ಹೊರಡಿಸಿದೆ.

ಡಾ| ಹರ್ಷ ಅವರು 2004 ನೇ ಸಾಲಿನ ಐಪಿಎಸ್‌ ಅಧಿಕಾರಿಯಾಗಿದ್ದಾರೆ. ಈ ಹಿಂದೆ ಹರ್ಷ ಅವರು ಕರ್ನಾಟಕ ವಾರ್ತಾ ಇಲಾಖೆ ನಿರ್ದೇಶಕರಾಗಿಯೂ ಸೇವೆ ಸಲ್ಲಿಸಿದ್ದರು.

ಡಿಸಿಪಿ ಆಗಿ ಅರುಣಾಂಕ್ಷು ಗಿರಿ 
ಇದೇ ವೇಳೆ ಹನುಮಂತರಾಯ ಅವರ ವರ್ಗಾವಣೆಯಿಂದ ತೆರವಾಗಿದ್ದ ಕಾನೂನು ಮತ್ತು ಸುವ್ಯವಸ್ಥೆ ವಿಭಾಗದ ಡಿಸಿಪಿ ಆಗಿ ಅರುಣಾಂಕ್ಷು ಗಿರಿ ಅವರನ್ನು ನೇಮಕ ಮಾಡಲಾಗಿದೆ. ಅವರು ಇದುವರೆಗೆ ಕಾರ್ಕಳದಲ್ಲಿ ನಕ್ಸಲ್‌ ನಿಗ್ರಹ ದಳದ ಎಸ್‌ಪಿ ಆಗಿದ್ದರು. ಅವರು 2015 ನೇ ವರ್ಷದ ಐಪಿಎಸ್‌ ಅಧಿಕಾರಿ ಆಗಿರುತ್ತಾರೆ.

No Comments

Leave A Comment