Log In
BREAKING NEWS >
ಭಾರತೀಯ ಜನತಾ ಪಕ್ಷದ ನೂತನ ರಾಷ್ಟ್ರೀಯ ಅಧ್ಯಕ್ಷರಾಗಿ ಜೆ.ಪಿ. ನಡ್ಡಾ ಆಯ್ಕೆ....ಅನಾಮಧೇಯ ವ್ಯಕ್ತಿ ಬ್ಯಾಗ್ ಇಟ್ಟಿರುವ ದೃಶ್ಯ ಸಿಸಿಟಿವಿಯಲ್ಲಿ ಸೆರೆ: ಗೃಹ ಸಚಿವ ಬೊಮ್ಮಾಯಿ....

ಥೈಲ್ಯಾಂಡ್ ಓಪನ್ ಟ್ರೋಫಿ ಗೆದ್ದ ಭಾರತದ ಸಾಯಿರಾಜ್‌ – ಚಿರಾಗ್‌ ಶೆಟ್ಟಿ

ಬ್ಯಾಂಕಾಕ್:‌ ಭಾರತದ ಯುವ ಬ್ಯಾಡ್ಮಿಂಟನ್‌ ಜೋಡಿ ಚಿರಾಗ್‌ ಶೆಟ್ಟಿ ಮತ್ತು ಸಾತ್ವಿಕ್‌ ಸಾಯಿರಾಜ್‌ ರೆಡ್ಡಿ ಇದೇ ಮೊದಲ ಬಾರಿಗೆ ಥೈಲ್ಯಾಂಡ್ ಓಪನ್‌ ಬ್ಯಾಡ್ಮಿಂಟನ್‌ ಕೂಟದ ಡಬಲ್ಸ್‌ ಟ್ರೋಫಿ ಗೆದ್ದು ಬೀಗಿದ್ದಾರೆ. ಈ ಸಾಧನೆ ಮಾಡಿದ ಭಾರತದ ಮೊದಲ ಜೋಡಿಯಾಗಿ ಸಾಯಿರಾಜ್‌ – ಚಿರಾಗ್‌ ಮೂಡಿ ಬಂದಿದ್ದಾರೆ.

ರವಿವಾರ ನಡೆದ ಫೈನಲ್‌ ಪಂದ್ಯದಲ್ಲಿ ವಿಶ್ವದ ಮೂರನೇ ಶ್ರೇಯಾಂಕದ ಆಟಗಾರರಾದ ಚೀನಾದ ಲೀ ಜುನ್‌ ಹೂಯಿ ಮತ್ತು ಲಿಯು ಯು ಚೆನ್‌ ಅವರ ಸವಾಲನ್ನು ಸಮರ್ಥವಾಗಿ ಎದುರಿಸಿದರು. 21-19, 18-21, 21-18 ರ ಅಂತರದಿಂದ ಜಯ ಸಾಧಿಸಿದ ಭಾರತದ ಯುವ ಜೋಡಿ ಈ ಋತುವಲ್ಲಿ ಏರಿದ ಮೊದಲ ಫೈನಲ್‌ ನಲ್ಲೇ ಪ್ರಶಸ್ತಿಗೆ ಮುತ್ತಿಕ್ಕಿದರು.

ಆರಂಭದಿಂದಲೂ ಬಹಳಷ್ಟು ಜಿದ್ದಾಜಿದ್ದಿನಿಂದ ಸಾಗಿದ ಫೈನಲ್‌ ಪಂದ್ಯದಲ್ಲಿ ಮೊದಲ ಗೇಮ್ ಅನ್ನು ಭಾರತೀಯ ಜೋಡಿ 21-19 ಅಂತರದಲ್ಲಿ ವಶಪಡಿಸಿಕೊಂಡಿತು. ಆದರೆ ಮುಂದಿನ ಗೇಮ್ ನಲ್ಲಿ ತಿರುಗಿ ಬಿದ್ದ ಚೈನೀಸ್‌ ಜೋಡಿ 21-18 ಅಂತರದಲ್ಲಿ ವಶಪಡಿಸಿಕೊಂಡರು. ನಿರ್ಣಾಯಕ ಮೂರನೇ ಗೇಮ್ ನಲ್ಲಿ ಒಮ್ಮೆಯೂ ಎದುರಾಳಿಗೆ ಮುನ್ನಡೆ ಬಿಟ್ಟುಕೊಡದೆ ಆಡಿದ ಸಾಯಿರಾಜ್‌- ಚಿರಾಗ್‌ 21-18 ಅಂತರದಲ್ಲಿ ಗೆದ್ದು ಥಾಯ್‌ ಅಂಗಳದಲ್ಲಿ ಇತಿಹಾಸ ಬರೆದರು.

No Comments

Leave A Comment