Log In
BREAKING NEWS >
ಭಾರತೀಯ ಜನತಾ ಪಕ್ಷದ ನೂತನ ರಾಷ್ಟ್ರೀಯ ಅಧ್ಯಕ್ಷರಾಗಿ ಜೆ.ಪಿ. ನಡ್ಡಾ ಆಯ್ಕೆ....ಅನಾಮಧೇಯ ವ್ಯಕ್ತಿ ಬ್ಯಾಗ್ ಇಟ್ಟಿರುವ ದೃಶ್ಯ ಸಿಸಿಟಿವಿಯಲ್ಲಿ ಸೆರೆ: ಗೃಹ ಸಚಿವ ಬೊಮ್ಮಾಯಿ....

ರಾಜ್ಯ ಆ್ಯತ್ಲೆಟಿಕ್ಸ್‌: ವಿಜಯ ಕುಮಾರಿ, ರಶ್ಮಿ ಮಿಂಚು

ಬೆಂಗಳೂರು: ಕಳೆದೆರಡು ದಿನಗಳಿಂದ ಉದ್ಯಾನನಗರಿಯಲ್ಲಿ ನಡೆದ ರಾಜ್ಯ ಆ್ಯತ್ಲೆಟಿಕ್ಸ್‌ ಕೂಟಕ್ಕೆ ರವಿವಾರ ತೆರೆಬಿತ್ತು. ಮಹಿಳಾ ವಿಭಾಗದ 800 ಮೀ. ಓಟದಲ್ಲಿ ಸಾಯ್‌ (ಭಾರತೀಯ ಕ್ರೀಡಾ ಪ್ರಾಧಿಕಾರ) ಆ್ಯತ್ಲೀಟ್‌ ವಿಜಯ ಕುಮಾರಿ 2 ನಿಮಿಷ 11.2 ಸೆಕೆಂಡ್ಸ್‌ನಲ್ಲಿ ಗುರಿ ತಲುಪಿ ಚಿನ್ನದ ಪದಕ ಪಡೆದರು.

ವನಿತೆಯರ ಜಾವೆಲಿನ್‌ ತ್ರೋ ಸ್ಪರ್ಧೆಯಲ್ಲಿ ಆಳ್ವಾಸ್‌ನ ಕೆ. ರಶ್ಮಿ 46.37 ಮೀ. ದೂರದ ಸಾಧನೆಯೊಂದಿಗೆ ಚಿನ್ನ ಗೆದ್ದರು. ಕೂಟದ ಮೊದಲ ದಿನವಾದ ಶನಿವಾರ ಒಟ್ಟು ಎರಡು ಕೂಟ ದಾಖಲೆಗಳು ನಿರ್ಮಾಣವಾಗಿದ್ದವು. ಅಂತಿಮ ದಿನದ ಸ್ಪರ್ಧೆಗಳಲ್ಲಿ ಮೂರು ದಾಖಲೆಗಳು ನಿರ್ಮಾಣಗೊಂಡವು.

ಕೂಟದಲ್ಲಿ ಪುರುಷರು ಹಾಗೂ ಮಹಿಳೆಯರು ಸೇರಿದಂತೆ ರಾಜ್ಯದ ವಿವಿಧ ಭಾಗಗಳಿಂದ ಒಟ್ಟಾರೆ 400ಕ್ಕೂ ಹೆಚ್ಚು ಆ್ಯತ್ಲೀಟ್‌ಗಳು ಪಾಲ್ಗೊಂಡಿದ್ದರು.

ಈ ರಾಜ್ಯ ಕೂಟವು ಲಕ್ನೋದಲ್ಲಿ ನಡೆಯಲಿರುವ ರಾಷ್ಟ್ರೀಯ ಅಂತರ್‌ ರಾಜ್ಯ ಹಿರಿಯರ ಆ್ಯತ್ಲೆಟಿಕ್ಸ್‌ ಚಾಂಪಿಯನ್‌ಶಿಪ್‌ಗೆ ಅರ್ಹತಾ ಕೂಟವಾಗಿದೆ. ಇದು ಆ. 27ರಿಂದ ಆ. 30ರ ತನಕ ನಡೆಯಲಿದೆ

ಸಂಶೀರ್‌, ಚಂದ್ರ ಕೂಟ ದಾಖಲೆ
ಕೂಟದ ಮೊದಲ ದಿನ ನಡೆದ ಲಾಂಗ್‌ಜಂಪ್‌ನಲ್ಲಿ ದಕ್ಷಿಣ ಕನ್ನಡ ಜಿಲ್ಲೆಯ ಎಸ್‌.ಇ. ಸಂಶೀರ್‌ ಹೊಸ ಕೂಟ ದಾಖಲೆ ನಿರ್ಮಿಸಿದ್ದರು. ಅವರು ಒಟ್ಟಾರೆ 7.91 ಮೀ. ದೂರಕ್ಕೆ ಜಿಗಿದು ಸ್ವರ್ಣ ಪದಕ ಗೆದ್ದರು. 400 ಮೀ. ಹರ್ಡಲ್ಸ್‌ನಲ್ಲಿ ಪ್ಯೂಷನ್‌ ಆ್ಯತ್ಲೆಟಿಕ್ಸ್‌ನ ಜಗದೀಶಚಂದ್ರ 51.02 ಸೆಕೆಂಡ್ಸ್‌ನಲ್ಲಿ ಗುರಿ ತಲುಪಿ ಕೂಟ ದಾಖಲೆ ನಿರ್ಮಿಸಿದ್ದರು. ಮೊದಲ ದಿನದ ಸ್ಪರ್ಧೆ ಇವರಿಬ್ಬರ ಸಾಧನೆಯಿಂದ ಗಮನ ಸೆಳೆದಿತ್ತು ಎನ್ನುವುದು ವಿಶೇಷ.

No Comments

Leave A Comment