Log In
BREAKING NEWS >
ಭಾರತೀಯ ಜನತಾ ಪಕ್ಷದ ನೂತನ ರಾಷ್ಟ್ರೀಯ ಅಧ್ಯಕ್ಷರಾಗಿ ಜೆ.ಪಿ. ನಡ್ಡಾ ಆಯ್ಕೆ....ಅನಾಮಧೇಯ ವ್ಯಕ್ತಿ ಬ್ಯಾಗ್ ಇಟ್ಟಿರುವ ದೃಶ್ಯ ಸಿಸಿಟಿವಿಯಲ್ಲಿ ಸೆರೆ: ಗೃಹ ಸಚಿವ ಬೊಮ್ಮಾಯಿ....

ಟೆಸ್ಟ್‌ ಕ್ರಿಕೆಟ್‌ ಗೆ ಮೊಹಮ್ಮದ್ ಆಮಿರ್‌ ವಿದಾಯ

ಇಸ್ಲಮಾಬಾದ್:‌ ಪಾಕಿಸ್ಥಾನದ ಎಡಗೈ ವೇಗಿ ಮೊಹಮ್ಮದ್‌ ಆಮೀರ್‌ ಟೆಸ್ಟ್‌ ಕ್ರಿಕೆಟ್‌ ಗೆ ವಿದಾಯ ಹೇಳಿದ್ದಾರೆ. ಆಮೀರ್‌ ಇನ್ನು ಮುಂದೆ ನಿಗದಿತ ಓವರ್‌ ಮಾದರಿಯ ಕ್ರಿಕೆಟ್‌ ನಲ್ಲಿ ಮಾತ್ರ ಅಡಲಿದ್ದಾರೆ.

ಸಾಂಪ್ರದಾಯಿಕ ಕ್ರಿಕೆಟ್‌ ಮಾದರಿಯಲ್ಲಿ ಪಾಕಿಸ್ಥಾನವನ್ನು ಪ್ರತಿನಿಧಿಸಿದ್ದು ನನಗೆ ನಿಜಕ್ಕೂ ಹೆಮ್ಮೆಯ ವಿಷಯ. ಏಕದಿನ ಮತ್ತು ಟಿ – ಟ್ವೆಂಟಿ ಕ್ರಿಕೆಟ್‌ ಗೆ ಹೆಚ್ಚು ಗಮನ ಹರಿಸುವ ಉದ್ದೇಶದಿಂದ ನಾನು ಟೆಸ್ಟ್‌ ಕ್ರಿಕೆಟ್‌ ಅನ್ನು ತೊರೆಯುವ ನಿರ್ಧಾರ ಮಾಡಿದ್ದೇನೆ ಎಂದು ಆಮಿರ್‌ ವಿದಾಯದ ಬಳಿಕ ಹೇಳಿದ್ದಾರೆ.

2009ರಲ್ಲಿ ಶ್ರೀಲಂಕಾ ವಿರುದ್ಧ ಟೆಸ್ಟ್‌ ಪದಾರ್ಪಣೆ ಮಾಡುವಾಗ ಆಮಿರ್‌ ಗೆ 17 ವರ್ಷ. ಆಡಿದ 36 ಪಂದ್ಯಗಳಿಂದ 119 ವಿಕೆಟ್‌ ಪಡೆದಿದ್ದಾರೆ. 27ರ ಹರೆಯದ ಆಮಿರ್‌ ಮುಂದಿನ ವರ್ಷ ನಡೆಯಲಿರುವ ಟಿ ಟ್ವೆಂಟಿ ವಿಶ್ವಕಪ್‌ ಅನ್ನು ಯೋಚನೆಲ್ಲಿರಿಸಿ ವಿದಾಯ ನಿರ್ಧಾರ ಕೈಗೊಂಡಿದ್ದಾರೆ.

No Comments

Leave A Comment