Log In
BREAKING NEWS >
ಭಾರತೀಯ ಜನತಾ ಪಕ್ಷದ ನೂತನ ರಾಷ್ಟ್ರೀಯ ಅಧ್ಯಕ್ಷರಾಗಿ ಜೆ.ಪಿ. ನಡ್ಡಾ ಆಯ್ಕೆ....ಅನಾಮಧೇಯ ವ್ಯಕ್ತಿ ಬ್ಯಾಗ್ ಇಟ್ಟಿರುವ ದೃಶ್ಯ ಸಿಸಿಟಿವಿಯಲ್ಲಿ ಸೆರೆ: ಗೃಹ ಸಚಿವ ಬೊಮ್ಮಾಯಿ....

ಬಂಟ್ವಾಳ: ಭೀಕರ ರಸ್ತೆ ಅಪಘಾತದಲ್ಲಿ ನಾಲ್ವರ ದುರ್ಮರಣ ; ಓರ್ವ ಗಂಭೀರ

ಬಂಟ್ವಾಳ: ಕಾರು ಮತ್ತು ಟ್ಯಾಂಕರ್‌ ನಡುವಿನ ರಸ್ತೆ ಅಪಘಾತದಲ್ಲಿ ಐವರು  ಮೃತಪಟ್ಟ ಭೀಕರ ಘಟನೆ ಬ್ರಹ್ಮರ ಕೂಟ್ಲು ಟೋಲ್‌ ಗೇಟ್‌ ಸಮೀಪ ಶುಕ್ರವಾರ ಮಧ್ಯಾಹ್ನ ನಡೆದಿದೆ. ಅಪಘಾತದಲ್ಲಿ ಮೃತಪಟ್ಟವರನ್ನು ಭಟ್ಟಳದ ಗಾಂಧಿನಗರ ನಿವಾಸಿಗಳೆಂದು ಗುರುತಿಸಲಾಗಿದೆ.

ಮೃತಪಟ್ಟವರ ವಿವರ: ಗೋವಿಂದ (55), ಅವರ ಪತ್ನಿ ಪದ್ಮಾವತಿ (45) ಇವರ ಮಕ್ಕಳಾದ ನಾಗರಾಜ (22) ಮತ್ತು ಗಣೇಶ (28) ಇನ್ನು ಗಾಯಾಳುಗಳಲ್ಲಿ ಶಿವಾನಂದ ಅವರ ಸ್ಥಿತಿ ಗಂಭೀರವಾಗಿರುವುದಾಗಿ ತಿಳಿದುಬಂದಿದೆ. ಇನ್ನು ಶಿವಾನಂದ ಅವರ ಪತ್ನಿ ಜ್ಯೋತಿ ಮತ್ತು ಈಕೆಯ ಮಕ್ಕಳಾದ ಎರಡು ವರ್ಷದ ಯಶ್ವಿನ್ ಹಾಗೂ ಒಂದು ವರ್ಷದ ವರ್ಷ ಗಾಯಗೊಂಡಿದ್ದು ಆಸ್ಪತ್ರೆಗೆ ದಾಖಲುಗೊಂಡಿದ್ದಾರೆ.

ಘಟನೆಯ ವಿವರ:
ಈ ಎರಡು ಕುಟುಂಬಗಳ ಒಟ್ಟು ಎಂಟು ಜನ ಸದಸ್ಯರು ಗುರುವಾರದಂದು ವಿವಿಧ ದೇವಸ್ಥಾನಗಳ ದರ್ಶನಕ್ಕೆಂದು ಬಾಡಿಗೆ ವಾಹನದಲ್ಲಿ ಹೊರಟಿದ್ದರು. ಆ ಪ್ರಕಾರ ನಿನ್ನೆ ಕೊಲ್ಲೂರು, ಶೃಂಗೇರಿ ಮತ್ತು ಹೊರನಾಡು ಕ್ಷೇತ್ರಗಳ ದರ್ಶನವನ್ನು ಮುಗಿಸಿಕೊಂಡು ದರ್ಮಸ್ಥಳದಲ್ಲಿ ಉಳಿದುಕೊಂಡಿದ್ದರು.

ಇಂದು ಬೆಳಿಗ್ಗೆ ಧರ್ಮಸ್ಥಳದಲ್ಲಿ ದೇವರ ದರ್ಶನವನ್ನು ಮುಗಿಸಿಕೊಂಡು ಮಂಗಳೂರು ಮೂಲಕ ಭಟ್ಕಳಕ್ಕೆ ಹೊರಟಿದ್ದರು. ಈ ಸಂದರ್ಭದಲ್ಲಿ ಬಿ.ಸಿ.ರೋಡ್ ದಾಟಿ ಬ್ರಹ್ಮರಕೂಟ್ಲು ಬಳಿ ಬರುವ ಸಂದರ್ಭದಲ್ಲಿ ಕಾರು ಚಾಲಕನ ನಿಯಂತ್ರಣ ಕಳೆದುಕೊಂಡು ಮೊದಲಿಗೆ ಬುಲೆಟ್ ಟ್ಯಾಂಕರ್ ಗೆ ಅಪ್ಪಳಿಸಿ ಬಳಿಕ ರಸ್ತೆ ಬದಿಯ ತಡೆಗೋಡೆಗೆ ಅಪ್ಪಳಿಸಿದ ಪರಿಣಾಮ ಕಾರಿನ ಬಾಗಿಲುಗಳು ತೆರೆದುಕೊಂಡು ಒಳಗಿದ್ದವರು ರಸ್ತೆಗೆ ಎಸೆಯಲ್ಪಟ್ಟ ಕಾರಣ ಇಬ್ಬರು ಸ್ಥಳದಲ್ಲೇ ಮೃತಪಟ್ಟರು.

 

 

 

ಕಾರಿನ ಚಾಲಕ ಅಪಾಯದಿಂದ ಪಾರಾಗಿದ್ದಾನೆ. ಘಟನೆಗೆ ಸಂಬಂಧಿಸಿದಂತೆ ಬಂಟ್ವಾಳ ಸಂಚಾರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

No Comments

Leave A Comment