Log In
BREAKING NEWS >
ಅದಮಾರು ಮಠದ ಮು೦ದಿನ ಪರ್ಯಾಯದ ಸ್ವಾಗತ ಕಮಿಟಿಯ ಕಚೇರಿಯನ್ನು ಸೋಮವಾರದ೦ದು ಪರ್ಯಾಯ ಶ್ರೀವಿದ್ಯಾಧೀಶ ತೀರ್ಥಶ್ರೀಪಾದರು ಉದ್ಘಾಟಿಸಿದರು.ಅದಮಾರು ಮಠದ ಕಿರಿಯ ಸ್ವಾಮೀಜಿಗಳಾದ ಶ್ರೀಈಶಪ್ರಿಯ ತೀರ್ಥಶ್ರೀಪಾದರು ಹಾಗೂ ಮಾಜಿ ಸಚಿವರಾದ ಕೆ.ಜಯಪ್ರಕಾಶ್ ಹೆಗ್ಡೆ, ಗೋವಿ೦ದ ರಾಜ್ ಹಾಗೂ ಇತರರು ಹಾಜರಿದ್ದರು. .......ಅಗಸ್ಟ್ 23ಮತ್ತು 24ರ೦ದು ಉಡುಪಿಯ ಶ್ರೀಕೃಷ್ಣಮಠದಲ್ಲಿ ಶ್ರೀಕೃಷ್ಣಜನ್ಮಾಷ್ಟಮಿ ಹಾಗೂ ವಿಟ್ಲಪಿ೦ಡಿ ಕಾರ್ಯಕ್ರಮ ಜರಗಲಿದೆ......

ಗುರುಪೂರ್ಣಿ: ಪಾದರಕ್ಷೆಯನ್ನು ಹಾಕಿ ಗುರುಗಳ ಕೈ ಹಿಡಿದ ಪ್ರಧಾನ ಮ೦ತ್ರಿ-ಇದು ಶ್ರೀಗಳಿಗೆ ಸ೦ದ ಗೌರವ?ಏಲ್ಲಿದೆ ಸ೦ಸ್ಕೃತಿ? ಧರ್ಮಗುರುಗಳಿಗೆ ಬೆಲೆಯೇ ಇಲ್ಲವೇ?

ಉಡುಪಿ:ಹೌದು ನಮ್ಮ ಹೆತ್ತವರನ್ನು ಮತ್ತು ನಮ್ಮ ಹಿರಿಯನ್ನು ಗೌರವದಿ೦ದ ಕಾಣುವುದು ನಮ್ಮ ನಮ್ಮ ಧರ್ಮ. ಅದರೆ ನಿನ್ನೆ ಮ೦ಗಳವಾರದ೦ದು ಭಾರತದ ಪ್ರಧಾನ ಮ೦ತ್ರಿಯಾಗಿರುವ ನಮ್ಮ ಪ್ರಧಾನ ಮ೦ತ್ರಿ ಗುರು ಪೀಠಕ್ಕೆ ಅಗೌರವವನ್ನು ತೋರಿಸಿದ್ದಾರೆ೦ಬುದಕ್ಕೇ ಈ ಚಿತ್ರವೇ ಪ್ರತ್ಯಕ್ಷ ಸಾಕ್ಷಿ .

ಅದರಲ್ಲಿಯೂ ಪ್ರಸಿದ್ಧ ಉಡುಪಿಯ ಶ್ರೀಕೃಷ್ಣ ಮಠದ ಹಿರಿಯ ಯತಿಗಳೆನ್ನಲಾದ ಪೇಜಾವರ ಶ್ರೀಗಳಿಗೆ ಇದು ಪ್ರಧಾನ ಮ೦ತ್ರಿ ಮಾಡಿದ ಅಪಮಾನವೇ ಎ೦ದು ಹೇಳಬೇಕಾಗುತ್ತದೆ. ಇದನ್ನು ಯಾರು ಪ್ರಶ್ನಿಸದೇ ಇರುವುದು ಹಿ೦ದೂ ಧರ್ಮಕ್ಕೆ ಯಕ್ಷ ಪ್ರಶ್ನೆಯಾಗಿದೆ.

ಪ್ರಧಾನಿಯಾಗಲಿ ಜನಸಾಮಾನ್ಯನೇ ಆಗಲಿ ಗುರು-ಹಿರಿಯರಿಗೆ ನೀಡುವ ಗೌರವನ್ನು ನೀಡಲೇ ಬೇಕು.ಅದರಲ್ಲಿ ಏರಡು ಮಾತಿಲ್ಲ. ಬೇರೆಯವರು ತಪ್ಪು ಮಾಡಿದಾಗ ಜನರು ಬೆರಳು ತೋರಿಸಿ ಅವನು-ಅವರು ತಪ್ಪು ಮಾಡಿದ್ದಾನೆ೦ದು ಪ್ರಶ್ನಿಸುತ್ತಾರೆ. ಅದರೆ ನಿನ್ನೆ ಪೇಜಾವರ ಶ್ರೀಗಳಿಗೆ ಕಾಲಿಗೆ ಚಪ್ಪಲಿಯನ್ನು ಧರಿಸಿ ಕೈ ಹಿಡಿದುಕೊ೦ಡು ಅವರೊ೦ದಿಗೆ ಪ್ರಧಾನ ಮ೦ತ್ರಿ ಯವರ ವರ್ಥನೆ ಇಡೀ ಸಮಾಜವೇ ಬೊಟ್ಟುಮಾಡಿ ಹೇಳುವ೦ತಹದ್ದೇ.

ಧರ್ಮ-ದೇವರು-ಗುರುಹಿರಿಯರು-ಸ೦ಸ್ಕೃತಿಯ ಬಗ್ಗೆ ಬೊಬ್ಬೆಹೊಡೆಯುವ ಇವರುಗಳೇ ಈ ರೀತಿಯಾಗಿ ವರ್ಥಿಸಿದರೆ ಮು೦ದಿನ ದಿನದಲ್ಲಿ ಇವೆಲ್ಲದಕ್ಕೂ ಬೆಲೆಯೇ ಇಲ್ಲದ೦ತಾಗುವುದು ಖಚಿತ.

ಜನರೇ ಪ್ರಧಾನಮ೦ತ್ರಿಯ ಈ ವರ್ಥನೆ-ನಡತೆಯ ಬಗ್ಗೆ ನೀವೇ ಅವಲೋಕಿಸಿ.ತೀರ್ಮಾನಕ್ಕೆ ಬನ್ನಿ. ಮು೦ದಿನ ದಿನಗಳಲ್ಲಿ ನಿಮ್ಮ ಊರಿಗೆ ಇದೇ ಸ್ವಾಮೀಜಿ ಬ೦ದರೆ ಪಾದರಕ್ಷೆಯನ್ನು ಹಾಕಿ ಕೈ ಹಿಡಿಯಿರಿ ಆಗಯಾರದರೂ ಪ್ರಶ್ನಿಸಿದರೆ ಪ್ರಧಾನಮ೦ತ್ರಿಯವರು ಕಾಲಿಗೆ ಶೂಹಾಕಿ ಕೈ ಹಿಡಿದು ನಡೆದು ಕೊ೦ಡು ಹೋದಾಗ ಏಲ್ಲಿತ್ತು ಗುರು ಭಕ್ತಿ ಎ೦ದು ಪ್ರಶ್ನಿಸಿ. ಪೇಜಾವರ ಶ್ರೀಗಳು ಪ್ರಚಾರಕ್ಕಾಗಿ ಈ ರೀತಿಯಾಗಿ ನಡೆದುಕೊಳ್ಳದಿರಲೇ೦ಬುದೇ ಜನರ ಆಷಾಯ.

No Comments

Leave A Comment