Log In
BREAKING NEWS >
ಅದಮಾರು ಮಠದ ಮು೦ದಿನ ಪರ್ಯಾಯದ ಸ್ವಾಗತ ಕಮಿಟಿಯ ಕಚೇರಿಯನ್ನು ಸೋಮವಾರದ೦ದು ಪರ್ಯಾಯ ಶ್ರೀವಿದ್ಯಾಧೀಶ ತೀರ್ಥಶ್ರೀಪಾದರು ಉದ್ಘಾಟಿಸಿದರು.ಅದಮಾರು ಮಠದ ಕಿರಿಯ ಸ್ವಾಮೀಜಿಗಳಾದ ಶ್ರೀಈಶಪ್ರಿಯ ತೀರ್ಥಶ್ರೀಪಾದರು ಹಾಗೂ ಮಾಜಿ ಸಚಿವರಾದ ಕೆ.ಜಯಪ್ರಕಾಶ್ ಹೆಗ್ಡೆ, ಗೋವಿ೦ದ ರಾಜ್ ಹಾಗೂ ಇತರರು ಹಾಜರಿದ್ದರು. .......ಅಗಸ್ಟ್ 23ಮತ್ತು 24ರ೦ದು ಉಡುಪಿಯ ಶ್ರೀಕೃಷ್ಣಮಠದಲ್ಲಿ ಶ್ರೀಕೃಷ್ಣಜನ್ಮಾಷ್ಟಮಿ ಹಾಗೂ ವಿಟ್ಲಪಿ೦ಡಿ ಕಾರ್ಯಕ್ರಮ ಜರಗಲಿದೆ......

ಮುಂಬಯಿಯಲ್ಲಿ ಬಹುಮಹಡಿ ಕಟ್ಟಡ ಕುಸಿತ ; 12 ಸಾವು/ 12 killed in Mumbai building collapse

ಮುಂಬಯಿ: ಇಲ್ಲಿನ ಡೋಂಗ್ರಿಯಲ್ಲಿ ನಾಲ್ಕು ಮಹಡಿಗಳ ಕಟ್ಟಡ ಕುಸಿತ ಸಂಭವಿಸಿದ್ದು ಈ ದುರ್ಘಟನೆಯಲ್ಲಿ ಇದುವರೆಗೆ 12

ಜನ ಮೃತಪಟ್ಟಿದ್ದಾರೆ ಎಂದು ತಿಳಿದುಬಂದಿದೆ. ಕುಸಿದು ಬಿದ್ದಿರುವ ಕಟ್ಟಡದ ಅವಶೇಷಗಳಡಿಯಲ್ಲಿ ಇನ್ನಷ್ಟು ಜನರು ಸಿಲುಕಿರಬಹುದಾದ ಶಂಕೆಯಿದ್ದು ಸಾವಿನ ಸಂಖ್ಯೆ ಇನ್ನಷ್ಟು ಹೆಚ್ಚಾಗುವ ಭೀತಿ ಎದುರಾಗಿದೆ.

ಘಟನೆಯಲ್ಲಿ ಇದುವರೆಗೆ 40ಕ್ಕೂ ಹೆಚ್ಚು ಜನ ಗಾಯಗೊಂಡಿದ್ದು, ಗಾಯಾಳುಗಳನ್ನು ಸ್ಥಳೀಯ ಆಸ್ಪತ್ರೆಗಳಿಗೆ ದಾಖಲಿಸಲಾಗಿದೆ. ರಾಷ್ಟ್ರೀಯ ವಿಪತ್ತು ನಿರ್ವಹಣಾ ದಳದ ಎರಡು ತಂಡಗಳು ಘಟನಾ ಸ್ಥಳದಲ್ಲಿ ರಕ್ಷಣಾ ಕಾರ್ಯದಲ್ಲಿ ನಿರತವಾಗಿವೆ. ದುರ್ಘಟನಾ ಸ್ಥಳಕ್ಕೆ ಅಗ್ನಿಶಾಮಕ ದಳದ ವಾಹನಗಳೂ ಸಹ ದೌಡಾಯಿಸಿವೆ.

ಮಹಾರಾಷ್ಟ್ರ ಗೃಹ ಮತ್ತು ಪ್ರದೇಶಾಭಿವೃದ್ಧಿ ಪ್ರಾಧಿಕಾರಕ್ಕೆ ಸೇರಿದ ಕಟ್ಟಡ ಇದಾಗಿದೆ ಎಂದು ತಿಳಿದುಬಂದಿದೆ. ಡೋಂಗ್ರಿಯಲ್ಲಿರುವ ಅಬ್ದುಲ್ ಹಮೀದ್ ದರ್ಗಾದ ಹಿಂಭಾಗದಲ್ಲಿರುವ ತಾಂಡೇಲ್ ರಸ್ತೆಯಲ್ಲಿದ್ದ ಈ ಕೇಸರಿ ಭಾಯ್ ಹೆಸರಿನ ಕಟ್ಟಡದಲ್ಲಿ 15 ಕುಟುಂಬಗಳು ವಾಸಿಸುತ್ತಿದ್ದವು ಎಂಬ ಮಾಹಿತಿಯೂ ಇದೀಗ ಲಭ್ಯವಾಗಿದೆ.

Twelve persons were killed after a four-storey residential building collapsed in south Mumbai’s congested Dongri area Tuesday, a Maharashtra minister said. 

About 40 to 50 people are feared trapped under the debris, civic officials said.

Twelve people were killed after the ‘Kesarbaug’ building, located in a bustling narrow lane in Tandel Street of Dongri area of south Mumbai, crashed, housing minister Radhakrishna Vikhe Patil said.

The Brihanmumbai Municipal Corporation has opened a shelter at Imamwada Municipal Secondary Girls’ School after the building collapse, a civic official said.

“A team of the National Disaster Response Force is reaching the spot. We are assuming that 10 to 12 families are still under the debris,” Mumbadevi MLA Amin Patel told reporters at the spot.

Scores of locals joined in the effort, forming a human chain to help in removing the debris brick by brick and picking up slabs of concrete to locate those buried.

Meanwhile, Vinod Ghosalkar, chief of the repair board of MHADA, said the building did not belong to the housing body as mentioned by a few locals and a legislator.

Ambulances could not reach the site and had to be parked around 50 metres away.

An eyewitness said the building collapse felt like a quake.

 

No Comments

Leave A Comment