Log In
BREAKING NEWS >
ಉಡುಪಿಯ ಶ್ರೀಕೃಷ್ಣಮಠದಲ್ಲಿ 17-07-2019ರಿ೦ದ 26-09-2019ರವರೆಗೆ ಪ್ರತಿ ನಿತ್ಯ ಸಾಯoಕಾಲ 5ರಿ೦ದ 7ಗoಟೆಯವರೆಗೆ 60ದಿನಗಳ ಕಾಲ ಪರ್ಯoತ ಹರಿಕಥಾ ಜ್ಞಾನ ಯಜ್ಞ ಕಾರ್ಯಕ್ರಮ ನಡೆಯಲಿದೆ.

ಯಕ್ಷಗಾನ ಕಲಾರಂಗ (ರಿ.) ಉಡುಪಿ ವಾರ್ಷಿಕ ಮಹಾಸಭೆ

ಉಡುಪಿ : ಸಂಸ್ಥೆಯ 44ನೇ ವಾರ್ಷಿಕ ಮಹಾಸಭೆಯು ಜುಲೈ 13-2019 ಶನಿವಾರ ಸಂಜೆ 5.00 ಗಂಟೆಗೆ ಪೇಜಾವರ ಮಠದ ಶ್ರೀ ರಾಮ ವಿಠಲ ಸಭಾಭವನದಲ್ಲಿ ಕೆ. ಗಣೇಶ್ ರಾವ್ ಇವರ ಅಧ್ಯಕ್ಷತೆ ಜರಗಿತು.

ಉಪಾಧ್ಯಕ್ಷ ಎಂ. ಗಂಗಾಧರ ರಾವ್ ಸ್ವಾಗತಿಸಿದರು. ಅಗಲಿದ ಸಂಸ್ಥೆಯ ಸದಸ್ಯರು ಮತ್ತು ಕಲಾವಿದರಿಗೆ ಉಪಾಧ್ಯಕ್ಷ ಎಸ್.ವಿ.ಭಟ್ ನುಡಿನಮನ ಸಲ್ಲಿಸಿದರು. ಜತೆಕಾರ್ಯದರ್ಶಿ ನಾರಾಯಣ ಎಂ. ಹೆಗಡೆ ಗತಸಭೆಯ ವರದಿ ವಾಚಿಸಿದರು. ಕಾರ್ಯದರ್ಶಿ ಮುರಲಿ ಕಡೆಕಾರ್ ಕಾರ್ಯದರ್ಶಿ ವರದಿ ವಾಚಿಸಿದರು.

ಕೋಶಾಧಿಕಾರಿ ಮನೋಹರ್ ಕೆ. ಯಕ್ಷಗಾನ ಕಲಾರಂಗ ಹಾಗೂ ಯಕ್ಷನಿಧಿಯ ಪರಿಶೋಧಿತ ಲೆಕ್ಕಪತ್ರವನ್ನೂ ಹಾಗೂ ಪ್ರೊ. ಸದಾಶಿವ ರಾವ್ ವಿದ್ಯಾಪೋಷಕ್‍ನ ಪರಿಶೋಧಿತ ಲೆಕ್ಕಪತ್ರವನ್ನು ಮಂಡಿಸಿದರು. 2019-20ನೇ ಸಾಲಿಗೆ ಸಿ.ಎ ರಾಜಾರಾಮ ಶೆಟ್ಟಿಯವರನ್ನು ಲೆಕ್ಕ ಪರಿಶೋಧಕರನ್ನಾಗಿ ನೇಮಕ ಮಾಡಲಾಯಿತು.

ಈ ಎಲ್ಲ ಕಲಾಪಗಳು ಸದಸ್ಯರ ಸೂಚೆನೆ ಹಾಗೂ ಅನುಮೋದನೆಯೊಂದಿಗೆ ಅಂಗೀಕಾರಗೊಂಡವು. 2019-2020ನೇ ಸಾಲಿನ 25 ಸದಸ್ಯರನ್ನು ಕಾರ್ಯಕಾರೀ ಸಮಿತಿಗೆ ಹಾಗೂ 17 ಸದಸ್ಯರನ್ನು ಆಹ್ವಾನಿತರನ್ನಾಗಿ ಆಯ್ಕೆಮಾಡಲಾಯಿತು.

ಅಧ್ಯಕ್ಷ ಕೆ.ಗಣೇಶ್ ರಾವ್ ಸಂಸ್ಥೆ ಸಮಾಜಮುಖಿಯಾಗಿ ಹಲವು ಕಾರ್ಯಕ್ರಮಗಳನ್ನು ನಡೆಸುತ್ತಿದೆ. ನಾವೆಲ್ಲ ಒಟ್ಟಾಗಿ ಸಂಸ್ಥೆಯ ಯಶಸ್ಸಿಗೆ ಶ್ರಮಿಸೋಣ ಎಂದರು. ಜತೆಕಾರ್ಯದರ್ಶಿ ಹೆಚ್.ಎನ್ ಶೃಂಗೇಶ್ವರ ವಂದಿಸಿದರು.

No Comments

Leave A Comment