Log In
BREAKING NEWS >
ಉಡುಪಿಯ ಶ್ರೀಕೃಷ್ಣಮಠದಲ್ಲಿ 17-07-2019ರಿ೦ದ 26-09-2019ರವರೆಗೆ ಪ್ರತಿ ನಿತ್ಯ ಸಾಯoಕಾಲ 5ರಿ೦ದ 7ಗoಟೆಯವರೆಗೆ 60ದಿನಗಳ ಕಾಲ ಪರ್ಯoತ ಹರಿಕಥಾ ಜ್ಞಾನ ಯಜ್ಞ ಕಾರ್ಯಕ್ರಮ ನಡೆಯಲಿದೆ.

ಶಿರಡಿ ಸಾಯಿಬಾಬಾನ ಮೊರೆ ಹೋದ ಅತೃಪ್ತ ಶಾಸಕರು, ಪ್ರತಿಭಟನೆ ಬಿಸಿ!

ಮಹಾರಾಷ್ಟ್ರ:ಮುಂಬೈನ ಐಶಾರಾಮಿ ಹೋಟೆಲ್ ನಲ್ಲಿ ಠಿಕಾಣಿ ಹೂಡಿದ್ದ ರಾಜ್ಯದ ಅತೃಪ್ತ ಶಾಸಕರು ಶನಿವಾರ ಶಿರಡಿಗೆ ಭೇಟಿ ನೀಡಿದ್ದಾರೆ.

ಇಂದು ಬೆಳಗ್ಗೆ ಎರಡು ವಿಶೇಷ ವಿಮಾನಗಳಲ್ಲಿ ಮುಂಬೈನಿಂದ ಶಿರಡಿಗೆ ಆಗಮಿಸಿ, ಶಿರಡಿ ಸಾಯಿಬಾಬಾನ ದರ್ಶನ ಪಡೆದು ವಿಶೇಷ ಪೂಜೆ ಸಲ್ಲಿಸಿದ್ದಾರೆ. ಏತನ್ಮಧ್ಯೆ ಶಿರಡಿ ಮಾರ್ಗ ಮಧ್ಯೆದಲ್ಲಿ ಯುವ ಕಾಂಗ್ರೆಸ್ ಘಟಕದ ಕಾರ್ಯಕರ್ತರು ಅತೃಪ್ತ ಶಾಸಕರ ವಿರುದ್ಧ ಪ್ರತಿಭಟನೆ ನಡೆಸಿದರು.

ಕರ್ನಾಟಕದ ಕಾಂಗ್ರೆಸ್, ಜೆಡಿಎಸ್ ಅತೃಪ್ತ ಶಾಸಕರಿಗೆ ಶಿರಡಿಸಾಯಿ ಬಾಬಾ ವಾಪಸ್ ಹೋಗುವ ಬುದ್ದಿಕೊಡಲಿ ಎಂಬ ಬೃಹತ್ ಬ್ಯಾನರ್ ಹಾಕಿ ಘೋಷಣೆ ಕೂಗಿದ್ದಾರೆ ಎಂದು ವರದಿ ತಿಳಿಸಿದೆ.

 

ಒಂದೆಡೆ ರಾಜ್ಯದಲ್ಲಿ ಡಿಕೆ ಶಿವಕುಮಾರ್, ಡಿಸಿಎಂ ಪರಮೇಶ್ವರ್, ದಿನೇಶ್ ಗುಂಡೂರಾವ್ ಅತೃಪ್ತ ಶಾಸಕ ಎಂಟಿಬಿ ನಾಗರಾಜ್ ಅವರ ಮನವೊಲಿಸುವ ಕೆಲಸದಲ್ಲಿ ನಿರತರಾಗಿದ್ದಾರೆ. ಅಲ್ಲದೇ ಅತೃಪ್ತ ಶಾಸಕ ಸುಧಾಕರ್ ಅವರ ಮನವೊಲಿಸುವ ಕಸರತ್ತು ಮುಂದುವರಿಸಿದ್ದಾರೆ.

No Comments

Leave A Comment