Log In
BREAKING NEWS >
ಅಯೋಧ್ಯೆ ಪ್ರಕರಣ: ಸುನ್ನಿ ವಕ್ಫ್ ಬೋರ್ಡ್ ನಿರ್ಧಾರಕ್ಕೆ ಮುಸ್ಲಿಂ ಅರ್ಜಿದಾರರ ವಿರೋಧ!....

ಬಿಡುಗಡೆಯಾದ ನಾಲ್ಕು ವಾರಕ್ಕೆ 250 ಕೋಟಿ ಕ್ಲಬ್ ಸೇರಿದ ‘ಕಬೀರ್ ಸಿಂಗ್ ‘

ಮುಂಬೈ:  ಶಾಯಿದ್ ಕಪೂರ್ ಅಭಿನಯದ ‘ಕಬೀರ್ ಸಿಂಗ್ ‘ ಹಿಂದಿ ಚಿತ್ರ ಯಶಸ್ವಿಯಾಗಿ ಪ್ರದರ್ಶನಗೊಳ್ಳುತ್ತಿದ್ದು, ಬಿಡುಗಡೆಯಾದ ನಾಲ್ಕು ವಾರಗಳಲ್ಲಿ 250  ಕೋಟಿ ರೂಪಾಯಿ ಕಲೆಕ್ಷನ್ ಮಾಡುವ ಮೂಲಕ ಈ ವರ್ಷದ ಅತಿ ಹೆಚ್ಚು ಲಾಭ ಮಾಡಿದ ಚಿತ್ರ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ.

ಕಬೀರ್ ಸಿಂಗ್ ಚಿತ್ರ ಒಟ್ಟಾರೇ 252. 14 ಕೋಟಿ ಕಲೆಕ್ಷನ್ ಮಾಡುವ ಮೂಲಕ 250 ಕೋಟಿ ಕ್ಲಬ್ ಸೇರಿದೆ. ಶಾಯಿದ್ ಕಪೂರ್ ಅಭಿಯನದ ಈ ಚಿತ್ರ ಬಿಡುಗಡೆಯಾದ ಮೊದಲ ದಿನವೇ  20.21  ಕೋಟಿ ಕಲೆಕ್ಷನ್ ಮಾಡಿತ್ತು. ಭಾರತೀಯ ಚಿತ್ರೋದ್ಯಮ ವಿಶ್ಲೇಷಕ ತರಣ್ ಆದರ್ಶ್ ಟ್ವೀಟರ್ ನಲ್ಲಿ  ಕಬೀರ್ ಸಿಂಗ್ ಬಾಕ್ಸ್ ಆಫೀಸ್  ಕಲೆಕ್ಷನ್ ಬಗ್ಗೆ ಮಾಹಿತಿ ಹಂಚಿಕೊಂಡಿದ್ದಾರೆ.

ಇತ್ತೀಚಿಗೆ ಬಿಡುಗಡೆಯಾದ ‘ಸೂಪರ್ 30’  ಅರ್ಟಿಕಲ್ 15 ಚಿತ್ರಗಳ ತೀವ್ರ ಪೈಪೋಟಿಯ ನಡುವೆಯೂ ಕಬೀರ್ ಸಿಂಗ್ ಚಿತ್ರ ಉತ್ತಮ ಆದಾಯ ಮಾಡಿದೆ. ಈ ಸಿನಿಮಾ 200 ಕೋಟಿ ಕ್ಲಬ್ ಸೇರಿರುವುದಕ್ಕೆ ಶಾಯಿದ್ ಕಪೂರ್ ಅಭಿಮಾನಿಗಳಿಗೆ ಕೃತಜ್ಞತೆ ಸಲ್ಲಿಸಿದ್ದಾರೆ.

ಕಬೀರ್ ಸಿಂಗ್ ತೆಲುಗಿನ ಅರ್ಜುನ್ ರೆಡ್ಡಿ ಸಿನಿಮಾದ ರಿಮೇಕ್ ಆಗಿದೆ. ಮೂಲ ಚಿತ್ರದಲ್ಲಿ ವಿಜಯ್ ದೇವರಕೊಂಡ ಹಾಗೂ ಶಾಲಿನಿ ಪಾಂಡೆ ಅಭಿನಯಿಸಿದ್ದಾರೆ. ಸಂದೀಪ್ ರೆಡ್ಡಿ ವಂಗಾ ನಿರ್ದೇಶನದ ಈ ಚಿತ್ರ ಮುಂಗೋಪಿ ಸರ್ಜನ್  ತನ್ನ ಪ್ರೇಯಸಿಯನ್ನು ಮದುವೆಯಾಗಲು ಸಾಧ್ಯವಾಗದಿದ್ದಾಗ ಮದ್ಯ, ಮಾದಕ ವ್ಯಸನಿಯಾಗಿ ಬದುಕನ್ನು ಹಾಳು ಮಾಡಿಕೊಳ್ಳುವುದು ಸಾರಾಂಶವಾಗಿದೆ. ಜೂನ್ 21 ರಂದು ಈ ಚಿತ್ರ ಬಿಡುಗಡೆಯಾಗಿತ್ತು.

No Comments

Leave A Comment