Log In
BREAKING NEWS >
ಉಡುಪಿಯ ಶ್ರೀಕೃಷ್ಣಮಠದಲ್ಲಿ 17-07-2019ರಿ೦ದ 26-09-2019ರವರೆಗೆ ಪ್ರತಿ ನಿತ್ಯ ಸಾಯoಕಾಲ 5ರಿ೦ದ 7ಗoಟೆಯವರೆಗೆ 60ದಿನಗಳ ಕಾಲ ಪರ್ಯoತ ಹರಿಕಥಾ ಜ್ಞಾನ ಯಜ್ಞ ಕಾರ್ಯಕ್ರಮ ನಡೆಯಲಿದೆ.

ಸ್ಪೀಕರ್‌ ವಿರುದ್ಧ ಮತ್ತೆ ಐವರು ಅತೃಪ್ತ ಶಾಸಕರು ಸುಪ್ರೀಂಗೆ- ರಾಜೀನಾಮೆ ಅಂಗೀಕರಿಸುವಂತೆ ಸ್ಪೀಕರ್‌ಗೆ ನಿರ್ದೇಶಿಸಿ

ನವದೆಹಲಿ: ರಾಜ್ಯ ರಾಜಕೀಯದ ಪ್ರಹಸನ ಮುಂದುವರಿದಿದೆ. 10 ಮಂದಿ ಮಂದಿ ಅತೃಪ್ತ ಶಾಸಕರ ಜೊತೆಗೆ ಮತ್ತೆ ಐವರು ಸೇರ್ಪಡೆಯಾಗಿದ್ದಾರೆ. ಸುಪ್ರೀಂಕೋರ್ಟ್ ಮೆಟ್ಟಿಲೇರಿದ್ದ 10 ಮಂದಿ ಶಾಸಕರ ಜೊತೆಗೆ ತಮ್ಮನ್ನೂ ಕೂಡ ಪರಿಗಣಿಸುವಂತೆ ಐವರು ಶಾಸಕರು ಅರ್ಜಿ ಸಲ್ಲಿಸಿದ್ದಾರೆ.

ತಮ್ಮ ರಾಜಿನಾಮೆ ಕ್ರಮಬದದವಾಗಿದ್ದರೂ ಸ್ಪೀಕರ್ ಅಂಗೀಕರಿಸುತ್ತಿಲ್ಲ ಎಂದು ಆರೋಪಿಸಿರುವ ಐವರು ಅತೃಪ್ತ ಶಾಸಕರು, ತಡ ಮಾಡದೇ ತಮ್ಮ ರಾಜಿನಾಮೆಯನ್ನು ಅಂಗೀಕರಿಸು ಸುಪ್ರೀಂಗೆ ಮನವಿ ಸಲ್ಲಿಸಿದ್ದಾರೆ. ಶಿವಾಜಿನಗರ ಶಾಸಕ ರೋಷನ್ ಬೇಗ್, ಚಿಕ್ಕಬಳ್ಳಾಪುರ ಶಾಸಕ ಡಾ.ಕೆ.ಸುಧಾಕರ್, ಹೊಸಕೋಟೆ ಎಂಟಿಬಿ ನಾಗರಾಜ್, ರಾಜರಾಜೇಶ್ವರಿ ನಗರ ಶಾಸಕ ಮುನಿರತ್ನ, ವಿಜಯಪುರ ಶಾಸಕ ಆನಂದ್ ಸಿಂಗ್ ಸುಪ್ರೀಂಕೋರ್ಟ್ ಮೆಟ್ಟಿಲೇರಿದ್ದಾರೆ.

 

ರಾಜೀನಾಮೆ ನೀಡಿದರೂ ಬೇಕೆಂದೇ ವಿಳಂಬ ಮಾಡುತ್ತಿದ್ದಾರೆ ಮಾಡಲಾಗುತ್ತಿದೆ. ರಾಜೀನಾಮೆ ಹಿಂಪಡೆಯುವಂತೆ ಸ್ಪೀಕರ್ ಒತ್ತಡ ಹೇರುತ್ತಿದ್ದಾರೆ ಎಂದು ಅಫಿಡವಿಟ್ ನಲ್ಲಿ ಸ್ಪೀಕರ್ ವಿರುದ್ಧ ನೇರ ಆರೋಪ ಮಾಡಲಾಗಿದೆ.

ರಾಜೀನಾಮೆ ನೀಡಲು ಸರ್ಕಾರದ ದುರಾಡಳಿತ, ಭ್ರಷ್ಟಾಚಾರಗಳೇ ಕಾರಣ. ಇದೇ ಕಾರಣಕ್ಕಾಗಿ ಉಳಿದವರು ರಾಜೀನಾಮೆ ನೀಡಿದ್ದಾರೆ ಎಂದು  ದಾಖಲೆ ಸಹಿತ ಸರ್ಕಾರದ ವಿರುದ್ಧ ಅಫಿಡವಿಟ್ ಸಲ್ಲಿಕೆ ಮಾಡಿದ್ದಾರೆ.

No Comments

Leave A Comment