Log In
BREAKING NEWS >
ಅಯೋಧ್ಯೆ ಪ್ರಕರಣ: ಸುನ್ನಿ ವಕ್ಫ್ ಬೋರ್ಡ್ ನಿರ್ಧಾರಕ್ಕೆ ಮುಸ್ಲಿಂ ಅರ್ಜಿದಾರರ ವಿರೋಧ!....

ದ.ಕ., ಉಡುಪಿ: ವಿವಿಧ ಅಧಿಕಾರಿಗಳ ವರ್ಗ

ಉಡುಪಿ/ ಮಂಗಳೂರು: ಉಡುಪಿ ಮತ್ತು ದಕ್ಷಿಣ ಕನ್ನಡ ಜಿಲ್ಲಾ ವ್ಯಾಪ್ತಿಯಲ್ಲಿ ವಿವಿಧ ಅಧಿಕಾರಿಗಳನ್ನು ವರ್ಗಾಯಿಸಲಾಗಿದೆ.
ಸುಳ್ಯ ತಾಲೂಕು ಪಂಚಾಯತ್‌ ಇಒ ಮಧುಕುಮಾರ್‌ ಅವರನ್ನು ಉಡುಪಿ ಜಿಲ್ಲಾ ಪಂಚಾಯತ್‌ ಯೋಜನಾ ನಿರ್ದೇಶಕರನ್ನಾಗಿ, ಉಡುಪಿ ಜಿಲ್ಲಾ ಪಂಚಾಯತ್‌ ಉಪಕಾರ್ಯದರ್ಶಿ ನಾಗೇಶ್‌ ರಾಯ್ಕರ್‌ ಅವರನ್ನು ಕಾರವಾರ ಜಿಲ್ಲಾ ಪಂಚಾಯತ್‌ ಉಪಕಾರ್ಯದರ್ಶಿಯಾಗಿ ವರ್ಗಾಯಿಸಲಾಗಿದೆ.

ಕುಂದಾಪುರ ತಾಲೂಕು ಪಂಚಾಯತ್‌ ಇಒ ಪೆಡೆಕರ್‌ ಅವರನ್ನು ಹಾಸನ ಜಿ.ಪಂ. ಯೋಜನಾ ನಿರ್ದೇಶಕರಾಗಿ, ಕಾರ್ಕಳ ಇಒ ಮೇ| ಹರ್ಷ ಅವರನ್ನು ಹಳಿಯಾಳ ತಾ.ಪಂ. ಇಒ ಆಗಿ, ಜಿ.ಪಂ. ಸಹಾಯಕ ಯೋಜನಾಧಿಕಾರಿ ಭಾರತಿಯವರಿಗೆ ಬೈಂದೂರು ತಾಲೂಕು ಪಂಚಾಯತ್‌ ಇಒ ಆಗಿ ವರ್ಗಾವಣೆಯಾಗಿದೆ.

ಕೆಲವೇ ಗಂಟೆಗಳಲ್ಲಿ ಪೊಲೀಸ್‌ ವರ್ಗಾವಣೆ ರದ್ದು
ಬೆಂಗಳೂರು: ರಾಜ್ಯದ ವಿವಿಧ ಭಾಗಗಳಲ್ಲಿ ಕಾರ್ಯನಿರ್ವಹಿಸುತ್ತಿದ್ದ 21 ಡಿವೈಎಸ್ಪಿ ಹಾಗೂ 110 ಇನ್‌ಸ್ಪೆಕ್ಟರ್‌ಗಳನ್ನು ವರ್ಗಾವಣೆಗೊಳಿಸಿ ಶುಕ್ರವಾರ ಅಪರಾಹ್ನ ಆದೇಶ ಹೊರಡಿಸಿದ್ದ ಪೊಲೀಸ್‌ ಇಲಾಖೆ, ಕೆಲವೇ ಗಂಟೆಗಳಲ್ಲಿ ಈ ಆದೇಶವನ್ನು ರದ್ದುಪಡಿಸಿತು.

ರಾಜ್ಯದಲ್ಲಿನ ಪ್ರಸಕ್ತ ರಾಜಕೀಯ ಬೆಳವಣಿಗೆಗಳ ಹಿನ್ನೆಲೆಯಲ್ಲಿ ಆಡಳಿತಾತ್ಮಕ ನಿರ್ಧಾರಗಳನ್ನು ಕೈಗೊಳ್ಳುವಂತಿಲ್ಲ ಎಂದು ರಾಜ್ಯಪಾಲರು ರಾಜ್ಯ ಸರಕಾರದ ಮುಖ್ಯ ಕಾರ್ಯದರ್ಶಿಗೆ ಸೂಚನೆ ನೀಡಿದ್ದರು. ಈ ಹಿನ್ನೆಲೆಯಲ್ಲಿ ಡಿವೈಎಸ್‌ಪಿ ಹಾಗೂ ಇನ್‌ಸ್ಪೆಕ್ಟರ್‌ಗಳ ವರ್ಗಾವಣೆ ಆದೇಶ ರದ್ದುಪಡಿಸಿ ರಾಜ್ಯ ಪೊಲೀಸ್‌ ಮಹಾನಿರ್ದೇಶಕಿ ನೀಲಮಣಿ ಎನ್‌. ರಾಜು ಅವರು ಹೊಸ ಆದೇಶ ಹೊರಡಿಸಿದರು.

ಪೊಲೀಸ್‌ ಮಹಾ ನಿರ್ದೇಶಕರು ಮೊದಲು ಹೊರಡಿಸಿದ್ದ ವರ್ಗಾವಣೆ ಆದೇಶದಲ್ಲಿ ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಯ ಪೊಲೀಸ್‌ ಅಧಿಕಾರಿಗಳೂ ಸೇರಿದ್ದರು. ಮಂಗಳೂರು ಪೊಲೀಸ್‌ ಕಮಿಷನರೆಟ್‌ ವ್ಯಾಪ್ತಿಯ ಎಸಿಪಿ ರಾಮರಾವ್‌ ಕೆ. ಅವರನ್ನು ಬಳ್ಳಾರಿಗೆ ಮತ್ತು ಎಸಿಪಿ ಕೋದಂಡರಾಮ ಅವರನ್ನು ಮಂಗಳೂರು ನಗರ ದ. ಉಪ ವಿಭಾಗಕ್ಕೆ ವರ್ಗಾಯಿಸಲಾಗಿತ್ತು.

No Comments

Leave A Comment