Log In
BREAKING NEWS >
ಅಯೋಧ್ಯೆ ಪ್ರಕರಣ: ಸುನ್ನಿ ವಕ್ಫ್ ಬೋರ್ಡ್ ನಿರ್ಧಾರಕ್ಕೆ ಮುಸ್ಲಿಂ ಅರ್ಜಿದಾರರ ವಿರೋಧ!....

6 ತಾಸು ಚರ್ಚೆ; ಡಿಕೆ ಶಿವಕುಮಾರ್ ಮನವೊಲಿಕೆಗೆ ಬಗ್ಗದ ಎಂಟಿಬಿ ನಾಗರಾಜ್!

ಬೆಂಗಳೂರು:ರಾಜ್ಯ ರಾಜಕೀಯ ಬೆಳವಣಿಗೆಯಲ್ಲಿ ಅತೃಪ್ತ ಶಾಸಕ ಎಂಟಿಬಿ ನಾಗರಾಜ್ ಮನೆಗೆ ಕಾಂಗ್ರೆಸ್ ಮುಖಂಡ ಡಿಕೆ ಶಿವಕುಮಾರ್ ಶನಿವಾರ ಮುಂಜಾನೆ ದಿಢೀರ್ ಭೇಟಿ ನೀಡಿ ಮನವೊಲಿಸುವ ಪ್ರಯತ್ನ ನಡೆಸಿದ್ದಾರೆ.

ಡಿಕೆಶಿ ಸುಮಾರು ಆರು ಗಂಟೆಗಳ ಕಾಲ ಎಂಬಿಟಿ ನಾಗರಾಜ್ ಜೊತೆ ನಡೆಸಿದ ಸಂಧಾನ ಮಾತುಕತೆ ವಿಫಲವಾಗಿದೆ ಎಂದು ವರದಿ ತಿಳಿಸಿದೆ.

ಬೆಳಗಿನ ಜಾವ 5ಗಂಟೆಯಿಂದ ಎಂಟಿಬಿ ಜೊತೆ ಸುದೀರ್ಘ ಚರ್ಚೆ ನಡೆಸಿದರೂ ಪ್ರಯೋಜನವಾಗಿಲ್ಲ. ಈ ಸಂದರ್ಭದಲ್ಲಿ ಉಪಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್ ಕೂಡಾ ಹಾಜರಿದ್ದರು.

ಶತಾಯಗತಾಯ ಅತೃಪ್ತ ಶಾಸಕರ ಮನವೊಲಿಕೆಗೆ ಕಾಂಗ್ರೆಸ್ ಮುಖಂಡರು ಮುಂದಾಗಿದ್ದಾರೆ. ಆದರೆ ಯಾವುದೇ ಕಾರಣಕ್ಕೂ ರಾಜೀನಾಮೆ ವಾಪಸ್ ಪಡೆಯುವುದಿಲ್ಲ ಎಂದು ಅತೃಪ್ತ ಶಾಸಕರು ಪಟ್ಟು ಹಿಡಿಯುವ ಮೂಲಕ ಒಗ್ಗಟ್ಟು ಪ್ರದರ್ಶಿಸಿದ್ದಾರೆ.

No Comments

Leave A Comment