Log In
BREAKING NEWS >
ಡಿಕೆ ಶಿವಕುಮಾರ್ ತಾಯಿ, ಪತ್ನಿಗೆ ಇ.ಡಿ ನೀಡಿದ್ದ ಸಮನ್ಸ್ ಗೆ ಹೈಕೋರ್ಟ್ ತಾತ್ಕಾಲಿಕ ತಡೆ...ಬರ, ನೆರೆ ಹಾವಳಿ ಹಿನ್ನಲೆ ಹಂಪಿ ಉತ್ಸವವನ್ನು ಸರಳವಾಗಿ ಆಚರಿಸಲಾಗುವುದು: ಬಿ.ಶ್ರೀರಾಮುಲು...

24 ಲಕ್ಷ ಪಡೆದು ಪ್ರದರ್ಶನ ನೀಡದ ಸೋನಾಕ್ಷಿ: ಮನೆ ಬಾಗಿಲು ತಟ್ಟಿದ ಪೊಲೀಸರು

ಮುಂಬೈ:  24 ಲಕ್ಷ ರೂಪಾಯಿ ಪಡೆದು ಪ್ರದರ್ಶನ ನೀಡದ ಬಾಲಿವುಡ್ ಖ್ಯಾತ ನಟಿ ಸೋನಾಕ್ಷಿ ಸಿನ್ಹಾ ವಿರುದ್ಧ ವಂಚನೆ ಪ್ರಕರಣ ದಾಖಲಾಗಿದ್ದು, ಉತ್ತರ ಪ್ರದೇಶ ಪೊಲೀಸರು , ಸೋನಾಕ್ಷಿ ಸಿನ್ಹಾ ಅವರ ಮನೆ ಬಾಗಿಲು ತಟ್ಟಿದ್ದಾರೆ. ಆದರೆ, ಸೋನಾಕ್ಷಿ ಸಿನ್ಹಾ ಸಿಕ್ಕಿಲ್ಲ.

ಕಳೆದ ವರ್ಷ  ಸೆಪ್ಟೆಂಬರ್ 28 ರಂದು ಆಯೋಜಿಸಲಾಗಿದ್ದ ಕಾರ್ಯಕ್ರಮದಲ್ಲಿ ಪ್ರದರ್ಶನ ನೀಡಲು ಸೋನಾಕ್ಷಿ ಸಿನ್ಹಾ ಮುಂಗಡವಾಗಿ 24 ಲಕ್ಷ ರೂ. ಪಡೆದಿದ್ದು ಬಳಿಕ ಪ್ರದರ್ಶನವೂ ನೀಡಿಲ್ಲ, ಪಡೆದಿರುವ ಹಣವನ್ನು ಮರುಪಾವತಿಸಿಲ್ಲ ಎಂಬ ಆರೋಪವಿದೆ.

 

ಈ ಸಂಬಂಧ ಫೆಬ್ರವರಿ ತಿಂಗಳಲ್ಲಿ ಸೋನಾಕ್ಷಿ ಸಿನ್ಹಾ ಹಾಗೂ ಇತರ ನಾಲ್ವರ ವಿರುದ್ಧ ಪ್ರಕರಣ ದಾಖಲಾಗಿತ್ತು. ಐಪಿಸಿ ಸೆಕ್ಷನ್ 420 (ವಂಚನೆ )ಹಾಗೂ 406 ರ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿತ್ತು.

ಈ ಬಗ್ಗೆ ಟ್ವೀಟರ್ ನಲ್ಲಿ ಪ್ರತಿಕ್ರಿಯಿಸಿರುವ ಸೋನಾಕ್ಷಿ ಸಿನ್ಹಾ, ನಿರ್ಲಜ್ಜರ ಮನುಷ್ಯರ ಹೇಳಿಕೆಗಳನ್ನು ಪ್ರಸಾರ ಮಾಡದಂತೆ ಮಾಧ್ಯಮಗಳನ್ನು ವಿನಂತಿಸಿಕೊಳ್ಳುತ್ತೇನೆ. ಕಾರ್ಯಕ್ರಮ ಆಯೋಜಕರು ನನ್ನ ವರ್ಚಸ್ಸನ್ನು ಹಾಳು ಮಾಡಲು ಪ್ರಯತ್ನಿಸುತ್ತಿದ್ದಾರೆ. ಪ್ರಾಮಾಣಿಕ ರೀತಿಯಲ್ಲಿ ತನಿಖೆಗೆ ಸಹಕಾರ ನೀಡುವುದಾಗಿ ತಿಳಿಸಿದ್ದಾರೆ.

No Comments

Leave A Comment